ಪೆಟ್ರೋಲ್, ಡೀಸೆಲ್ ಸತತ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಈಗ ಇನ್ನೊಂದು ಶಾಕ್ ನೀಡಲಾಗಿದೆ. ವಾಹನಗಳಿಗೆ ಬಳಸಲು ಗ್ಯಾಸ್ ಸಿಲಿಂಡರ್ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ದರ ಲೀಟರ್ ಗೆ 2.50ರೂ.ಗೆ ಏರಿಕೆ ಮಾಡಲಾಗಿದೆ.
ಏಪ್ರಿಲ್ 4ರಿಂದಲೇ ನೂತನ ದರ ಜಾರಿಗೊಳಿಸಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಆದೇಶಿಸಿದೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ ೮೦ ಪೈಸೆ ಏರಿಕೆ ಮಾಡಿದ ಬೆನ್ನಲ್ಲೇ ಆಟೋ, ಕಾರುಗಳಿಗೆ ಸಾಮಾನ್ಯವಾಗಿ ಬಳಸುವ ಗ್ಯಾಸ್ ಸಿಲಿಂಡರ್ ದರ ಹೆಚ್ಚಿಸಲಾಗಿದೆ.
ಕಳೆದ ಒಂದು ತಿಂಗಳಲ್ಲಿ ವಾಹನಗಳಿಗೆ ಬಳಸುವ ಗ್ಯಾಸ್ ಸಿಲಿಂಡರ್ ದರವನ್ನು ೭ ಬಾರಿ ಹೆಚ್ಚಿಸಲಾಗಿದೆ. ಅಂದರೆ ಒಟ್ಟಾರೆ ಕೆಜಿಗೆ ೬.೫೦ ರೂ.ಗೆ ಏರಿಸಿದಂತಾಗಿದೆ.