• Home
  • About Us
  • ಕರ್ನಾಟಕ
Tuesday, October 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಭಿವೃದ್ಧಿ ಮಾಡೋದು ನಾನು.. ಲೋಕಸಭೆಯಲ್ಲಿ ಸೋಲಿಸಿದ್ರಿ.. ಮಾತಲ್ಲೇ ಚಾಟಿ..

ಕೃಷ್ಣ ಮಣಿ by ಕೃಷ್ಣ ಮಣಿ
January 13, 2025
in Top Story, ಕರ್ನಾಟಕ, ರಾಜಕೀಯ
0
ಅಭಿವೃದ್ಧಿ ಮಾಡೋದು ನಾನು.. ಲೋಕಸಭೆಯಲ್ಲಿ ಸೋಲಿಸಿದ್ರಿ.. ಮಾತಲ್ಲೇ ಚಾಟಿ..
Share on WhatsAppShare on FacebookShare on Telegram

ರಾಮನಗರ: ಜನಸ್ಪಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಜನರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೊಸ ಮಾದರಿಯಲ್ಲಿ ಸರ್ವೇ ಕಾರ್ಯ ಆಗ್ತಿದೆ, ಯಾವುದೇ ಗೊಂದಲ ಇಲ್ಲದೇ, ರೈತರು ಕಚೇರಿಗೆ ಅಲೆಯದಂತೆ ಸರ್ಕಾರ ಬದಲಾವಣೆ ತಂದಿದೆ. ಪ್ರಾಯೋಗಿಕವಾಗಿ ನಮ್ಮ ಹೋಬಳಿಯಿಂದ ಹೊಸ ಸರ್ವೇ ಕಾರ್ಯ ಪ್ರಾರಂಭಿಸಿದ್ದೇವೆ. ಅಲ್ಲದೇ ನಾನು ಡಿಸಿಎಂ ಆಗಿ ನಿಮ್ಮ ಭೇಟಿ ಮಾಡೋದು ಕಷ್ಟ ಆಗಿದೆ. ಹಾಗಾಗಿ ನಿಮ್ಮ ಸಮಸ್ಯೆ ಆಲಿಸಲು ನಾನೇ ಬಂದಿದ್ದೇನೆ ಎಂದು ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

ADVERTISEMENT

ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಸಭೆ ಮಾಡ್ತಿದ್ದೇನೆ. ನಮ್ಮ ಹೋಬಳಿಯಲ್ಲಿ 35 ಗ್ರಾಮಗಳಿವೆ. ಅದರಲ್ಲಿ 33 ಗ್ರಾಮಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿದ್ದೇವೆ. ಪೋಡಿ ಮಾಡಿಸಿಕೊಳ್ಳಬೇಕು ಅಂದ್ರೆ ಹಿಂದೆ ಸಾಕಷ್ಟು ಲಂಚ ಕೊಡಬೇಕಿತ್ತು. ಹಾಗಾಗಿ ಈ ಹೊಸ ಸರ್ವೆ ಮೂಲಕ ಲಂಚದ ಹಾವಳಿ ತಪ್ಪಿಸ್ತಿದ್ದೇವೆ. ಪಾಣಿ, ಸ್ಕೆಚ್ ಎಲ್ಲಾ ಒಂದೇ ದಾಖಲೆಯಲ್ಲಿ ಇರುತ್ತದೆ. ಬೆಂಗಳೂರಿನಲ್ಲೂ ಎಲ್ಲಾ ದಾಖಲೆಗಳನ್ನ ಸ್ಕ್ಯಾನ್ ಮಾಡಿಸುತ್ತಿದ್ದೇವೆ. ಯಾವುದೇ ದಾಖಲೆಗಳು ನಾಶ ಆಗದಂತೆ ಡಿಜಿಟಲೀಕರಣವಾಗಿ ಉಳಿಯಬೇಕು ಎಂದಿದ್ದಾರೆ.

ಇನ್ನು ಕನಕಪುರದಲ್ಲಿ ನರೇಗಾ ಯೋಜನೆ ಯಶಸ್ವಿಯಾಗಿದೆ. ತಾಲೂಕಿನ 120 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆದಿದ್ದೇವೆ. ರೈತರಿಗೆ ಟ್ರಾನ್ಫಾರ್ಮರ್ ಕೊಟ್ಟಿದ್ದೇವೆ. ಹೋಬಳಿ ಹೆಡ್ ಕ್ವಾರ್ಟರ್ಸ್‌ಗಳಲ್ಲಿ ಸುಸಜ್ಜಿತ ರಸ್ತೆಗಳನ್ನು ಮಾಡಿದ್ದೇವೆ. ನಿಮ್ಮ ಆಸ್ತಿ ಮೌಲ್ಯಗಳನ್ನ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ಇದು ಬೆಂಗಳೂರು ದಕ್ಷಿಣ ಜಿಲ್ಲೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಅಪ್ರೂವ್‌ ಆಗಿ ದೆಹಲಿಗೆ ಹೋಗಿದೆ. ಎಲ್ಲಾ ಕಡೆ ಎನ್‌ಓಸಿ ಸಿಕ್ಕಿದೆ. ಶೀಘ್ರದಲ್ಲೇ ಇದು ಬೆಂಗಳೂರು ದಕ್ಷಿಣ ಜಿಲ್ಲೆ ಆಗಲಿದೆ. ನಿಮ್ಮ ಜಮೀನಿನ ಬೆಲೆ ಹೆಚ್ಚಾಗಲಿದೆ ಅಂತಾನೂ ತಿಳಿಸಿದ್ದಾರೆ.

ಹೆಸರು ಬದಲಾವಣೆ ಬಗ್ಗೆ ಯಾರು ಟೀಕೆ ಮಾಡಿದ್ರೂ ತಲೆಕೆಡಿಸಿಕೊಳ್ಳಬೇಡಿ. ಟೀಕೆ ಮಾಡುವವರು ಇಲ್ಲಿ ಆಸ್ತಿ ಖರೀದಿ‌ ಮಾಡಿದ್ದಾರೆ. ನಾವು ಬೆಂಗಳೂರು ಜಿಲ್ಲೆಯವರು. ರಾಮನಗರ ಹೆಡ್ ಕ್ವಾರ್ಟರ್ಸ್ ಹಾಗೆ ಇರುತ್ತದೆ, ಆದ್ರೆ ಜಿಲ್ಲೆಯ ಹೆಸರು ಮಾತ್ರ ಬದಲಾವಣೆ ಆಗುತ್ತದೆ. ರಾಮನಗರದ ಮೆಡಿಕಲ್ ಕಾಲೇಜು ಆಗ್ತಿದೆ. ಕನಕಪುರದಲ್ಲೂ ಮೆಡಿಕಲ್ ಕಾಲೇಜು ಆಗುತ್ತದೆ ಎಂದು ದೊಡ್ಡಾಲನಹಳ್ಳಿ ಗ್ರಾಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ. ಇದೇ ವೇಳೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲು ಯಾಕೆ ಆಯ್ತು ಅನ್ನೋದನ್ನ ನಿಮ್ಮ ಆತ್ಮಸಾಕ್ಷಿಗೆ ಬಿಟ್ಟಿದ್ದೇವೆ ಎನ್ನುವ ಮೂಲಕ ನನ್ನ ಸಹೋದರನನ್ನು ಸೋಲಿಸಿದ್ರಿ ಅನ್ನೋದನ್ನೂ ಸೂಚ್ಯವಾಗಿ ತಿಳಿಸಿದ್ದಾರೆ.

ಬಹುಶಃ ನಿಮ್ಮ ಹೊಸ ಎಂಪಿ ಎಲ್ಲಾ ಕೆಲಸ ಮಾಡ್ತಿದ್ದಾರೆ ಅನ್ಸುತ್ತೆ, ದಿನಾ ಬೆಳಗ್ಗೆ ಬಂದು ನಿಮ್ಮ ಕಷ್ಟಸುಖ ಕೇಳ್ತಿದ್ದಾರೆ ಅನ್ಸುತ್ತೆ. ಡಿ.ಕೆ.ಸುರೇಶ್‌ಗೆ ವೋಟ್ ಹಾಕಿಲ್ಲ ಅಂತ ನಮಗೇನು ಬೇಜಾರಿಲ್ಲ. ಹೊಸ ಸಂಸದರಿಗೆ ವೋಟ್ ಹಾಕಿರುವವರು ಸಂತೋಷವಾಗಿರಿ. ಪಾರ್ಲಿಮೆಂಟ್ ಆದ ತಕ್ಷಣ ಏನು ಗಂಡುಗಲಿಗಳು ಚನ್ನಪಟ್ಟಣದಲ್ಲಿ ರೆಡಿ ಆಗಿದ್ರು. ನಾನು ಅಧಿಕಾರಿಗಳ ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸಿದೆ. ಅಲ್ಲಿ ಅವರು ಕೆಲಸ ಮಾಡದಿದ್ದಕ್ಕೆ ಜನ ನಮಗೆ ಅವಕಾಶ ಕೊಟ್ರು. ಕಾವೇರಿ ನದಿಯಿಂದ ತಾಲೂಕಿನ ಹಲವು ಕೆರೆಗಳನ್ನ ತುಂಬಿಸ್ತಿದ್ದೇವೆ. ನಮ್ಮ ಕೈಯಲ್ಲಿ ಆದಷ್ಟು ನಾವು ಅಭಿವೃದ್ಧಿ ಮಾಡಿದ್ದೇವೆ. ಸ್ವಂತ ಜಮೀನುಗಳನ್ನ ಕೊಟ್ಟು ಶಾಲೆ, ಹಾಸ್ಟೆಲ್ ಮಾಡಿಸಿದ್ದೇನೆ. ನಮ್ಮ ಅಜ್ಜಿ ಹೆಸರಿನ ಜಮೀನನ್ನ ಶಾಲೆಗೆ ಕೊಟ್ಟಿದ್ದೇನೆ ಎಂದಿರುವ ಡಿ.ಕೆ ಶಿವಕುಮಾರ್‌, ಡಾ.ಮಂಜುನಾಥ್ ಅಥವಾ ಕುಮಾರಸ್ವಾಮಿ ರಾಜ್ಯದಲ್ಲಿ ಶಾಲೆಗಳಿಗೆ ಒಂದು ಎಕರೆ ಜಮೀನು ಕೊಟ್ಟಿದ್ದಾರಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಚನ್ನಪಟ್ಟಣ ಎಲೆಕ್ಷನ್‌ಗೆ ಹೋಗಿದ್ದಾಗ ಮೂಗು ಹಿಡಿದುಕೊಂಡು ಓಡಾಡಿದೆ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದ್ರೂ ಏನೂ ಅಭಿವೃದ್ಧಿ ಮಾಡಿಲ್ಲ. ಚನ್ನಪಟ್ಟಣ ನೋಡಿದ್ರೆ ನಾಚಿಕೆ ಆಗ್ತಿತ್ತು. ನಾನು ಹೋಗಿ ಕಸ ಹಾಕೋಕೆ ಜಾಗ ಕೊಟ್ಟೆ. ಜನರಿಗೆ ಸೈಟ್‌ಗಳನ್ನು ಕೊಟ್ಟಿದ್ದೇವೆ. ಅದಕ್ಕಾಗಿ ಜನ ನಮ್ಮ ಅಭ್ಯರ್ಥಿಯನ್ನ 25 ಸಾವಿರ ವೋಟ್‌ನಿಂದ ಗೆಲ್ಲಿಸಿದ್ರು. ಹಾಗಾಗಿ ನಮ್ಮ ಮೇಲೆ ನಂಬಿಕೆ ಇಡಿ. ನಿಮ್ಮ ಪರವಾಗಿ ಕೆಲಸ ಮಾಡಲು ನಾವಿದ್ದೇವೆ. ಯಾರೂ ಬೆಂಗಳೂರಿಗೆ ವಲಸೆ ಹೋಗಬೇಡಿ. ಇಲ್ಲಿಯೇ ಕೈಗಾರಿಕೆಗಳನ್ನ ತಂದು ನಿಮಗೆ ಕೆಲಸ ಕೊಡ್ತೇವೆ. ಬೆಂಗಳೂರು ದಕ್ಷಿಣ ಅಂದ್ರೆ ನೀವು ಬೆಂಗಳೂರಿನವರೇ ಅಂತ ಅರ್ಥ‌. ಇನ್ನೆರಡು ಮೂರು ತಿಂಗಳಲ್ಲಿ ಬ್ರೋಕರ್‌ಗಳು ನಿಮ್ಮ ಜಮೀನುಗಳನ್ನ ಹುಡುಕಿಕೊಂಡು ಬರ್ತಾರೆ. ಯಾರೂ ಜಮೀನುಗಳನ್ನ ಮಾರಾಟ ಮಾಡಬೇಡಿ. ಪ್ರತಿ ತಿಂಗಳು ಒಂದು ದಿನ ಈ ಕ್ಷೇತ್ರಕ್ಕೆ ಬಂದು ಸಮಸ್ಯೆ ಆಲಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

Tags: DCM DK ShivakumarDK Shivakumardk shivakumar casedk shivakumar latest newsdk shivakumar newsdk shivakumar on bsydk shivakumar speechdk shivakumar today newsdk shivakumar vs hd kumaraswamydk shivakumar vs hd kumarswamydk shivakumar vs kumaraswamydk shivakumar vs sidduhd kumaraswamy dk shivakumarhd kumaraswamy on dk shivakumarhd kumaraswamy vs dk shivakumarkumaraswamy and dk shivakumarkumaraswamy vs dk shivakumar
Previous Post

ಹಸುಗಳ ಕೆಚ್ಚಲು ಕತ್ತರಿಸಿದ್ರೂ ಸೈಲೆಂಟ್.. ಡಿಕೆಶಿ ಸಿಎಂ ಆಗಲು ಸಾಧ್ಯವೇ ಇಲ್ಲ..

Next Post

ಸಿದ್ದರಾಮಯ್ಯನವರೇ ಹಿಂದೂಗಳ ಶಾಪಕ್ಕೆ ಬಲಿಯಾಗಬೇಡಿ.. ಶಾಸಕರ ಸಲಹೆ

Related Posts

Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
0

ಸಾಮಾಜಿಕ ಅರ್ಥಪೂರ್ಣ ವಿಷಯಗಳನ್ನು ಜನಪ್ರಿಯ ಶೈಲಿಯಲ್ಲಿ ಚಿತ್ರಿಸುವ ಖ್ಯಾತ ನಿರ್ದೇಶಕ ವೆಂಕಟ್ ಭರದ್ವಾಜ್, ತಮ್ಮ ಹೊಸ ಚಿತ್ರ “ಹೇ ಪ್ರಭು” (Hey Prabhu Kannada Cinema) ಮೂಲಕ...

Read moreDetails
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

October 28, 2025
ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

October 28, 2025

ನವೆಂಬರ್ 14 ರಂದು ಉತ್ತಮ ಸಂದೇಶ ಹೊತ್ತು ಬರಲಿದ್ದಾರೆ “kite ಬ್ರದರ್ಸ್” .

October 28, 2025
Next Post
ಸಿದ್ದರಾಮಯ್ಯನವರೇ ಹಿಂದೂಗಳ ಶಾಪಕ್ಕೆ ಬಲಿಯಾಗಬೇಡಿ.. ಶಾಸಕರ ಸಲಹೆ

ಸಿದ್ದರಾಮಯ್ಯನವರೇ ಹಿಂದೂಗಳ ಶಾಪಕ್ಕೆ ಬಲಿಯಾಗಬೇಡಿ.. ಶಾಸಕರ ಸಲಹೆ

Recent News

Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ
Top Story

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

by ಪ್ರತಿಧ್ವನಿ
October 28, 2025
ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!
Top Story

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

by ಪ್ರತಿಧ್ವನಿ
October 28, 2025
Top Story

ನವೆಂಬರ್ 14 ರಂದು ಉತ್ತಮ ಸಂದೇಶ ಹೊತ್ತು ಬರಲಿದ್ದಾರೆ “kite ಬ್ರದರ್ಸ್” .

by ಪ್ರತಿಧ್ವನಿ
October 28, 2025
ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ
Top Story

ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada