ಚಿಕ್ಕ ವಯಸ್ಸಿನಲ್ಲಿ ಮೂಳೆಗಳಿಗೆ ಯಾವುದೇ ರೀತಿ ತೊಂದರೆಯಾಗಿದ್ದರೂ ,ನಮಗೆ ಗಟ್ಟಿಮುಟ್ಟು ಎನಿಸಿದರು, ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಅಂದರೆ ವಯಸ್ಸಾದ ನಂತರ ಮೂಲೆಗಳು ಸವೆಯುವುದು ಅಥವಾ ಜಾಯಿಂಟ್ ಪೈಂಟ್ ಶುರುವಾಗುತ್ತದೆ.. ಗಾಗಿ ನಮ್ಮ ದೇಹಕ್ಕೆ ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ದೊರೆಯಬೇಕು. ಕ್ಯಾಲ್ಸಿಯಂ ಕಡಿಮೆಯಾದಲ್ಲಿ ಮೂಳೆಗಳಿಗೆ ಮಾತ್ರವಲ್ಲದೆ ಹಲ್ಲುಗಳಿಗೂ ಕೂಡ ತೊಂದರೆಯಾಗುತ್ತದೆ. ಹಾಗಾಗಿ ಆಹಾರವನ್ನು ಸೇವಿಸುವಾಗ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಮಿನರಲ್ ಕ್ಯಾಲ್ಸಿಯಂ ಪ್ರತಿಯೊಂದು ಅಂಶವು ಕೂಡ ಆಹಾರದಲ್ಲಿರಬೇಕು.. ಹಾಗಿದ್ರೆ ಯಾವ ಆಹಾರವನ್ನು ಸೇವಿಸುವುದು ಉತ್ತಮ ಅನ್ನೋದನ್ನ ಮಾಹಿತಿ ಹೀಗಿದೆ.
ಹಾಲಿನ ಪದಾರ್ಥಗಳು
ಹಾಲಿನಲ್ಲಿ ತಯಾರಿಸಿದಂತಹ ಉತ್ಪನ್ನಗಳನ್ನ ಸೇವಿಸುವುದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅಧಿಕವಾಗಿ ಸಿಗುತ್ತದೆ. ಅದರಲ್ಲೂ ಪ್ರತಿ ದಿನ ಹಾಲು ಮೊಸರನ್ನ ತಪ್ಪದೇ ನಾವು ಸೇವಿಸಬೇಕು. ಆಹಾರ ಜೊತೆಗೆ ತುಪ್ಪ ಅಥವಾ ಬೆಣ್ಣೆಯನ್ನ ಬೆರೆಸಿ ತಿನ್ನುವುದರಿಂದ ನಮ್ಮ ಮೂಳೆಗಳು ಗಟ್ಟಿಮುಟ್ಟಾಗುತ್ತವೆ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಇದರ ಜೊತೆಗೆ ಚೀಸ್ ಪನ್ನೀರ್ ಎರಡು ಕೂಡ ನಮ್ಮ ದೇಹದ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚು ಮಾಡುತ್ತದೆ ಆದರೆ ಯಾವುದು ಕೂಡ ಅತಿ ಆಗಬಾರದು.
ಡ್ರೈ ಫ್ರೂಟ್ಸ್
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ, ರಾತ್ರಿ ನೆನೆಸಿಟ್ಟ ಡ್ರೈ ಫ್ರೂಟ್ಸ್ ಅನ್ನ ಸೇವಿಸುವುದರಿಂದ ಆರೋಗ್ಯ ಅದ್ಭುತವಾಗಿರುತ್ತದೆ. ಹಾಗೂ ಕ್ಯಾಲ್ಸಿಯಂ ಸಮೃದ್ಧವಾಗಿ ಸಿಗುತ್ತದೆ. ಅಂಜುರ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.. ಅದರಲ್ಲೂ ಮೂಳೆಗಳನ್ನ ಬಲಪಡಿಸುವುದು ಅಥವಾ ಗಟ್ಟಿಯಾಗಿ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ. ಒಣ ಅಂಜೂರ ಹಾಗೂ ಇತರೆ ಡ್ರೈ ಫ್ರೂಟ್ಸ್ ಗಳನ್ನ ಚೆನ್ನಾಗಿ ಹುರಿದು ಉಂಡೆಗಳನ್ನಾಗಿ ಕಟ್ಟಿ.ಮಕ್ಕಳಿಗೆ ಪ್ರತಿದಿನ ಒಂದೊಂದು ಉಂಡೆಯನ್ನು ಕೊಡುವುದರಿಂದ ತುಂಬಾನೇ ಸ್ಟ್ರಾಂಗ್ ಆಗಿ ಹಾಗೂ ಬಲವಾದ ಮೂಳೆಗಳನ್ನ ಹೊಂದುತ್ತಾರೆ.. ಕಾರಣ ಇದರಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶವಿರುತ್ತದೆ.. ಅಂಜೂರದ ಸ್ಮೋತಿ ಅಥವಾ ಡೆಸರ್ಟ್ ಪ್ರತಿಯೊಬ್ಬರಿಗೂ ತುಂಬಾನೆ ಉತ್ತಮ..