ಮೈಸೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಹಿಂದೂಗಳಿಗೆ ನೀಡಿರುವ ಮೀಸಲಾತಿಗಳಿಗೆ ಕಂಟಕ ಎದುರಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಎಲಚಿಗೆರೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಹಿಂದೂಗಳಿಗೆ ನೀಡಿರುವ ಮೀಸಲಾತಿಗಳನ್ನು ಕಸಿದು ಮುಸ್ಲಿಮರಿಗೆ ನೀಡುತ್ತಾರೆ ಎಂದು ಹೇಳಿದ್ದಾರೆ.

ಎಲ್ಲಾದರೂ ಕೇಸರಿ ಬಾವುಟ ನೋಡಿದರೆ ಸುರಕ್ಷತೆಯ ಭಾವ ಮೂಡುತ್ತದೆ. ಆದರೆ ಸಿದ್ದರಾಮಯ್ಯ ಕೇಸರಿ ಟೋಪಿ ಕಂಡರೂ ಅದನ್ನು ಕಿತ್ತು ಹಾಕುತ್ತಾರೆ. ಇತ್ತ ಡಿಕೆಶಿ ಶಿವನ ಬೆಟ್ಟವನ್ನು ಏಸು ಬೆಟ್ಟ ಮಾಡೋಕೆ ಹೊರಟಿದ್ರು. ಇವರೆಲ್ಲ ಸೇರಿ ಸರ್ಕಾರ ಮಾಡಿದರೆ ರಾಜ್ಯದಲ್ಲಿ ಲಾಡೆನ್ ಮುಲ್ಲಾ ನೇತೃತ್ವದ ಸರ್ಕಾರ ಬರೋದು ಗ್ಯಾರಂಟಿ ಎಂದಿದ್ದಾರೆ.
ಲಿಂಗಾಯತ ಸಮುದಾಯದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷಮೆಯಾಚಿಸಿದ ಬಗ್ಗೆಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕ್ಷಮೆ ಕೇಳಿದ್ದು ಬೆಕ್ಕು ಸನ್ಯಾಸ ಸ್ವೀಕರಿಸಿದಂತೆ ಎಂದು ಹೇಳಿದ್ದಾರೆ