• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ರಾಜ್ಯದಲ್ಲಿ ಖಾಲಿ ಆಗಿದ್ದ ಬಹುತೇಕ ಡ್ಯಾಂಗಳು ಭರ್ತಿ ಆಗಿದ್ದು ಹೇಗೆ..?

Any Mind by Any Mind
July 28, 2023
in ಇದೀಗ, ಕರ್ನಾಟಕ, ವಿಶೇಷ
0
ಉತ್ತಮ ಮಳೆ, ರಾಜ್ಯದಲ್ಲಿ ಭರ್ತಿಯಾಗುತ್ತಿರುವ ಜಲಾಶಯಗಳು
Share on WhatsAppShare on FacebookShare on Telegram

ರಾಜ್ಯದಲ್ಲಿ ಮುಂಗಾರು ( Manson Rain ) ಮಳೆ ತಡವಾಗಿ ಆರಂಭ ಆಗಿತ್ತು. ಅಂದರೆ ಮೇ ( May ) ಕೊನೆಯಲ್ಲಿ ಬರಬೇಕಿದ್ದ ಮಳೆರಾಯ ಜೂನ್ ( June )​ ಅಂತ್ಯವಾದರೂ ಕರ್ನಾಟಕದ ( Karnataka ) ಬಹುತೇಕ ಭಾಗಗಳಿಗೆ ಕರುಣೆ ತೋರಿಸಲಿಲ್ಲ. ಹೀಗಾಗಿ ರಾಜ್ಯದ ( State ) ಬಹುತೇಕ ಡ್ಯಾಂಗಳಲ್ಲಿ ( Dam ) ನೀರಿನ (Water ) ಸಂಗ್ರಹ ಖಾಲಿ ಆಗಿತ್ತು. ಕುಡಿಯವ ನೀರು ಪೂರೈಸಲು ಸಾಧ್ಯವಾಗದ ಮಟ್ಟಕ್ಕೆ ಜಲಾಶಯಗಳು ತಲುಪಿದ್ವು. ಬೆಳಗಾವಿ ( belagavi ) ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗದೆ ಟ್ಯಾಂಕರ್ ( Tanker )​ ಮೂಲಕ ನೀರು ಪೂರೈಕೆ ಮಾಡುವ ಕೆಲಸಕ್ಕೆ ಕೈ ಹಾಕಲಾಗಿತ್ತು. ಇದೀಗ ಕಳೆದ 20 ದಿನಗಳಿಂದ ಮಳೆ ಆಗುತ್ತಿದ್ದು, ಬಹುತೇಕ ಎಲ್ಲಾ ಜಲಾಶಯಗಳು ತುಂಬುವ ಹಂತಕ್ಕೆ ಬಂದು ತಲುಪಿವೆ. ಇದು ಆಶ್ಚರ್ಯದ ಜೊತೆಗೆ ಸರ್ಕಾರದ ಜಾಣ ಕುರುಡುತನ ಪ್ರಶ್ನಿಸುವಂತೆ ಮಾಡಿದೆ.

ADVERTISEMENT

ರಾಜ್ಯದ ಡ್ಯಾಂಗಳ ಸದ್ಯದ ಪರಿಸ್ಥಿತಿ ಹೇಗಿದೆ..?

ಕೆಆರ್‌ಎಸ್ ಡ್ಯಾಂ ಗರಿಷ್ಟ ಸಂಗ್ರಹ ಸಾಮರ್ಥ್ಯ 49.45 TMC ಇದ್ದು ಸದ್ಯ 20 TMC ಆಗಿದೆ. ಲಿಂಗನಮಕ್ಕಿ ಗರಿಷ್ಟ ಸಂಗ್ರಹ ಸಾಮರ್ಥ್ಯ 151.75 TMC ಆಗಿದ್ದು, ಸದ್ಯ 47 TMC ಅಷ್ಟಿದೆ. ಸೂಪಾ ಗರಿಷ್ಟ ಸಂಗ್ರಹ ಸಾಮರ್ಥ್ಯ 145.33 TMC ಆಗಿದ್ದು, ಸದ್ಯದ ಸಾಮರ್ಥ್ಯ 57.15 TMC ಆಗಿದೆ. ಆಲಮಟ್ಟಿ ಗರಿಷ್ಟ ಸಂಗ್ರಹ ಸಾಮರ್ಥ್ಯ 123.08 TMC ಆಗಿದೆ. ಸದ್ಯದ ಮಟ್ಟ 63 TMC ಆಗಿದೆ. ತುಂಗಭದ್ರಾ ಗರಿಷ್ಟ ಸಂಗ್ರಹ ಸಾಮರ್ಥ್ಯ 105.79 TMC ಆಗಿದ್ದು, ಇಂದಿನ ನೀರಿನ ಸಂಗ್ರಹ 26 TMC ಅಷ್ಟಿದೆ. ಭದ್ರಾ ಗರಿಷ್ಟ ಸಂಗ್ರಹ ಸಾಮರ್ಥ್ಯ 71.54 TMC, ಸದ್ಯದ ಸ್ಥಿತಿ 33.83 TMC, ಹೇಮಾವತಿ ಗರಿಷ್ಟ 37.10 TMC ಆಗಿದ್ದು, 22 TMC ನೀರು ಸಂಗ್ರಹವಾಗಿದೆ. ನಾರಾಯಣಪುರ ಡ್ಯಾಂ 33.31 TMC ಸಂಗ್ರಹ ಸಾಮರ್ಥ್ಯವಿದ್ದು, 16 TMC ನೀರು ಸಂಗ್ರಹವಾಗಿದೆ. ಕಬಿನಿ ಗರಿಷ್ಟ ಸಂಗ್ರಹ ಸಾಮರ್ಥ್ಯ 19.52 TMC ಇದ್ದು, 17 TMC ನೀರು ಸಂಗ್ರಹವಾಗಿದೆ.

ಜಲಾಶಯಗಳ ನೀರಿನ ಮಟ್ಟ ಇಷ್ಟು ಬೇಗ ಭರ್ತಿ ಹೇಗೆ..?

ರಾಜ್ಯದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಜಲಾಶಯಗಳು ಇವೆ. ಹೆಸರಿಗೆ ಮಾತ್ರ ಹೇಳಿಕೊಳ್ಳುವುದಕ್ಕೆ ದೊಡ್ಡ ಜಲಾಶಯಗಳು. ಆದರೆ ಪ್ರತಿಯೊಂದು ಜಲಾಶಯಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ ಆಗಿದೆ ಎನ್ನುತ್ತಾರೆ ನೀರಾವರಿ ತಜ್ಞರು. ಉದಾಹರಣೆಗೆ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಅಣೆಕಟ್ಟು ನೀರು ಸಂಗ್ರಹದ ಸಾಮರ್ಥ್ಯ 49.45 ಟಿಎಂಸಿ ನೀರು. 121 ಎತ್ತರದ ಈ ಅಣೆಕಟ್ಟೆಯಲ್ಲಿ ಇನ್ನೂ ಏಳೆಂಟು ಟಿಎಂಸಿ ನೀರು ಇದ್ದಾಗಲೇ ಬಳಕೆಗೆ ಯೋಗ್ಯವಲ್ಲ ಅನ್ನೋ ಚರ್ಚೆಗಳು ಶುರುವಾಗುತ್ತದೆ. ಆರೇಳು ಅಡಿಯಷ್ಟು ಹೂಳು ತುಂಬಿಕೊಂಡಿದ್ದು, ನೀರು ತಿಳಿಯಾಗುವುದಿಲ್ಲ ಅನ್ನೋ ಮಾತಿದೆ.

ಈ ಸುದ್ದಿಯನ್ನೂ ಓದಿದ್ದೀರಾ ? Viral Video ; ರಸ್ತೆ ದಾಟಿದ ಜಿಂಕೆಗಳ ಹಿಂಡು, ಅಚ್ಚರಿಗೊಂಡ ನೆಟ್ಟಿಗರು

ಬೇಗನೆ ಭರ್ತಿಯಾಗುವ ಡ್ಯಾಂಗಳು, ಸಂಗ್ರಹ ಸಾಮರ್ಥ್ಯ ಕುಸಿತ..!

ನೀರು ಸಂಗ್ರಹದ ಸಾಮರ್ಥ್ಯ ಹೆಚ್ಚಾಗಿದ್ದರೂ ಬಹುತೇಕ ಎಲ್ಲಾ ಡ್ಯಾಂಗಳಲ್ಲೂ ಹೂಳು ತುಂಬಿಕೊಂಡಿರುವ ಪರಿಣಾಮ, ನೀರಿನ ಸಂಗ್ರಹ ಸಾಮರ್ಥ್ಯ ಕುಸಿದೆ. ಹೇಳಿಕೊಳ್ಳುವುದಕ್ಕೆ ನೂರಾರು ಟಿಎಂಸಿ ಸಾಮರ್ಥ್ಯ ಇದ್ದರೂ ರೈತರು ಹಾಗು ನಗರ ಪ್ರದೇಶಗಳ ಕುಡಿಯುವ ನೀರಿಗೆ ಬಳಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಸರ್ಕಾರಕ್ಕೆ ಹೂಳು ತೆಗೆಯುವುದರಿಂದ ಯಾವುದೇ ಲಾಭ ಆಗಲ್ಲ ಅನ್ನೋ ಕಾರಣಕ್ಕೆ ರೈತರ ಬಗ್ಗೆ ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ. ಈಗಿನ ಕಾಂಗ್ರೆಸ್​ ಸರ್ಕಾರ ಆದರೂ ಈ ಬಗ್ಗೆ ಗಮನ ವಹಿಸಿದ್ರೆ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಪ್ಪಿಸಬಹುದು. ಆದರೆ ಸರ್ಕಾರ ಈಗಾಗಲೇ ಉಚಿತ ಯೋಜನೆಗಳಿಂದ ಅಭಿವೃದ್ಧಿಗೆ ಕಾಸಿಲ್ಲ ಎಂದಿರುವುದು ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಸೃಷ್ಟಿಸಿದೆ.

Tags: Kabini DamKRS DamLinganamakki DamMandyaMansoon
Previous Post

ಸ್ವಲ್ಪ ತಡವಾಗಿದ್ದಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಬಿಟ್ಟು ಹಾರಿದ ಏರ್ ಏಷಿಯಾ ವಿಮಾನ

Next Post

ಗ್ಯಾಂಗ್‌ಸ್ಟರ್‌ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕೃತ

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ರವಿ ಪೂಜಾರಿ

ಗ್ಯಾಂಗ್‌ಸ್ಟರ್‌ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕೃತ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada