ಮದ್ಯಪಾನ ಆರೋಗ್ಯಕ್ಕೆ ತುಂಬಾನೆ ಹಾನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಕೂಡ ಅದನ್ನು ಕುಡಿಯುವವರ ಸಂಖ್ಯೆ ಹೆಚ್ಚಿದೆ. ಮುಂಚೆ ಹೆಣ್ಣು ಮಕ್ಕಳು ಕುಡಿಯುವುದು ತಪ್ಪು ಎಂಬ ಕಲ್ಪನೆ ಎಲ್ಲರಲ್ಲೂ ಇತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕೂಡ ಸೇವಿಸ್ತಾರೆ. ಆದರೆ ಹೆಣ್ಣು ಮಕ್ಕಳು ತಮ್ಮ ಮುಟ್ಟಿನ ಸಂದರ್ಭದಲ್ಲಿ ಮಧ್ಯಪಾನ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಹೆಚ್ಚು ಜನರ ಅಭಿಪ್ರಾಯ. ಹಾಗಿದ್ರೆ ಪಿರಿಯಡ್ಸ್ ಸಂದರ್ಭದಲ್ಲಿ ಆಲ್ಕೋಹಾಲ್ ಸೇವನೆಯಿಂದಾಗಿ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು.!

ರಕ್ತಸ್ರಾವ ಹೆಚ್ಚು
ಆಲ್ಕೋಹಾಲ್ ರಕ್ತವನ್ನು ತೆಳುಗೊಳಿಸುತ್ತದೆ, ಹಾಗೂ ಹಾಗೂ ಹೆಚ್ಚು ಜನ ಹೆಣ್ಣು ಮಕ್ಕಳಿಗೆ ಮಧ್ಯಪಾನ ಕಿಡಿಯುವುದರಿಂದ ಬ್ಲಡ್ ಫ್ಲೋ ಕೂಡ ಜಾಸ್ತಿ ಇರುತ್ತದೆ. ಹಾಗೂ ವೀಕ್ ಫೀಲ್ ಆಗುತ್ತದೆ.
ಡಿಹೈಡ್ರೇಶನ್
ಮದ್ಯಪಾನ ಸೇವನೆ ಆರೋಗ್ಯವನ್ನು ಡಿಹೈಡ್ರೇಟ್ ಮಾಡುತ್ತದೆ. ಹಾಗೂ ಪೀರಿಯಡ್ಸ್ ಸಂದರ್ಭದಲ್ಲಿ ಆಲ್ಕೋಹಾಲ್ ದೇಹವನ್ನು ಇನ್ನಷ್ಟು ಡಿಹೈಡ್ರೇಟ್ ಮಾಡುತ್ತದೆ. ಮುಟ್ಟಿನ ಸೆಳೆತವನ್ನು ಇನ್ನಷ್ಟು ಹದಗೆಡಿಸುತ್ತದೆ.
ಪೋಷಕಾಂಶಗಳ ಕೊರತೆ
ನಮ್ಮ ದೇಹದಲ್ಲಿರುವ ಆರೋಗ್ಯಕರ ಕೆಂಪು ರಕ್ತ ಕಣಗಳಿಗೆ ಅಗತ್ಯವಾದ ಕಬ್ಬಿಣ ಸೇರಿದಂತೆ ಇನ್ನು ಉಳಿದ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಆಲ್ಕೋಹಾಲ್ ಅಡ್ಡಿಪಡಿಸಬಹುದು.ಹಾಗಾಗಿ ದೇಹದಲ್ಲಿ ಸುಸ್ತು ಹೆಚ್ಚಾಗುತ್ತದೆ.

ಹಾರ್ಮೋನುಗಳ ಅಸಮತೋಲನ
ಆಲ್ಕೋಹಾಲ್ ಇಂದ ಇತರೆ ದಿನಗಳಲ್ಲಿ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಅದ್ರಲ್ಲಿ ಅನಿಯಮಿತ ಮುಟ್ಟು, ಮನಸ್ಥಿತಿ ಬದಲಾವಣೆಗಳು ಮತ್ತು ಇತರ ಲಕ್ಷಣಗಳಿಗೆ ಕಾರಣವಾಗುತ್ತದೆ ಈ ಆಲ್ಕೋಹಾಲ್.