ಹುಬ್ಬಳ್ಳಿ : ಬಿಜೆಪಿಯಲ್ಲಿ ಈ ಬಾರಿಯ ಹಿರಿಯ ನಾಯಕರಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊಕ್ ನೀಡಿದ ಬಳಿಕ ಅಲ್ಲೋಲ ಕಲ್ಲೋಲವೇ ಉಂಟಾಗಿದೆ. ಟಿಕೆಟ್ಗಾಗಿ ಪಟ್ಟು ಹಿಡಿದಿರುವ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ವರಿಷ್ಠರ ಮನೆ ಬಾಗಿಲು ಬಡಿಯುವಂತಾಗಿದೆ. ಆದರೂ ಸಹ ಮೂರನೇ ಪಟ್ಟಿಯಲ್ಲಿ ಶೆಟ್ಟರ್ಗೆ ಬಿಜೆಪಿ ಹೈಕಮಾಂಡ್ ಯಾವುದೇ ಕ್ಷೇತ್ರ ಘೋಷಣೆ ಮಾಡಿಲ್ಲ.
ಇಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ತಮ್ಮ ಬೆಂಬಲಿಗರ ಜೊತೆಯಲ್ಲಿ ಸಭೆ ನಡೆಸಿದ್ದು ಮುಂದಿನ ನಡೆ ಕುರಿತಂತೆ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ಇಂದು ಸಂಜೆಯವರೆಗೆ ಹೈಕಮಾಂಡ್ ಉತ್ತರಕ್ಕಾಗಿ ಕಾದು ಬಳಿಕ ಮುಂದಿನ ಹೆಜ್ಜೆ ಇಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇನ್ನು ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಶೆಟ್ಟರ್, ಆರು ಭಾರಿ ಭಾರೀ ಬಹುಮತದೊಂದಿದೆ ಗೆದ್ದಿದ್ದ ನನಗೆ ಬಿಜೆಪಿಯಲ್ಲಿ ಇಂತಹ ಸ್ಥಿತಿ ಬರಬಾರದಿತ್ತು. ಸಚಿವನಾಗಿ ರಾಜ್ಯದ ಸಿಎಂ ಆಗಿ ನಾನು ಕೆಲಸ ಮಾಡಿದ್ದೇನೆ. ಆದರೆ ನನಗಿಂದು ಟಿಕೆಟ್ಗಾಗಿ ಹಪಹಪಿಸುವ ಸ್ಥಿತಿ ಬಂದಿದೆ ಎಂದು ಮರುಗಿದ್ರು.