ಮುಡಾ ಪ್ರಕರಣದಲ್ಲಿ (MUDA scam) ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ (Prosecution) ರಾಜ್ಯಪಾಲರು ಅನುಮತಿ ನೀಡಿದ್ದನ್ನ ಪ್ರಶ್ನಿಸಿ ನಾಳೆ ಹೈಕೋರ್ಟ್ (Highcourt) ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ಪ್ರಶ್ನಿಸಿ ಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ (Cm siddaramiah) ಅರ್ಜಿ ಸಲ್ಲಿಸಿದ್ದು, ಆಗಸ್ಟ್ 19ರಂದು ನಡೆಸಿದ ವಿಚಾರಣೆ ವೇಳೆ ಹೈಕೋರ್ಟ್ ಈ ವಿಚಾರವನ್ನ ನಾಳೆಗೆ ಮುಂದೂಡಿತ್ತು.

ಈ ಹಿನ್ನಲೆ ಸಿದ್ದರಾಮಯ್ಯರವರು ಪ್ರಾಸಿಕ್ಯೂಷನ್ ಕುರಿತು ಕಾನೂನು ಮತ್ತು ರಾಜಕೀಯ ಹೋರಾಟ ಮುಂದುವರಿಸಿದ್ದು, ಆಗಸ್ಟ್ 31 ರಂದು ಸಿಎಂ, ಡಿಸಿಎಂ ಡಿ.ಕೆ ಶಿವಕುಮಾರ್ (Dom dk shivakumar) ಸೇರಿದಂತೆ ಕಾಂಗ್ರೆಸ್ ನಾಯಕರು ರಾಜಭವನ ಚಲೋ ಮಾಡಲಿದ್ದಾರೆ.ಹೀಗಾಗಿ ನಾಳಿನ ಹೈಕೋರ್ಟ್ ವಿಚಾರಣೆ ಮೇಲೆ ಸಿಎಂ ಕಣ್ಣಿಟ್ಟಿದ್ದಾರೆ.
ಈ ಪ್ರಕರಣದಲ್ಲಿ ರಾಜ್ಯಪಾರು ಕೈಗೊಂಡಿರುವ ನಿರ್ಧಾರದ ಬಗ್ಗೆ ಕೋರ್ಟ್ ಯಾವ ರೀತಿಯ ಅಭಿಪ್ರಾಯ ವ್ಯಕ್ತಪಡಿಸಲಿದೆ ಎಂಬುದನ್ನ ಕಾದುನೋಡಿ ಮುಂದಿನ ರಣ ತಂತ್ರ ಹೆಣೆಯಲು ಸಿಎಂ ಮತ್ತು ಅವರ ಬಳಗ ಸಜ್ಜಾಗಿದ್ದು, ಎಲ್ಲರ ಚಿತ್ತ ಕೋರ್ಟ್ನತ್ತ ನೆಟ್ಟಿದೆ.