
ಇಂದಿನ ಮುಂಗಾರು ಅಧಿವೇಶನದಲ್ಲಿ (Monsoon session) ಸಿಎಂ ಸಿದ್ದರಾಮಯ್ಯ (Cm Siddaramaiah) ಬೆಂಗಳೂರು ಕಾಲ್ತುಳಿತ ದುರಂತಕ್ಕೆ (Bengaluru stamped case) ಸಂಬಂಧಪಟ್ಟಂತೆ ಮಾತನಾಡುವ ವೇಳೆ ಸ್ವಾರಸ್ಯಕರ ಚರ್ಚೆ ನಡೆದಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Cm Siddaramaiah) ಮಾತನ್ನಾಡುವಾಗ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ನಾನು ಯಾವತ್ತು ಕ್ರಿಕೆಟ್ ಆಡಿಲ್ಲ, ಒಮ್ಮೊಮ್ಮೆ ಜಗಳ ಮಾಡಿ ಬ್ಯಾಟ್ ತೆಗೆದುಕೊಳ್ತಿದ್ದೆ, ಕೊನೆಗೆ ಔಟ್ ಆಗಿ ಬಿಡ್ತಿದ್ದೆ. ನಾನು ಕಬ್ಬಡ್ಡಿ ಆಡ್ತಿದ್ದೆ, ಸಕಲೇಶಪುರದ ಒಬ್ಬ ವಿಶ್ವನಾಥ್ ಅಂತ ಇದ್ದ. ಅವನು ಒಮ್ಮೆ ಕಬಡ್ಡಿ ಆಡುವಾಗ ಮೈಮೇಲೆ ಬಿದ್ದಿದ್ದರಿಂದ ನನ್ನ ಮೂಳೆ ಮುರಿತ ಆಗಿಬಿಡ್ತು ಎಂದು ಸಿಎಂ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನನಗೆ ಓಡಾಡೋಕೆ ಆಗ್ತಿರಲಿಲ್ಲ, ಬಳಿಕ ಬಾಂಬೆ ಡಾಕ್ಟರ್ ಒಬ್ಬರು ಅದನ್ನು ಹೇಗೋ ಸರಿ ಮಾಡಿದ್ದರು. ಕಳೆದ 2005ರಲ್ಲಿ ಈ ಘಟನೆ ಆಗಿದ್ದು, ಆಗಲೇ ನನ್ನ ಜೆಡಿಎಸ್ ನಿಂದ ಹೊರ ಹಾಕಿದ್ರು. ಸುಮ್ಮನೆ ಜ್ಞಾಪಕ ಮಾಡ್ಕೊಳ್ತಾ ಇದ್ದೆ..ಹುಬ್ಬಳ್ಳಿಯಲ್ಲಿ ಅಹಿಂದಾ ಸಮಾವೇಶ ಆಯ್ತು, ಆಗ ಕುಂಟುತ್ತಲೆ ಹೋಗಿದ್ದೆ ಎಂದಿದ್ದಾರೆ.
ಹೀಗೆ ತಾವು ಕಬ್ಬಡ್ಡಿ ಆಡಿದ ದಿನಗಳನ್ನು ಸಿಎಂ ಸಿದ್ದರಾಮಯ್ಯ ನೆನಪು ಮಾಡಿಕೊಳ್ಳುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ.












