ಭ್ರಷ್ಟ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳ ಮನೆಯಲ್ಲಿ ಅಕ್ರಮ ಹಣ ಪತ್ತೆ ಆದಾಗ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ. ಕಾನೂನು ಮೂಲಕ ಭ್ರಷ್ಟರಿಗೆ ಕಠಿಣ ಶಿಕ್ಷೆ ಆಗಬೇಕು ಅಂತಾ ಜನ ಸಾಮಾನ್ಯರು ಬಯಸುವುದು ಉಂಟು. ಆದರೆ ಇದೀಗ ಹೈಕೋರ್ಟ್ ನ್ಯಾಯಮೂರ್ತಿಗಳ ಮನೆಯಲ್ಲೇ ಕೋಟಿ ಕೋಟಿ ಹಣದ ರಾಶಿ ಪತ್ತೆಯಾಗಿದ್ದಯ, ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಜಿಗುಪ್ಸೆ ಮೂಡುವಂತೆ ಮಾಡಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಲ್ಲಿ ಬರೋಬ್ಬರಿ 15 ಕೋಟಿ ಹಾರ್ಡ್ ಕ್ಯಾಶ್ ಪತ್ತೆಯಾಗಿದೆ. ಇಡೀ ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ..
2 ದಿನದ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಗ್ನಿ ಆಕಸ್ಮಿಕ ನಡೆದಿತ್ತು. ಕೂಡಲೇ ಮನೆಯಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ದೆಹಲಿ ಪೊಲೀಸರು ಆಗಮಿಸಿದ್ರು.. ಮನೆ ಒಳಗೆ ನುಗ್ಗಿ ಬೆಂಕಿ ನಂದಿಸುವಾಗ, ಒಂದು ಕೋಣೆಯಲ್ಲಿ ಸುಮಾರು 15 ಕೋಟಿ ನಗದು ಇರುವ ಬ್ಯಾಗ್ ಪತ್ತೆಯಾಗಿದೆ.. ಕೂಡಲೇ ಹಿರಿಯ ಅಧಿಕಾರಿಗಳಿಗೆ ಈ ವಿಷಯ ಮುಟ್ಟಿಸಿದ್ದು, ಆ ಬಳಿಕ ಹೈಕೋರ್ಟ್ ಜಡ್ಜ್ ಯಶವಂತ್ ವರ್ಮಾ ಅವರ ಕೋಟಿ ಕೋಟಿ ಹಣದ ರಹಸ್ಯ ಬಯಲಾಗಿದೆ..

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮನೆಯಲ್ಲಿ 15 ಕೋಟಿ ಹಣ ಸಿಕ್ಕಿದ್ದು ದೊಡ್ಡ ಸುದ್ದಿಯಾಗಿದೆ. ನ್ಯಾಯಾಧೀಶರಾದ ಯಶವಂತ್ ವರ್ಮಾ ಅವರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ, ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ಗೆ ವರ್ಗಾಯಿಸಿದೆ.. ಸುಪ್ರೀಂಕೋರ್ಟ್ನ ಈ ಕ್ರಮಕ್ಕೆ ಅಲಹಾಬಾದ್ ಬಾರ್ ಕೌನ್ಸಿಲ್ ವಿರೋಧಿಸಿದ್ದು, ಅಮಾನತು ಮಾಡ್ಬೇಕು ಅಂತಾ ಆಗ್ರಹಿಸಿದೆ.. ಅಲ್ಲದೇ ಉನ್ನತ ಮಟ್ಟದ ತನಿಖೆ ಮಾಡ್ಬೇಕು ಅಂತನೂ ಪಟ್ಟುಹಿಡಿದಿದೆ..
ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ವಿಕಾಸ್ ಸಿಂಗ್ ಮಾತನಾಡಿ, ಇದು ಬಹಳ ಗಂಭೀರವಾದ ವಿಷಯ. ಜನ ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ನ್ಯಾಯಾಧೀಶರ ನಿವಾಸದಲ್ಲಿ ಹಣ ಸಿಕ್ಕಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ನ್ಯಾಯಮೂರ್ತಿಗಳನ್ನು ವರ್ಗಾವಣೆಯಲ್ಲ, ಆಂತರಿಕ ವಿಚಾರಣೆ ನಡೆಯಬೇಕು. ಅದಕ್ಕೂ ಮುನ್ನ ಜಡ್ಜ್ ರಾಜೀನಾಮೆ ಕೊಡಬೇಕು. ನ್ಯಾಯಾಲಯದಲ್ಲಿ ಕೇಸ್ ನಡೆಸಲು ಅವಕಾಶ ಕೊಡಬಾರದು. ಇದು ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆ ಅಲುಗಾಡಿಸುತ್ತದೆ ಎಂದಿದ್ದಾರೆ.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಪತ್ತೆ ಆಗಿರುವ 15 ಕೋಟಿ ಹಣ, ಅಕ್ರಮದ ಹಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಿಚಾರದ ಬಗ್ಗೆ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿಷಯ ಪ್ರಸ್ತಾಪಿಸಿದ್ದಾರೆ.. ಜಡ್ಜ್ ಮನೆಯಲ್ಲಿ 15 ಕೋಟಿ ಪತ್ತೆ ಆಗಿರುವ ಬಗ್ಗೆ ಚರ್ಚೆ ಮಾಡ್ಬೇಕು ಎಂದು ಒತ್ತಾಯಿಸಿದ್ದಾರೆ. ಇಂದು ಬೆಳಗ್ಗೆ ನಾವು ಶಾಕಿಂಗ್ ನ್ಯೂಸ್ ಓದಿದ್ವಿ. ದೆಹಲಿ ಹೈಕೋರ್ಟ್ ಜಡ್ಜ್ವೊಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಸಂಸತ್ತಿನ 50 ಸದಸ್ಯರು ನೋಟಿಸ್ ಸಲ್ಲಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ವಿರುದ್ಧ ದೋಷಾರೋಪಣೆ ಬಗ್ಗೆ ವಿಚಾರಣೆ ಆಗಬೇಕು. ನ್ಯಾಯಾಂಗಕ್ಕೂ ಹೊಣೆಗಾರಿಕೆ ವಿಧಿಸುವ ಕೆಲಸ ಆಗ್ಬೇಕು. ಈ ಪ್ರಕರಣ ಸೂಕ್ಷ್ಮವಾಗಿ ಅವಲೋಕಿಸಿ ತನಿಖೆಗೆ ವಹಿಸಿ ಎಂದು ಆಗ್ರಹಿಸಿದ್ದಾರೆ.
ಜೈರಾಂ ರಮೇಶ್ ಮಾತಿಗೆ ಪ್ರತಿಕ್ರಿಯಿಸಿದ ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್, ಈ ವಿಷಯ ಕುರಿತು ವಿಸ್ತೃತ ಚರ್ಚೆ ನಡೆಸಲು ಅಗತ್ಯ ಸಮಯವನ್ನು ನಿಗದಿಪಡಿಸಲಾಗುವುದು ಎಂದಿದ್ದಾರೆ. ಈ ವಿಚಾರವಾಗಿ ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಗಂಭೀರವಾಗಿ ಪರಿಗಣಿಸಿದ್ದಾರೆ. ಕೊಲಿಜಿಯಂ ಸದಸ್ಯರ ಜೊತೆ ಸಭೆ ಮಾಡಿ, 15 ಕೋಟಿ ನಗದು ಮನೆಯಲ್ಲಿ ಹೇಗೆ ಬಂತು..? ಕೇಸ್ ಸೆಟಲ್ಮೆಂಟ್ಗೆ ಯಾರಾದ್ರೂ ತಂದುಕೊಟ್ಟಾ ಹಣನಾ,,? ಈ ಬಗ್ಗೆಯೂ ತನಿಖೆಗೂ ಸೂಚಿಸಲಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಗೆ ಕಪ್ಪು ಚುಕ್ಕೆ ಎನ್ನುವಂತಾಗಿದ್ದು, ಈ ಪ್ರಕರಣದಿಂದ ನ್ಯಾಯಾಂಗ ವ್ಯವಸ್ಥೆ ಕಣ್ತೆರೆಯುವಂತೆ ಆಗಬೇಕಿದೆ.