ಚಳಿಗಾಲದಲ್ಲಿ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟ..ಕಾರಣ ತಂಡಿ ಹವಾಮಾನ,ಡ್ರೈ ಏರ್,ಹೆಚ್ಚು ಗಾಳಿ ಅಬ್ಬಬ್ಬಾ ಇದರಿಂದಾಗಿ ಚರ್ಮ ಒಡೆಯುವುದು ಡ್ರೈ ಆಗುವುದು ಹೆಚ್ಚು.. ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ

ಮಾಯಿಶ್ಚರೈಸರ್
ಚಳಿಗಾಲದಲ್ಲಿ ಬೀಸುವ ತಂಪಾದ ಗಾಳಿಯಿಂದ ನಮ್ಮ ತ್ವಚೆ ಒಡೆಯ ಬಾರದೆಂದರೆ ತಪ್ಪದೇ ಮಾಯಿಶ್ಚರೈಸರ್ ಬಳಸುವುದು ಉತ್ತಮ. ಡ್ರೈ ಸ್ಕಿನ್ ಗು ಕೂಡ ಮಾಯಿಶ್ಚರೈಸರ್ ಬೆಸ್ಟ್.

ಹೈಡ್ರಿಟ್ ಆಗಿರಿ
ತಂಪಾದ ವಾತಾವರಣ ಬಾಯಾರಿಕೆಯಾಗುವುದಿಲ್ಲವೆಂದು ಹೆಚ್ಚು ಜನ ಚಳಿಗಾಲದಲ್ಲಿ ನೀರನ್ನು ಕುಡಿಯುವುದಿಲ್ಲ. ಇದರಿಂದ ದೇಹ ಡಿಹೈಡ್ರೇಟ್ ಆಗುತ್ತದೆ. ಉಷ್ಣತೆಯಿಂದಾಗಿ ಚರ್ಮ ಉರಿಯುವುದು ಹೆಚ್ಚಿರುತ್ತದೆ. ಹಾಗಾಗಿ ಹೈಡ್ರೇಟ್ ಆಗಿರುವುದು ಆರ್ತ್ಯಗತ್ಯ ಇದರಿಂದ ಚರ್ಮ ಕೂಡ ಒಳ್ಳೆಯದು.
ಸೂರ್ಯನ ಕಿರಣದಿಂದ ರಕ್ಷಿಸಿಕೊಳ್ಳಿ
ಚಳಿಯಂದು ಹೆಚ್ಚಿನ ಜನ ಬಿಸಿಲಲ್ಲಿ ಓಡಾಡುವುದು ಬಿಸಿಲಲ್ಲಿ ಕಾಲ ಕಳೆಯುವುದು ಮಾಡುತ್ತಾರೆ ಹೀಗೆ ಮಾಡುವುದರಿಂದ ಸನ್ ಟಾನ್ ಆಗುತ್ತದೆ. ಹಾಗೂ ಚರ್ಮ ಡ್ರೈಯಾಗುವುದು ಕೂಡ ಹೆಚ್ಚು.ತಪ್ಪದೆ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.

ಕಠಿಣ ಪ್ರಾಡಕ್ಟ್ ಗಳನ್ನ ಬಳಸದಿರಿ
ನಿಮ್ಮ ಚರ್ಮದ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುವ ಕಠಿಣ ಚರ್ಮದ ಆರೈಕೆ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ.