ಹುಬ್ಬಳ್ಳಿಯಲ್ಲಿ (Hubli) ನಡೆದಿದ್ದ ಗಲಭೆ ಕೇಸ್ ಗಳನ್ನು ವಾಪಸ್ ಪಡೆಯುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ (RIP) ವಿರೋಧಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Cm siddaramaiah) ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿಯವರು ಆರ್‌ಎಸ್ಎಸ್ (RSS) ಮೇಲಿನ ಕೇಸ್ ಗಳನ್ನ ವಾಪಸ್ ತಗೊಂಡ್ರಲ್ಲ ಆಗ ಯಾಕೆ ಬಿಜೆಪಿಯವರು ಯೋಚನೆ ಮಾಡಲಿಲ್ಲ. ಈಗ ಈ ಕೇಸ್‌ಗಳ ಬಗ್ಗೆ ಕಮಿಟಿ ರಚನೆ ಮಾಡಲಾಗಿತ್ತು. ಅದಕ್ಕೆ ಗೃಹ ಮಂತ್ರಿ ಡಾ. ಜಿ.ಪರಮೇಶ್ವರ್ (Parameshwar) ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಪೂರ್ವ ಪರ ನೋಡಿಯೆ ನಿರ್ಧರಿಸಲಾಗುತ್ತೆ ಎಂದರು.
ಈ ನಿರ್ಧಾರವನ್ನು ಕ್ಯಾಬಿನಟ್ (cabinet) ಮುಂದೆ ತಂದು ಒಪ್ಪಿಗೆ ನೀಡಿ ತೀರ್ಮಾನ ಆಗಿದೆ. ಇದಾದ್ದೋಲೆ ಇದು ಕೋರ್ಟ್‌ನಲ್ಲಿ ಸಲ್ಲಿಕೆ ಆಗಬೇಕು. ಕೋರ್ಟ್ ಒಪ್ಪಿಕೊಂಡಾಗ ಮಾತ್ರ ಈ ಕೇಸ್ ಗಳನ್ನ ವಾಪಸ್ ಪಡೆಯಲು ಸಾಧ್ಯ ಆಗುತ್ತೆ ಎಂದಿದ್ದಾರೆ.