ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ BMTC ಹೊಸ ಇಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಿದೆ. ಬೆಂಗಳೂರಿನ ಜೀವನಾಡಿ BMTCಯ ಹೊಸ ಬಸ್ ಗೆ ಬೆಂಗಳೂರಿನ ಮಂದಿ ಜೈ ಎಂದಿದ್ದಾರೆ. ಹಾಗಾದರೆ ಹೇಗಿದೆ BMTC ನೂತನ ಪರಿಸರ ಸ್ನೇಹಿ E ಬಸ್ ಗಳು. ಇಲ್ಲಿದೆ ನೋಡಿ ಬಸ್ ಕುರಿತಾದ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್.
12 ಮೀಟರ್ ಉದ್ದದ ನಾನ್ ಎಸಿ ಅಸ್ತ್ರ ಬಸ್ ಗಳನ್ನು ಹೊಸದಾಗಿ ಪರಿಚಯಿಸಿದ BMTC
BMTC ಹೊಸದಾಗಿ ಪರಿಸರ ಸ್ನೇಹಿಯಾದ 300 ಇಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಸಿದೆ. 75ನೇ ಸ್ವಾತಂತ್ರ್ಯ ಮಹೋತ್ಸವದ ಭಾಗವಾಗಿ ಮೊದಲ ಹಂತದಲ್ಲಿ 75 ಬಸ್ ಗಳು ಈಗಾಗಲೇ ಸೇವೆ ಆರಂಭಿಸಿದೆ. ನೋಡಲು ಆಕರ್ಷಣೀಯವಾಗಿರುವ ಈ ಇಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದ ಇದೆ. ಸ್ವಿಚ್ ಎಂಬ ಖಾಸಗಿ ಕಂಪೆನಿಯ ಜೊತೆ ಜಂಟಿಯಾಗಿ ಬಸ್ ರಸ್ತೆಗಿಳಿಸಿದ್ದು, ಹಲವು ಹೈಟೆಕ್ ಫೀಚರ್ ಗಳನ್ನು ಈ ಬಸ್ ಹೊಂದಿದೆ. ಅಲ್ಲದೆ ಈ ಬಸ್ ಗಳಿಗೆ ಅಸ್ತ್ರ ಎಂದು BMTC ನಾಮಕರಣ ಮಾಡಿದೆ. ಮೊದಲ ಹಂತವಾಗಿ 75 ಬಸ್ ಗಳಿಂದ ಮೆಜೆಸ್ಟಿಕ್ ನಿಂದ ನಗರದ ವಿವಿಧ ಭಾಗಗಳಿಗೆ ಕಾರ್ಯಾಚರಣೆ ಆರಂಭಿಸಿದೆ.
BMTCಯ ಹೊಸ E – Bus ವಿಶೇಷತ ಏನು ?
• 45 ನಿಮಿಷ ಚಾರ್ಜಿಂಗ್ 150 + 75 km ಮೈಲೇಜ್
• ದಿನಕ್ಕೆ 200 km ಕ್ರಮಿಸಲು ಕಡಿಮೆ ಇಂಧನ ವ್ಯಯ
• ಸೀಟ್ ಬೈ ಸೀಟ್ ಗೆ ಮಾತ್ರ ಈ ಮೈಲೇಜ್
• ಒಟ್ಟು 41 ಆಸನದ ವ್ಯವಸ್ಥೆ ಬಸ್ ಗೆ ಒದಗಿಸಲಾಗಿದೆ

• ಪ್ರತಿ ಎರಡು ಸೀಟಿಗೂ ಒಂದೊಂದು ಮೊಬೈಲ್ ಚಾರ್ಜಿಂಗ್ ಸ್ಪಾಟ್
• ಅಂಗವಿಕಲ ಪ್ರಯಾಣಿಕರಿಗೆ ಹತ್ತಲು ವಿಶೇಷ ಟೆಕ್ನಾಲಜಿ ಅಳವಡಿಕೆ
• ಅಂಗವಿಕಲರು ಬಳಸುವ ವೀಲ್ ಚೇರ್‌ಗೂ ಜಾಗದ ವ್ಯವಸ್ಥೆ
• ಬಸ್ ಗಳಲ್ಲಿ ಒಟ್ಟು ನಾಲ್ಕು ಸಿಸಿಟಿವಿ ಅಳವಡಿಕೆ
• ಮುಂಭಾಗದಲ್ಲೊಂದು, ಹಿಂಭಾಗದಲ್ಲೊಂದು ಎರಡು ಒಳಭಾಗದಲ್ಲಿ
75ನೇ ಸ್ವಾತಂತ್ರ್ಯ ಮಹೋತ್ಸವದ ಭಾಗವಾಗಿ ಮೊದಲ ಹಂತದಲ್ಲಿ 75 ಬಸ್ ಗಳಿಂದ ಸೇವೆ
BMTC ಈಗಾಗಲೇ ಯಲಹಂಕ, ವಿದ್ಯಾರಣ್ಯಪುರ, ಶಿವಾಜಿನಗರ, ಯಶವಂತಪುರ ಭಾಗಕ್ಕೆ ಹೆಚ್ಚು ಬಸ್ ನಿಯೋಜನೆ ಮಾಡಿದೆ. ಸ್ವಿಚ್ ಎನ್ನುವ ಖಾಸಗಿ ಕಂಪೆನಿ ಜೊತೆ ಜಂಟಿಯಾಗಿ ಬಸ್ ರಸ್ತೆಗಿಳಿಸಿರುವ BMTC, ಪ್ರತಿ km ಗೆ 48 ರೂಪಾಯಿ ನಿಗದಿ ಮಾಡಿದೆ. ಹೊಸ ಇಲೆಕ್ಟ್ರಿಕ್ ಬಸ್ ಮೊದಲ ದಿನ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಅಂಗವಿಕಲರಿಗೆ ಹತ್ತಲು ವಿಶೇಷ ಆಟೋಮೇಟಿಕ್ ಸಿಸ್ಟಮ್ ಹಾಗೂ ಪ್ರಯಾಣಿಕರಿಗೆ ಚಾರ್ಜಿಂಗ್ ಪಾಯಿಂಟ್ ನೀಡಿರುವುದು ಜನರನ್ನು ಹೆಚ್ಚು ಆಕರ್ಷಿಸಿದೆ. ಈ ಬಗ್ಗೆ ಮಾತನಾಡಿದ ನಂದಿನಿ ಎಂಬವರು, BMTCಯ ಬೇರೆ ಬಸ್ ಗಳಿಗಿಂತ ಈ ಬಸ್ ಪ್ರಯಾಣ ಸುಖಕರ ಹಾಗೂ ಸೌಂಡ್ ಇಲ್ಲ, ಕಂಪರ್ಟೆಬಲ್ ಸಿಟ್ಟಿಂಗ್ ಎಂದು BMTC ಹೊಸ ಸಾಹಸಕ್ಕೆ ಪಬ್ಲಿಕ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಒಟ್ಟಾರೆ BMTC ಅಸ್ತ್ರ ಇಲೆಕ್ಟ್ರಿಕ್ ಬಸ್ ಗಳು ಜನರಿಗೆ ಮೆಚ್ಚುಗೆಯಾಗುತ್ತಿದೆ. ಮೊದಲ ಹಂತವಾಗಿ 75 ಬಸ್ ಗಳು ಸೇವೆ ಆರಂಭಿಸಿದರೂ, ಇನ್ನೂ 225 ಬಸ್ ಗಳು ಕ್ರಮೇಣವಾಗಿ ರಸ್ತೆಗೆ ಇಳಿಯಲಿದೆ. ಅಲ್ಲದೆ ಎಲ್ಲವೂ ಇಲೆಕ್ಟ್ರಿಕ್ ಬಸ್ ಗಳು ಆಗಿರುವುದರಿಂದ ವಾಯುಮಾಲಿನ್ಯಕ್ಕೆ ತಡೆಯೊಡ್ಡಲಿದೆ.
