• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
July 25, 2026
in Top Story
0
ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?
Share on WhatsAppShare on FacebookShare on Telegram

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ 35 ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಹೋರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಆದರೆ, ಈಗ ಹೊಸ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ—ಸಿಜೆಪಿ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆಯೇ?

ADVERTISEMENT
Dharmendra Pradhan Resigns :  ನಾವು ಸಾಧಿಸಿದ್ದೇವೆ #pratidhvani

ಜೂನ್ 6ರಿಂದ ಆರಂಭವಾದ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೊಲೀಸ್ ಲಾಠಿಚಾರ್ಜ್, ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗದ ನಡುವೆಯೂ ಪ್ರತಿಭಟನಾಕಾರರು ಹೋರಾಟ ಮುಂದುವರಿಸಿದ್ದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿತ್ತು.

Dharmendra Pradhan Resigns : ನಾವು ಸಾಧಿಸಿದ್ದೇವೆ; ಅಭಿಜಿತ್‌ ದೀಪ್ಕೆ! #genz

ಈ ನಡುವೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಕೂಡ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು.ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ಸಿಜೆಪಿ ವಕ್ತಾರ ಸೌರವ್ ದಾಸ್, ಜಂತರ್ ಮಂತರ್‌ನಲ್ಲಿನ ಪ್ರತಿಭಟನೆಯನ್ನು ತಕ್ಷಣದಿಂದಲೇ ಅಂತ್ಯಗೊಳಿಸುವುದಾಗಿ ಘೋಷಿಸಿದರು. ಜೊತೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಶಾಂತಿಯುತವಾಗಿ ತಮ್ಮ ಮನೆಗಳಿಗೆ ಮರಳುವಂತೆ ಮನವಿ ಮಾಡಿದರು.ಆದರೆ ಪ್ರತಿಭಟನೆ ಅಂತ್ಯಗೊಂಡ ತಕ್ಷಣವೇ ಮತ್ತೊಂದು ಕುತೂಹಲದ ಚರ್ಚೆ ಆರಂಭವಾಗಿದೆ.

Students protests on pm Modi: ಮೋದಿ ನಮ್ಮಂತ ಮನುಷ್ಯರಲ್ಲ..ಅವರಿಂದ ಮನುಷ್ಯತ್ವನಾ ನಿರೀಕ್ಷೆ ಮಾಡಲು ಆಗಲ್ಲ.!#genz

ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯ ಪಕ್ಷವಾಗಿ ರೂಪುಗೊಳ್ಳಲಿದೆಯೇ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, “ನಮ್ಮ ಹೋರಾಟ ಸಂಪೂರ್ಣವಾಗಿ ವಿದ್ಯಾರ್ಥಿಗಳ ಹಿತಕ್ಕಾಗಿ. ದೇಶದ ವಿದ್ಯಾರ್ಥಿಗಳು ಪ್ರಜ್ಞಾವಂತರು. ಮುಂದೇನು ನಡೆಯಲಿದೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ” ಎಂದು ಹೇಳಿದ್ದಾರೆ.

ಅವರ ಈ ಹೇಳಿಕೆ ಸಿಜೆಪಿ ಭವಿಷ್ಯದ ರಾಜಕೀಯ ನಡೆ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದ್ದು, ವಿದ್ಯಾರ್ಥಿ ಚಳವಳಿಯಾಗಿ ಆರಂಭವಾದ ಈ ಸಂಘಟನೆ ಮುಂದಿನ ದಿನಗಳಲ್ಲಿ ರಾಜಕೀಯ ಅಂಗಳಕ್ಕೆ ಕಾಲಿಡುತ್ತದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ.

Tags: Abhijeet DipkeAshutosh RankaBreaking NewsCJPCJP Political EntryCJP PoliticsDharmendra Pradhan ResignationIndia PoliticsJantar Mantar ProtestLatest News Indianational newsNEET CampaignNEET ProtestNEET UG ProtestNEET UG ScamSaurav DasStudent MovementStudent Protest IndiaYouth Politics
Previous Post

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

Related Posts

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!
Top Story

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

by ಪ್ರತಿಧ್ವನಿ
July 25, 2026
0

ಬೆಂಗಳೂರು : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಕರ್ನಾಟಕದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ...

Read moreDetails
ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

July 25, 2026
ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

July 25, 2026
ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

July 25, 2026
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಪಶ್ನೆ ಪತ್ರಿಕೆ ಸೋರಿಕೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ

July 25, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada