ಒಂದ್ಕಡೆ ಸದ್ಯ ಮೂಡಾ ಹಗರಣ (MUDA Scam)ಸಿಎಂ ಸಿದ್ದರಾಮಯ್ಯಗೆ (CM Siddaramaiah) ಉರುಳಾಗಿ ಪರಿಣಮಿಸುವಂತೆ ಭಾಸವಾಗ್ತಿದೆ. ಮತ್ತೊಂದೆಡೆ ವಾಲ್ಮೀಕಿ ಹಗರಣದಲ್ಲಿಯೂ ರಾಜ್ಯ ಸರ್ಕಾರ ಒಂದು ರೀತಿ ಇಕ್ಕಟ್ಟಿಗೆ ಸಿಲುಕಿದೆ. ಈ ಎಲ್ಲ ಸಂಕಷ್ಟಗಳ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ (Congress high command) ಸಿದ್ದರಾಮಯ್ಯ ಬೆನ್ನಿಗೆ ನಿಂತಿರೊದು ಸಷ್ಟವಾಗಿದೆ.

ರಾಜ್ಯದ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಖುದ್ದು ಸಿಎಂಗೆ ದೂರವಾಣಿ ಕರೆ ಮಾಡಿ ಮಾತನಾಡಿರೋ ಎಐಸಿಸಿ ನಾಯಕರು (AICC leaders) ಅಭಯ ನಿಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC venugopal), ಉಸ್ತುವಾರಿ ಸುರ್ಜೇವಾಲಾ ಫೋನ್ ಮಾಡಿ ಈ ಬಗ್ಗೆ ಮಾತಾಡಿದ್ದಾರೆ.
ನಿನ್ನೆ ಸಚಿವ ಸಂಪುಟ ಸಭೆಯಲ್ಲಿ (cabinet meeting) ಕೈಗೊಂಡ ನಿರ್ಣಯದ ಬಗ್ಗೆ ಹಾಗೂ ರಾಜ್ಯದಲ್ಲಿನ ಬೆಳವಣಿಗೆಯ ಸಂಪೂರ್ಣ ಮಾಹಿತಿಯನ್ನ ಸಿದ್ದರಾಮಯ್ಯ ನೀಡಿದ್ದು, ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಮಾತುಗಳನ್ನ ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಎಂಬ ಮಾಹಿತಿ ತಿಳಿದುಬಂದಿದೆ.






