ಬೆಂಗಳೂರು (Bangalore) ನಗರದಲ್ಲಿ ಸೈಬರ್ ವಂಚಕರ (Cyber crime) ಹಾವಳಿ ಹೆಚ್ಚಾಗುತ್ತಿದೆ. ವಾಟ್ಸಾಪ್ ವಿಡಿಯೋ ಕಾಲ್ (Whatsapp video call) ಮೂಲಕವೇ ವಂಚನೆ ಮಾಡುವ ಹೊಸ ದಾರಿ ಕಂಡುಕೊಂಡಿದ್ದಾರೆ ಈ ಸೈಬರ್ ಖದೀಮರು. ಹೀಗಾಗಿ ನೀವೇನಾದ್ರೂ ಹೆಚ್ಚು ವಿಡಿಯೋ ಕಾಲ್ ನಲ್ಲಿ ಮಾತನಾಡುವರಾಗಿದ್ರೆ ಹುಷಾರ್ !
ಅಪರಿಚಿತ ನಂಬರ್ ನಿಂದ (Unknown number) ನಿಮಗೆ ವಾಟ್ಸ್ಯಾಪ್ ವಿಡಿಯೋ ಕಾಲ್ ಬರುತ್ತೆ.ಯಾರೋ ಗೊತ್ತಿರೋರಿರ್ಬೇಕು ಅಂತ ನೀವೇನಾದ್ರೂ ಕಾಲ್ ರಿಸೀವ್ ಮಾಡಿದ್ರೆ ಸುಂದರ ಯುವತಿ ಕಾಣಿಸಿಕೊಳ್ತಾಳೆ.ನೋಡೋದಕ್ಕೆ ಸುಂದರವಾಗಿದ್ದಾಳಲ್ಲ ಅಂಥ ನೋಡ್ತಿದ್ರೆ, ಅಷ್ಟರಲ್ಲೇ ಆಕೆ ನಗ್ನವಾಗಿಬಿಡ್ತಾಳೆ. ಕೇವಲ ತಾನು ಮಾತ್ರವಲ್ಲ, ಪ್ರಚೋದನೆ ಮಾತುಗಳನ್ನ ಆಡಿ ಕಾಲ್ ರಿಸೀವ್ ಮಾಡಿದ್ದವರಿಗೂ ಬಟ್ಟೆ ಬಿಚ್ಚಿ ನಗ್ನವಾಗುವಂತೆ ಮಾಡುತ್ತಾಳೆ.ಅದಾದ ಕೂಡ್ಲೇ ಸೆಕೆಂಡ್ ಗಳಲ್ಲಿ ವಿಡಿಯೋ ಕಾಲ್ ಡಿಸ್ಕನೆಕ್ಟ್ ಆಗಿಬಿಡುತ್ತೆ.
ಆ ಮೇಲೆ ನೋಡಿ ಶುರುವಾಗುತ್ತೆ ವಂಚಕಿಯ ಬ್ಲಾಕ್ ಮೇಲ್ ಗೇಮ್ (Blackmail). ಯುವತಿ ಕಾಲ್ ಕಟ್ಮಾಡುತ್ತಿದ್ದಂತೆ ಮತ್ತೊಂದು ನಂಬರ್ ಇಂದ ಕಾಲ್ ಬರುತ್ತೆ. ದೆಹಲಿ ಪೊಲೀಸ್ರು, ಯೂಟ್ಯೂಬ್ ಎಂಪ್ಲಾಯ್ ಅದು ಇದು ಅಂತ ಏನೇನೋ ಕಾಲ್ ಗಳು ಬರುತ್ತೆ.ನಿಮ್ಮ ಖಾಸಗಿ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಆಗಿದೆ, ಅದನ್ನ ಡಿಲಿಟ್ ಮಾಡಲು ಇಷ್ಟು ಹಣ ಕೊಡಿ ಅಂತ ಡಿಮ್ಯಾಂಡ್ ಮಾಡ್ತಾರೆ.
ಇದೇ ತರ 72 ವರ್ಷದ ಡಾಕ್ಟರ್ ಗೆ ಬ್ಲಾಕ್ ಮೇಲ್ ಮಾಡಿ ವಂಚನೆ ಮಾಡಲಾಗಿದೆ. ವೃದ್ದ ಡಾಕ್ಟರ್ ನಗ್ನ ವಿಡಿಯೋ ಮಾಡಿಕೊಂಡು ವಂಚನೆ ಎಸಗಲಾಗಿದೆ.ಈ ರೀತಿ ಬ್ಲಾಕ್ ಮೇಲ್ ಮಾಡುತ್ತಾ ಹಂತ ಹಂತವಾಗಿ ಲಕ್ಷ ಲಕ್ಷ ಹಣವನ್ನ ಈ ಗ್ಯಾಂಗ್ ವಸೂಲಿ ಮಾಡಿದೆ.ಸದ್ಯ ವಂಚನೆ ಸಂಬಂಧ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪ್ರಕರಣ ದಾಖಲಿಸಿಕೊಂಡು ಸೆಂಟ್ರಲ್ ಸೆನ್ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.