ರಾಜ್ಯದಲ್ಲಿ ಕರೋನ ಎರಡನೇ ಅಲೆ ಎಲ್ಲೆಡೆ ಕಡಿಮೆಯಾದ ಹಿನ್ನೆಲೇ ರಾಜ್ಯ ಸರ್ಕಾರ ಸೋಮವಾದಿಂದ ಎಲ್ಲಾ ಜಿಲ್ಲೆಗಳಿಗೂ ಹೆಚ್ಚು ಕಡಿಮೆ ಎಲ್ಲಾ ನಿರ್ಬಂಧಗಳನ್ನು ತೆರವುಗಿಳಿಸಿ ಸಡಿಲಿಕೆ ನೀಡಿದೆ. ಸಡಿಲಿಕೆ ನೀಡಿದ್ದಾರೆ ಎಂದು ನಿಯಮ ಪಾಲಿಸದೆ ಇದ್ದರೆ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕರೋನ ಸಂಕಷ್ಟಕ್ಕೆ ಈಡಾಗಿರುವ ಒಂದು ಸಾವಿರ ಆಟೋ ಚಾಲಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಉಚಿತ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕಳೆದ 18 ತಿಂಗಳಿನಿಂದ ಕಾಡುತ್ತಿರುವ ಕೊರೊನಾ ಸಂದರ್ಭದಲ್ಲಿ ಪದ್ಮನಾಭನಗರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಮತ್ತು ಹೋಂ ಐಸೋಲೇಷನ್ ನಲ್ಲಿ ಇರುವವರಿಗೆ ಆಹಾರ, ಔಷಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ ಎಂದರು.
ಕಳೆದ 18 ತಿಂಗಳಿಂದ ಒಂದು ಮತ್ತು ಎರಡನೇ ಅಲೆಯ ಹಾವಳಿಯಿಂದ ಹಂತ ಹಂತವಾಗಿ ಹಲವು ಬಾರಿ ಲಾಕ್ಡೌನ್ ಮಾಡಬೇಕಾಯಿತು. ತಜ್ಞರು 3ನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈಗಷ್ಟೇ ಅನ್ಲಾಕ್ ಆಗುತ್ತಿದ್ದು, ಜನರು ಎಚ್ಚರದಿಂದ ಇರಬೇಕು ಎಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಆತಂಕ ವ್ಯಕ್ತಪಡಿಸಿದರು.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಹೀಗಾಗಿ ರಾಜ್ಯದ ಜನತೆ ಮೈಮರೆಯುವಂತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಈಗಾಗಲೇ ಜಯದೇವ ಆಸ್ಪತ್ರೆಯ ಹೃದ್ರೋಗ ಡಾ. ಮಂಜುನಾಥ್ ಆವರು, ಎರಡನೇ ಅಲೆ ಬಂದು ಹೋಗಿದೆ, ಸಾವು ನೋವುಗಳಾಗಿವೇ, ಹೆಚ್ಚೆಚ್ಚು ಸೋಂಕು ಹರಿಡುವಿಕೆಯಾಗಿದೆ, ಈಗ ಕರೋನ ಕಡಿಮೆ ಆಯ್ತು ಎಂದು ಯಾರು ತಿಳಿಯಬಾರದು ಡಿಸೆಂಬರ್ ವರೆಗೂ ಕರೋನದಿಂದ ಎಚ್ಚರಿಕೆಯಿಂದಿರಬೇಕು. ನಾವು ಗುಂಪು ಸೇರುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಪ್ರಕರಣಗಳು ಇನ್ನೂ ಕಡಿಮೆಯಾದರು ಮುನ್ನೆಚ್ಚರಿಕೆಯಿಂದ ಇರಬೇಕು ಮತ್ತು ಪ್ರತಿ ದಿನ ಮಾಸ್ಕ್ ಕಡ್ಡಾಯವಾಗಿ ಹಾಕಲೇಬೇಕು. ಮಾಸ್ಕ್ ಹಾಕುವುದು ನಮ್ಮ ದಿನಚರಿಯೇ ಆಗಬೇಕಿದೆ ಎಂದು ಎಚ್ಚರಿಸಿದ್ದಾರೆ.