• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಂಕ್ರಾಂತಿಗೆ ಬಿಲ್ಲ ರಂಗ ಬಾಷ ರಿಲೀಸ್? ನಿರ್ಮಾಪಕಿ ರೀಟ್ವೀಟ್‌ಗೆ ಕಿಚ್ಚನ ಫ್ಯಾನ್ಸ್‌ ಫುಲ್‌ ಖುಷ್…‌

ಪ್ರತಿಧ್ವನಿ by ಪ್ರತಿಧ್ವನಿ
June 29, 2026
in Top Story
0
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್
Share on WhatsAppShare on FacebookShare on Telegram

ಕಿಚ್ಚ ಸುದೀಪ್‌ ಮಾರ್ಕ್‌ ಸಿನಿಮಾ ನಂತರ ಇದೀಗ ಬಿಲ್ಲ ರಂಗ ಬಾಷ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಸದ್ಯ ಆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೆ ಒಂದಷ್ಟು ಚಿತ್ರದ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಇತ್ತೀಚೆಗೆ ಸುದೀಪ್ ಅವರು ಹೊಸ ಕ್ಯಾರವಾನ್ ಮೂಲಕ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದಾರೆ. ಹೊಸ ವಿಷಯ ಏನೆಂದರೆ, ಆ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಸುಳಿವು ನೀಡಿದೆ.

ADVERTISEMENT

ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್ ನ ಬಹು ನಿರೀಕ್ಷೆಯ ಚಿತ್ರವಿದು. ಬಹುಕೋಟಿ ವೆಚ್ಚದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

BK Hariprasad : ರೈತರು ಬಂದು ಚರ್ಚಿಸಿದ್ದರೆ ಮುಂದಿನ ತೀರ್ಮಾನ..! #pradeepeshwar #bjp #jds #pratidhvani

ಈ ಸಿನಿಮಾದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಟೈಟಲ್‌ನಿಂದಲೇ ‘ಬಿಲ್ಲ ರಂಗ ಬಾಷ’ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿರೋದು ನಿಜ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸ್ಟಾರ್ ನಟರು ಎರಡು, ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. ನಿಧಾನಗತಿಯಲ್ಲೇ ಅವರ ಕೆಲಸ ಸಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ‘ಮ್ಯಾಕ್ಸ್’ ಹಾಗೂ ‘ಮಾರ್ಕ್’ ಈ ಎರಡು ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ನೋಡುಗರ ಮುಂದೆ ಬಂದಿದ್ದವು.

ಸದ್ಯದಲ್ಲೇ ‘ಬಿಲ್ಲ ರಂಗ ಬಾಷ’ ಸಿನಿಮಾ ಕೂಡ ಬರುತ್ತೆ. ಅದರ ಜೊತೆಗೆ ಮತ್ತೊಂದು ಸಿನಿಮಾ ಮಾಡ್ತೀನಿ ಅಂತ ಸುದೀಪ್‌ ಕೂಡ ಹೇಳಿದ್ದರು. ‘ಮಾರ್ಕ್’ ಸಿನಿಮಾ ಬಿಡುಗಡೆಯಾಗಿ ಆರು ತಿಂಗಳ ಬಳಿಕ ಅನೂಪ್ ಭಂಡಾರಿ ನಿರ್ದೇಶನಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಆದರೂ ಸಾಧ್ಯವಾದಷ್ಟು ಬೇಗ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಿ ಸುದೀಪ್ ಎರಡು ಬಾರಿ ಗೆದ್ದಿದ್ದರು. ಆದರೆ ಇಪ್ಪತ್ತು ದಿನ ತಡವಾಗಿ ಸಂಕ್ರಾಂತಿಗೆ ‘ಬಿಲ್ಲ ರಂಗ ಬಾಷ’ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಚಿತ್ರದ ನಿರ್ಮಾಪಕಿ ಮಾಡಿರುವ ಒಂದು ಟ್ವೀಟ್. ಅಭಿಮಾನಿಯೊಬ್ಬರು ಮಾಡಿರುವ ಟ್ವೀಟ್ ಅನ್ನು ನಿರ್ಮಾಪಕಿ ಚೈತನ್ಯಾ ರೆಡ್ಡಿ ರೀಟ್ವೀಟ್ ಮಾಡಿದ್ದಾರೆ.

BK Hariprasad : ರಾಷ್ಟ್ರಪತಿಗಿರುವ ಅಧಿಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಇದೆ..! #congress #kpccpresident

ಬೆಂಗಳೂರಿನಲ್ಲಿ ‘ಬಿಲ್ಲ ರಂಗ ಬಾಷ’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆ ಎಂಬ ಪೋಸ್ಟ್ ಅನ್ನು ಚೈತನ್ಯಾ ರೆಡ್ಡಿ ಹಂಚಿಕೊಂಡಿದ್ದಾರೆ. ಇದು ಅದ್ಧೂರಿ ಬಜೆಟ್ ಸಿನಿಮಾ. ಚಿತ್ರೀಕರಣಕ್ಕೆ ಬಹಳ ದಿನಗಳು ಬೇಕಾಗುತ್ತದೆ. ಅದೇ ರೀತಿ ಪೋಸ್ಟ್ ಪ್ರೊಡಕ್ಷನ್‌ಗೂ ಹೆಚ್ಚು ಸಮಯ ಬೇಕು. ಈ ಮಧ್ಯೆ ಮುಂದಿನ ಆರು ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವುದು ನಿಜವೇ? ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ. ಸುದೀಪ್ ಹಾಗೂ ಅನೂಪ್ ಕಾಂಬಿನೇಷನ್ ಬಿಟ್ಟರೆ ‘ಬಿಲ್ಲ ರಂಗ ಬಾಷ’ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಹೆಚ್ಚಿನ ತಾರಾಗಣ ಹಾಗೂ ತಂತ್ರಜ್ಞರ ಮಾಹಿತಿ ಸಿಗಬೇಕು.

ಸುದೀಪ್ ಹಾಗೂ ಅನೂಪ್ ಒಟ್ಟಿಗೆ ಸೇರಿದ್ದಾರೆ ಅಂದರೆ ನಿರೀಕ್ಷೆ ಸಹಜ. ಈ ಹಿಂದೆ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಇಬ್ಬರೂ ಮೋಡಿ ಮಾಡಿದ್ದರು. ತೆಲುಗಿನಲ್ಲಿ ‘ಹನುಮಾನ್’ ಚಿತ್ರವನ್ನು ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಾಣ ಮಾಡಿತ್ತು. ಸಿನಿಮಾ ಹಿಟ್ ಆಗಿದ್ದು ಗೊತ್ತೇ ಇದೆ. ‘ಬಿಲ್ಲ ರಂಗ ಬಾಷ’ ಸಿನಿಮಾ ಮೂಲಕ ಚಂದನವನಕ್ಕೆ ಈ ಸಂಸ್ಥೆ ಎಂಟ್ರಿ ಕೊಟ್ಟಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತಯಾರಾಗುತ್ತಿದೆ.

Tags: #BillaRangaBhasha#Entertainment#KichchaFans#KichchaSudeep#MovieUpdate#ProducerRetweet#sandalwood#Sankranti2027#tollywood#UpcomingMoviebreakingnewsCinemaNewsfilmnewskannadacinemakannadamovie
Previous Post

ಜಗತ್ತಿನಾದ್ಯಂತ ಭೂಕಂಪಗಳ ಸರಣಿ; ಭಾರತಕ್ಕೂ ಇದೆಯೇ ಅಪಾಯ? ತಜ್ಞರು ಹೇಳಿದ್ದೇನು

Related Posts

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್
Top Story

ಜಗತ್ತಿನಾದ್ಯಂತ ಭೂಕಂಪಗಳ ಸರಣಿ; ಭಾರತಕ್ಕೂ ಇದೆಯೇ ಅಪಾಯ? ತಜ್ಞರು ಹೇಳಿದ್ದೇನು

by ಪ್ರತಿಧ್ವನಿ
June 29, 2026
0

ವಿಶ್ವದಾದ್ಯಂತ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ. ಒಂದೆಡೆ ವಿವಿಧ ರಾಷ್ಟ್ರಗಳಲ್ಲಿ ಭಾರೀ ಬಿಸಿಲಿನ ಅಬ್ಬರ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದ್ದರೆ, ಮತ್ತೊಂದೆಡೆ ಒಂದೇ ವಾರದಲ್ಲಿ...

Read moreDetails
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್

ಆರ್‌ಎಸ್‌ಎಸ್ ವಿವಾದದಲ್ಲಿ ಪ್ರಿಯಾಂಕ್ ಖರ್ಗೆ ಸಂಕಷ್ಟ; ನ್ಯಾಯಾಲಯದಿಂದ ಸಮನ್ಸ್

June 29, 2026
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್

June 29, 2026
ಮತ್ತೆ ಒಂದಾದ ‘ಪ್ರೇಮಂ’ ಜೋಡಿ: ನಿವಿನ್ ಪೌಲಿ 50ನೇ ಸಿನಿಮಾ ‘ವಿಜಯಂ’

ಮತ್ತೆ ಒಂದಾದ ‘ಪ್ರೇಮಂ’ ಜೋಡಿ: ನಿವಿನ್ ಪೌಲಿ 50ನೇ ಸಿನಿಮಾ ‘ವಿಜಯಂ’

June 29, 2026
ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣ: ಎಂಟು ಮಂದಿ ಆರೋಪಿಗಳಿಗೆ ಜೈಲು

ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣ: ಎಂಟು ಮಂದಿ ಆರೋಪಿಗಳಿಗೆ ಜೈಲು

June 29, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada