ಸದ್ಯ ಭಾರತೀಯ ಚಿತ್ರರಂಗದಲ್ಲಿ ‘ಟಾಕ್ಸಿಕ್’ ಸಿನಿಮಾದ್ದೇ ಸುದ್ದಿ. ಈ ಹಿಂದೆ ರಿಲೀಸ್ ಡೇಟ್ ಅನೌನ್ಸ್ ಆಗಿಯೂ ಎರಡು ಸಲ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿತ್ತು. ಇದೀಗ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಆಗಸ್ಟ್ 26ಕ್ಕೆ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಯಶ್ ಫ್ಯಾನ್ಸ್ ಸದ್ಯ ಸಿನಿಮಾ ನೋಡುವ ಕಾತುರದಲ್ಲಿದ್ದಾರೆ.

ಅಂದಹಾಗೆ, ‘ಟಾಕ್ಸಿಕ್’ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಬಿಡುಗಡೆಗೆ ಜೋರು ತಯಾರಿ ನಡೆದಿದೆ. ಇನ್ನು, ಸಿನಿಮಾದ ಹೊಸ ವಿಚಾರ ಏನೆಂದರೆ, ಈ ಚಿತ್ರದಲ್ಲಿ ನಟಿಸಿರುವ ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ ಕೊಟ್ಟಿರುವ ಹೇಳಿಕೆಯೊಂದು ಸಿನಿಮಾ ಪ್ರೇಕ್ಷಕರಿಗೆ ಹೊಸ ಉತ್ಸಾಹ ನೀಡಿದೆ.
ಹೌದು, ಹುಮಾ ಖುರೇಶಿ ಟಾಕ್ಸಿಕ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಬಗ್ಗೆ ಕೊಟ್ಟಿರುವ ಹೇಳಿಕೆ ಇದೀಗ ವೈರಲ್ ಆಗುತ್ತಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ತಾನು ಯಶ್ ಅವರ ಅತೀ ದೊಡ್ಡ ಅಭಿಮಾನಿ”. ‘ಟಾಕ್ಸಿಕ್’ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಯಶ್ ಮೇಲೆ ಅಭಿಮಾನ ದುಪ್ಪಟ್ಟಾಯ್ತು ಎಂದು ಹುಮಾ ಖುರೇಶಿ ಹೇಳಿದ್ದಾರೆ.

ಹುಮಾ ಖುರೇಷಿ ಅವರ ಹೇಳಿಕೆ ಸದ್ಯಕ್ಕೆ ವೈರಲ್ ಆಗುತ್ತಿದೆ. ಅದರಲ್ಲೂ ಈ ಸಿನಿಮಾದಲ್ಲಿ ಕೆಲಸ ಮಾಡಿದ ಬಳಿಕ ಯಶ್ ಅವರ ದೊಡ್ಡ ಅಭಿಮಾನಿಯಾದ ಅಂದಿದ್ದು ವೈರಲ್ ಆಗುತ್ತಿದೆ. “ನಾನು ಮೊದಲಿನಿಂದಲೂ ನಟ ಯಶ್ ಅವರ ಅಭಿಮಾನಿಯಾಗಿದ್ದೆ. ಆದರೆ, ಟಾಕ್ಸಿಕ್ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡಿದ ಬಳಿಕ ಇನ್ನೂ ದೊಡ್ಡ ಅಭಿಮಾನಿಯಾದೆ” ಎಂದು ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಕಾರ್ಯ ವೈಖರಿ, ಯಶ್ ನಟನೆ, ಸೆಟ್‌ನಲ್ಲಿ ಅವರು ನಡೆದುಕೊಳ್ಳುವ ರೀತಿ ತಮಗೆ ತುಂಬಾ ಇಷ್ಟ ಆಯಿತು ಎಂದು ಹೇಳಿಕೊಂಡಿದ್ದಾರೆ.

ಎಂಟು ನಿಮಿಷಗಳ ‘ಟಾಕ್ಸಿಕ್’ ದೃಶ್ಯಗಳ ತುಣುಕು ನೋಡಿ ಥ್ರಿಲ್ ಆಗಿದ್ದೆನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅವರಿಗೆ ‘ಟಾಕ್ಸಿಕ್’ ಸಿನಿಮಾದ ಸುಮಾರು ಒಂಬತ್ತು ನಿಮಿಷಗಳ ದೃಶ್ಯ ನೋಡುವ ಅವಕಾಶ ಸಿಕ್ಕಿತ್ತಂತೆ. ಆ ದೃಶ್ಯಗಳನ್ನು ನೋಡಿ ಅವರು ಸಖತ್ ಫೀಲ್ ಆಗಿದ್ದಾರೆ. “ನಾನು ಟಾಕ್ಸಿಕ್ ಸಿನಿಮಾದ ಒಂಬತ್ತು ನಿಮಿಷಗಳ ದೃಶ್ಯ ನೋಡಿ ಅಕ್ಷರಶ: ಥ್ರಿಲ್ ಆದೆ. ನನ್ನ ಇಡೀ ವೃತ್ತಿ ಬದುಕಿನಲ್ಲಿ ಇಂತಹ ಅದ್ಭುತವಾದ ಮೇಕಿಂಗ್ ನಾನು ಹಿಂದೆಂದೂ ನೋಡಿರಲಿಲ್ಲ” ಎಂದು ಹುಮಾ ಖುರೇಷಿ ಹೇಳಿದ್ದಾರೆ.

ಹುಮಾ ಖುರೇಷಿ ಬಾಲಿವುಡ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರೂ, ದಕ್ಷಿಣ ಭಾರತದ ಕೆಲವು ಭಾಷೆಗಳಲ್ಲಿ ನಟಿಸಿದ್ದಾರೆ. ಹಾಗೇ ಹಾಲಿವುಡ್ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಇಷ್ಟೊಂದು ಅನುಭವವಿರುವ ಹುಮಾ ಖುರೇಶಿ ‘ಟಾಕ್ಸಿಕ್’ ದೃಶ್ಯಗಳನ್ನು ಈ ಮಟ್ಟಿಗೆ ಹೊಗಳಿದ್ದು ಎಲ್ಲರು ಮಾತಾಡುವಂತೆ ಮಾಡಿದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿರುವ ‘ಟಾಕ್ಸಿಕ್’, ಗ್ಲೋಬಲ್ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಹುಮಾ ಖುರೇಶಿ ಕೊಟ್ಟಿರುವ ಹೇಳಿಕೆಗಳು ಯಶ್ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ತಂದಿರುವುದಂತೂ ನಿಜ.






