ಬೆಂಗಳೂರಿನಲ್ಲಿ (Bangalore) ಭಾನುವಾರ ತಡರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವು ಏರಿಯಾಗಳಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಬಹುತೇಕ ಏರಿಯಾಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು,ವಾಹನ ಸಂಚಾರಕ್ಕೂ ಅಡಚಣೆಯಾಗಿದೆ.

ಹೀಗೆ ಓಕುಳಿಪುರಂ ಅಂಡರ್ ಪಾಸ್ (Underpass) ನಲ್ಲಿ ನೀರು ನಿಂತಿದ್ದ ಪರಿಣಾಮ, ಆಂಬ್ಯುಲೆನ್ಸ್ (Ambulance) ಒಂದು ಕೆಟ್ಟು ನಿಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂಡರ್ ಪಾಸ್ ಆಂಬ್ಯುಲೆನ್ಸ್ ಕೆಟ್ಟು ನಿಂತ ಪರಿಣಾಮ ಅಂಬ್ಯುಲೆನ್ಸ್ ನಲ್ಲಿದ್ದ ಪೆಷೆಂಟ್ಸ್ (Patients) ಪರದಾಡುವಂತಾಗಿತ್ತು.
ಅನಂತರ ಇನ್ನೂ ತಡ ಮಾಡದೇ ಆಟೋ (Auto) ಮಾಡಿ ರೋಗಿಗಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ. ಹಾಸನದಿಂದ (Hassan) ಬಂದಿದ್ದ ಅನಾರೋಗ್ಯ ಪೀಡಿತರು, ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಚಿಕಿತ್ಸೆಗೆ ಎಂದು ಬಂದಿದ್ರು. ಈ ವೇಳೆ ಅಂಡರ್ ಪಾಸ್ ನಲ್ಲಿ ನೀರು ನಿಂತು ಈ ಸನ್ನಿವೇಶ ಸೃಷ್ಟಿಯಾಗಿತ್ತು.