ಬೆಂಗಳೂರಿನಲ್ಲಿ ಕಡಲ್ ಥೆರಪಿ ಅಥವಾ ಹಗ್ (ಆಲಿಂಗನ) ಚಿಕಿತ್ಸೆ ಟ್ರೆಂಡ್ ಆಗುತ್ತಿದೆ! ಕೆಲಸದ ಒತ್ತಡ, ಒಂಟಿತನ, ಬೇಸರ ಕಳೆಯಲು ಈ ಚಿಕಿತ್ಸೆ ನೀಡುತ್ತಿದ್ದಾರೆ. ಆಲಿಂಗಿಸಿಕೊಳ್ಳುವುದು, ಕೈ ಹಿಡಿಯುವುದು, ಹರಟೆ ಹೊಡೆಯುವುದು ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡುತ್ತಾರಂತೆ!

ತರಬೇತಿ ಪಡೆದ ಥೆರಪಿಸ್ಟ್‌ಗಳು ಗ್ರಾಹಕರೊಂದಿಗೆ ಸಮಯ ಕಳೆಯುತ್ತಾರೆ. ಇದು ಪ್ಲಾಟೋನಿಕ್ ಸ್ಪರ್ಶ ಚಿಕಿತ್ಸೆಯಾಗಿದ್ದು, ದೇಹದಲ್ಲಿ ಆಕ್ಸಿಟೋಸಿನ್ ಹಾರ್ಮೋನ್(ಫೀಲ್ ಗುಡ್ ಹಾರ್ಮೋನ್) ಬಿಡುಗಡೆಯಾಗುವಂತೆ ಮಾಡಿ ಒತ್ತಡ ಕಡಿಮೆ ಮಾಡುತ್ತದೆ.

ಇದು ಲೈಂಗಿಕೇತರ (Non-sexual), ಸ್ನೇಹಪೂರ್ವಕ ಸ್ಪರ್ಶ ಚಿಕಿತ್ಸೆಯಾಗಿದೆ. ಚಿಕಿತ್ಸೆಯ ಮೊದಲು ಇದರಲ್ಲಿ ಭಾಗಿಯಾಗುವ ಗ್ರಾಹಕ ನಿಯಮಗಳಿಗೆ ಒಪ್ಪಿಗೆ ನೀಡಬೇಕು. ಚಿಕಿತ್ಸೆಯ ಸಮಯದಲ್ಲಿ ಪೂರ್ಣವಾಗಿ ಬಟ್ಟೆ ಧರಿಸಿರಬೇಕು. ಲೈಂಗಿಕತೆಗೆ, ಅಸಭ್ಯವರ್ತನೆಗೆ ಇಲ್ಲಿ ಅವಕಾಶವಿಲ್ಲ.

ಭಾರತದಲ್ಲಿ ಈ ಸೇವೆ ಮುಖ್ಯವಾಗಿ ಬೆಂಗಳೂರು, ದೆಹಲಿ, ಮುಂಬೈ, ನಗರಗಳಲ್ಲಿ ಹೆಚ್ಚಾಗುತ್ತಿದೆ. ಗಂಟೆಗೆ ಅಥವಾ 3-4 ಗಂಟೆಗಳ ಸೆಷನ್‌ಗೆ ಸುಮಾರು 5,000 ರೂಪಾಯಿಗಳವರೆಗೆ ದರ ನಿಗದಿಪಡಿಸಲಾಗಿದೆ (ಕೆಲವು ಸ್ಥಳಗಳಲ್ಲಿ 2,000 ರಿಂದ 20,000 ರೂ. ವರೆಗೆ ವ್ಯತ್ಯಾಸವಿದೆ






