ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka swamy murder case) ಆರೋಪಿ ನಟ ದರ್ಶನ್ (Actor darshan) ಬಳ್ಳಾರಿ ಜೈಲಿನಲ್ಲಿ (Bellary jail) ಮೊದಲ ದಿನವೇ ನಕರ ಕಂಡಿದ್ದಾರೆ ಎನ್ನಲಾಗಿದೆ.ಈ ಮುಂಚೆಯೇ ನಟ ದರ್ಶನ್ ಗೆ ಬಳ್ಳಾರಿ ಜೈಲಿಗೆ ಹೊಂದಿಕೊಳ್ಳುವುದು ಕಷ್ಟ ಎಂದು ನಿರೀಕ್ಷಿಸಲಾಗಿತ್ತು. ಅದರಂತೆ ಜೈಲಿನ ಕೊಠಡಿ, ಬಳ್ಳಾರಿಯ ವಾತಾವರಣ ಎರಡೂ ದರ್ಶನ್‌ರನ್ನ ಹೈರಾಣಾಗಿಸಿದೆ.
ಬಳ್ಳಾರಿ ಕಾರಾಗೃಹದ ಸೆಲ್ ನಂಬರ್.15 ರಲ್ಲಿ ರಾತ್ರಿ ಕಳೆದಿರುವ ದರ್ಶನ್, ತಡರಾತ್ರಿ ಒಂದು ಗಂಟೆಯ ತನಕ ನಿದ್ರೆ ಮಾಡದೇ ಒದ್ದಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕೋಣೆಯ ವಿಸ್ತೀರ್ಣ 12 ಅಡಿ ಉದ್ದ-6 ಅಡಿ ಅಗಲವಿದ್ದು, ಇದಕ್ಕೆ ಹೊಂದಿಕೊಳ್ಳಲು ದರ್ಶನ್ ಗೆ ಸಾಧ್ಯವಾಗಿಲ್ಲ.
ಇನ್ನು ಸೆಲ್‌ನಲ್ಲಿ ಫ್ಯಾನಿನ ವ್ಯವಸ್ಥೆ ಇದ್ರೂ ಕೂಡ, ಬಳ್ಳಾರಿಯ ಬಿಸಿಯ ಹಬೆ ರಾತ್ರಿಯಿಡಿ ದರ್ಶನ್‌ರನ್ನ ಹೈರಾಣಾಗಿಸಿದೆ. ಸದ್ಯ ಯಾರು ಪರಿಚಯವಿಲ್ಲದ ಜೈಲಿನಲ್ಲಿ ದರ್ಶನ್ ಕಾಲ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸುಮಾರು 20ಕ್ಕೂ ಹೆಚ್ಚು ಪುಸ್ತಕಗಳನ್ನ ದರ್ಶನ್ ತಮ್ಮ ಜೊತೆಗಿಟ್ಟುಕೊಂಡಿದ್ದಾರೆ ಎನ್ನಲಾಗ್ತಿದೆ.