ಬೆಂಗಳೂರು : “ನನಗೆ ಚುನಾವಣೋತ್ತರ ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
![](https://pratidhvani.com/wp-content/uploads/2024/04/DK-Shivakumar-PTI-_1707851523177_1712767024989-1024x576.jpg)
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಹೀಗಾಗಿ ನನಗೆ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸವಿಲ್ಲ.
![](https://pratidhvani.com/wp-content/uploads/2024/05/4r7rpdj8_dk-shivakumar_625x300_17_April_24-1024x630.webp)
ರಾಜ್ಯದಲ್ಲಿ ಕಾಂಗ್ರೆಸ್ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಮಾಹಿತಿ ತೋರಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ. ದೇಶದ ಅಧಿಕಾರವನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ.”