ಚನ್ನಪಟ್ಟಣ ಉಪಚುನಾವಣೆ (channapattana Bi election) ಅಖಾಡ ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೇಸ್ (Congress) ಹಾಗೂ ಮೈತ್ರಿಯ ನಡುವೆ ಇನ್ನೂ ಅಭ್ಯರ್ಥಿ ಜಟಾಪಟಿ ನಡಿತಾನೇಯಿದೆ. ಇದೀಗ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ (Nikhil kumar swamy) ಸ್ಪರ್ಧೆ ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ.

ನಿನ್ನೆ ಬಿಡದಿಯ ಕೇತಿಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಸಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದ್ದು, ನಾನೇ ಖುದ್ದು ಚುನಾವಣೆ ನಡೆಸ್ತೇನೆ. ಡಿ.ಕೆ ಶಿವಕುಮಾರ್ (Dk shivakumar) ಯಾವ ರೀತಿ ಚುನಾವಣೆ ಎದುರಿಸ್ತಾರೋ ಅದೇ ರೀತಿ ನಾವು ಎದುರಿಸೋಣ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD kumaraswamy) ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ಇತ್ತ ಡಿಕೆಶಿ ನಾನೇ ಅಭ್ಯರ್ಥಿ, ನನ್ನ ಹೆಸರಿನಲ್ಲೇ ಮತ ಕೇಳೀನಿ ಎಂದಿದ್ರೆ ಮತ್ತೊಂದೆಡೆ ಕುಮಾರಸ್ವಾಮಿ ಕೂಡ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ಕೌಂಟರ್ ಕೊಟ್ಟಿದ್ದಾರೆ. ಆದ್ರೆ ಮೈತ್ರಿಯಿಂದ ಬಹುತೇಕ ನಿಖಿಲ್ ಸ್ಪರ್ಧೆ ಮಾಡೋದು ಫಿಕ್ಸ್ ಎನ್ನಾಗಿದೆ.