• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?

ಪ್ರತಿಧ್ವನಿ by ಪ್ರತಿಧ್ವನಿ
March 31, 2026
in Top Story, ರಾಜಕೀಯ, ವಿದೇಶ, ವಿಶೇಷ
0
ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?
Share on WhatsAppShare on FacebookShare on Telegram
ADVERTISEMENT

ಶ್ರೀಪಾದ ಭಟ್ಕ ಶಿಕ್ಷಣ ತಜ್ಞರು :

ಕಲ್ಯಾಣ ಯೋಜನೆಗಳ ಕುರಿತು ಪರ ವಿರೋಧ ಚರ್ಚೆಗಳು ಕೇವಲ ಮಧ್ಯಮ ವರ್ಗದ ಕೊಳ್ಳುಬಾಕುತನ ಹಾಗೂ ಸ್ವಾರ್ಥದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದೆ.
ಇಂದಿಗೂ 80 ಕೋಟಿ ಜನಸಂಖ್ಯೆ ಬಿಪಿಎಲ್ ಕಾರ್ಡ್ ಮೇಲೆ ಅವಲಂಬಿತರಾಗಿದ್ದಾರೆ ಎನ್ನುವ ವಾಸ್ತವ ಸಂಗತಿಯ ಹಿನ್ನೆಲೆಯಲ್ಲಿ ಈ ಕಲ್ಯಾಣ ಯೋಜನೆಗಳ ಮಹತ್ವ ಅರಿವಾಗುತ್ತದೆ.
ಬಡ ಕುಟುಂಬಗಳ ಆಸ್ತಿ ನಿರ್ಮಾಣ, ಭೂಮಿ ಹಕ್ಕು, ಗುಣಮಟ್ಟದ ಉದ್ಯೋಗ, ಸಾಮಾಜಿಕ ನ್ಯಾಯದ ಅನುಷ್ಠಾನ ಎಲ್ಲವೂ ಶೇ.40 ಪ್ರಮಾಣದಲ್ಲಿಯಾದರೂ ಸಾಕಾರಗೊಂಡಿದ್ದರೆ ಚುನಾವಣೆ ಘೋಷಣೆ ಮಟ್ಟಕ್ಕೆ ಇಳಿದಿರುವ ಕಲ್ಯಾಣ ಯೋಜನೆಗಳನ್ನು ವಿಮರ್ಶಾತ್ಮಕವಾಗಿ ನೋಡಬಹುದಾಗಿತ್ತು. ಆದರೆ ಅಂತಹ ಪರಿಸ್ಥಿತಿ ಇಲ್ಲ. ಹೀಗಾಗಿ ಸರ್ಕಾರಕ್ಕೆ ವೋಟ್ ಬ್ಯಾಂಕ್ ರಾಜಕಾರಣ ಹೊರತಾಗಿ ಮತ್ಯಾವುದೇ ಆಸಕ್ತಿ ಇಲ್ಲ ಎನ್ನುವುದು ಇಲ್ಲಿ ನಿಜವಾದರೂ ಕಲ್ಯಾಣ ಯೋಜನೆಗಳಿಂದ ತೀವ್ರ ಬಡತನ ಮತ್ತು ಹಸಿವಿನಿಂದ ನರಳುವುದು ಕಡಿಮೆಯಾಗುತ್ತದೆ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳಬೇಕು.

Why Do Israel and the United States See the Iran Threat on Different  Strategic Timelines? - The Media Line

Samarth Shamanur Davanagere By election| ಡಬಲ್‌ ಡಿಗ್ರಿ ಮಾಡಿದವರಿಗೇನೆ ಈಗ ಕೆಲಸ ಸಿಗ್ತಾಯಿಲ್ಲ #pratidhvani

ಇದು ಒಂದು ರೀತಿಯಲ್ಲಿ ‌ಸರ್ಕಾರದ ಮಧ್ಯಸ್ಥಿಕೆಯೂ ಹೌದು. ಆದರೆ ಈ ರೀತಿಯ ಮಧ್ಯಪ್ರವೇಶದಿಂದ ಜನತೆ ಸಾರ್ವಜನಿಕ ಶಿಕ್ಷಣ, ಆರೋಗ್ಯ, ಆರ್ಥಿಕ ‌ಸಬಲೀಕರಣ ಕುರಿತು ಪ್ರಶ್ನಿಸುವುದನ್ನೇ ಮರೆತಿದ್ದಾರೆ. ಈ ತಾತ್ಕಾಲಿಕ ಪರಿಹಾರವೇ ಶಾಶ್ವತವಾಗಿ ಉಳಿಯುತ್ತದೆ ಎನ್ನುವುದು ಆತಂಕದ ವಿಚಾರ. ಇರಲಿಮುಖ್ಯವಾಗಿ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಒಂದು ಆರ್ಥಿಕ ಸುರಕ್ಷಿತ ವಲಯ ರೂಪಿಸುವುದು ಅಗತ್ಯವಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಸಿದ್ದರಾಮಯ್ಯನವರಂತಹ ಸಮರ್ಥ ಹಣಕಾಸು ತಜ್ಞರೇ ತಮ್ಮ ಐದು ಗ್ಯಾರಂಟಿ ಯೋಜನೆಗಳಿಗೆ ತಗಲುವ 52000 ಕೋಟಿ ವೆಚ್ಚವನ್ನು ಸರಿದೂಗಿಸಲು ಹೆಣಗುತ್ತಿದ್ದಾರೆ, ಇಂದಿಗೂ ಸಾಧ್ಯವಾಗಿಲ್ಲ. ಇದು ಸಮಸ್ಯೆ.

IOC urges customers to book Indane cooking gas refills post-6 pm citing  heavy peak-hour

Bagalkote By Election : ಬಾಗಲಕೋಟೆ ಪ್ರಚಾರದ ಅಖಾಡದಲ್ಲಿ ಯತೀಂದ್ರ ಸಿದ್ದರಾಮಯ್ಯ..! #pratidhvani

ಈಗ ನೇರವಾಗಿ ಎಲ್ ಪಿಜಿ ವಿಷಯಕ್ಕೆ ಬಂದರೆ ಸರ್ಕಾರದ ಮಾಹಿತಿ ಪ್ರಕಾರ ಉಜ್ವಲಾ ಯೋಜನೆ ಅಡಿಯಲ್ಲಿ
ಇದುವರೆಗೂ ಅಂದಾಜು 31 ಕೋಟಿ ಜನಸಂಖ್ಯೆ ಉಚಿತ ಸಂಪರ್ಕ ಪಡೆದುಕೊಂಡಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. ಹಾಗೆಯೇ 1.5 ಕೋಟಿ ಜನಸಂಖ್ಯೆ ಸಂಪರ್ಕ ಪಡೆದ ನಂತರ ಎರಡನೇ ಬಾರಿ ಸಿಲಿಂಡರ್ ಖರೀದಿಸಿಲ್ಲ. ಅಂದರೆ ಅವರು ಮರಳಿ ಹಳೆಯ ಸಾಂಪ್ರದಾಯಿಕ ಒಲೆ ಪದ್ಧತಿಗೆ ಮರಳಿದ್ದಾರೆ. ಹಾಗೆಯೇ ಮೂರನೇ ಬಾರಿ ‌ಸಿಲಿಂಡರ್ ಖರೀದಿಸದಿರುವವರ ಪ್ರಮಾಣವೂ ಇದೆ. ಇದಕ್ಕೆ ಮುಖ್ಯ ಕಾರಣ ಸಿಲಿಂಡರ್ ನ ದುಬಾರಿ ಬೆಲೆ.

After price pinch, Kolkata homes now complain of LPG cylinder booking  refusals | Kolkata News - The Times of India

Bagalkote By Election : ಬಾಗಲಕೋಟೆಯಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಯತೀಂದ್ರ ಹೇಳಿದ್ದೇನು..!

ಅಂದರೆ ಸರ್ಕಾರ ಉಜ್ವಲ ಯೋಜನೆ ಅಡಿಯಲ್ಲಿ ಮತ ಪ್ರಮಾಣ ಹೆಚ್ಚಿಸಿ ಕೊಂಡಿತು, ಆದರೆ ಅದರ ನಿಜದ ಉದ್ದೇಶ ಸಾಧಿಸಲು ವಿಫಲವಾಗಿದೆ. ಮತ್ತೊಂದೆಡೆ ಈ ಉಚಿತ ಗ್ಯಾಸ್ ಸಂಪರ್ಕದ ವೆಚ್ಚವನ್ನು ಮತ್ತು ಪೂರೈಕೆಯನ್ನು ಸರಿದೂಗಿಸಲು ಅಗತ್ಯವಿರುವ ಬದಲಿ ಕಾರ್ಯಯೋಜನೆಗಳನ್ನು ರೂಪಿಸಲು ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ. ಶೇ.65ರಷ್ಟಿರುವ ಎಲ್ ಪಿಜಿ ಆಮದನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ ಸ್ಥಳೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಇವರಿಗೆ ಸಾಧ್ಯವಾಗಲಿಲ್ಲ. ಕ್ರೂನಿ ಬಂಡವಾಳಶಾಹಿಗಳ ಪರವಿರುವ ಮೋದಿಯಂತಹ ಪ್ರಧಾನಿಗಳಿಂದ ಇದು ಸಾಧ್ಯವೂ ಇರಲಿಲ್ಲ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಮೂಲಕ ಕೇವಲ ಚುನಾವಣಾ ಪ್ರಚಾರ ಮತ್ತು ಅಂಬಾನಿ, ಅದಾನಿಗಳ ಸಂಪತ್ತಿನ ಹೆಚ್ಚಳದ ಕಡೆಗೆ ಗಮನ ಹರಿಸಿತ್ತೇ ಹೊರತು ಸಾರ್ವಜನಿಕ ಉದ್ಯಮಗಳ ಮೂಲಕ ಅನಿಲ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸುವುದರ ಕುರಿತು, ಅವಶ್ಯಕವಾದ ಹೊಸ ತಂತ್ರಜ್ಞಾನ ಕುರಿತು ನಿರ್ಲಕ್ಷಿಸಿತು.

LPG Shortage Crisis Live: Swiggy and Zomato likely to face shutdown in  Andhra Pradesh tomorrow amid gas shortage | Financial Express (India)

ಉದಾಹರಣೆಗೆ ಕ್ರಿಷ್ಣಾ-ಗೋದಾವರಿ ಜಲಾನಯನ ಪ್ರದೇಶದಲ್ಲಿ ಉತ್ಪಾದನೆ ಕುಂಠಿತಗೊಳ್ಳತೊಡಗಿದಾಗ ಅದಕ್ಕೆ ಸೂಕ್ತ ಕ್ರಮ ಅಥವಾ ಬದಲಿ ಯೋಜನೆ ಕಂಡುಕೊಳ್ಳಲಿಲ್ಲ.
ಹಳೆಯ ಪ್ಲಾಂಟ್ ಗಳಿಂದ(ಅಸ್ಸಾಂ ರಾಜ್ಯ) ಉತ್ಪಾದನೆ ಪ್ರಮಾಣ ಕಡಿಮೆಯಾಗತೊಡಗಿತು. ಇದಕ್ಕೆ ಅಗತ್ಯವಿರುವ ಕಾರ್ಯಯೋಜನೆ, ಆಧುನೀಕರಣ ರೂಪಿಸಲಿಲ್ಲ.
ಕಳೆದ ಹತ್ತು ವರ್ಷಗಳಲ್ಲಿ ಸಾರ್ವಜನಿಕ ವಲಯಗಳಾದ ಓಎನ್ ಜಿಸಿ, ಆಯಿಲ್ ಇಂಡಿಯಾ ಮುಂತಾದ ಮೂಲಗಳಿಂದ ಉತ್ಪಾದನೆಯಲ್ಲಿ ಶೇ.10ರಷ್ಟು ಕಡಿಮೆಯಾಯಿತು. 2012-25ರ ಅವಧಿಯಲ್ಲಿ ಕಚ್ಚಾ ತೈಲದ ಉತ್ಪಾದನೆಯಲ್ಲಿ ಶೇ.26.3 ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಶೇ.24.1ರಷ್ಟು ಕಡಿಮೆಯಾಗಿದೆ.

Modi govt allowed Adani coal deals it knew were 'inappropriate' | Business  and Economy | Al Jazeera

Davanagere By Election ; ದಾವಣಗೆರೆಯಲ್ಲಿ ಕಾಂಗ್ರೆಸ್‌, ಬಿಜೆಪಿಗೆ ಸೋಲು..! #jds #hdkumaraswamy

ಇದು ಬೇಡಿಕೆ-ಪೂರೈಕೆ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮತ್ತೊಂದೆಡೆ ತೈಲ ಮಾರ್ಕೆಟಿಂಗ್ ಕಂಪನಿಗಳಾದ(ಓಎಂಸಿ) ಐಓಸಿಎಲ್, ಬಿಪಿಸಿಎಲ್, ಹೆಚ್ ಪಿಸಿಎಲ್ ಈ ಆಮದು ನೀತಿಯಿಂದ ಲಾಭದಲ್ಲಿವೆಯಂತೆ. ಆದರೆ ಅದಾನಿ ಟೋಟಲ್ ಗ್ಯಾಸ್ ಉದ್ಯಮ ಲಾಭದಲ್ಲಿದೆ. ರಿಲಯನ್ಸ್ ಪೆಟ್ರೋ ಕೆಮಿಕಲ್ ಇಂಡಸ್ಟ್ರಿ ದೇಶದಲ್ಲಿಯೇ ಬೃಹತ್ತಾದ ಉದ್ಯಮ.. ಈಗ ಹೇಳಿ.. ದೇಶ ಉದ್ಧಾರವಾಗುವುದಾರೂ ಹೇಗೆ? ಅಂಬಾನಿ, ಅದಾನಿಗಳ ಬ್ಯುಸಿನೆಸ್ ಆದ್ಯತೆಯಾದಾಗ ಇಂತಹ ಬಿಕ್ಕಟ್ಟು ನಿರೀಕ್ಷಿತ. ಈ ಅಂಶಗಳು ಇಂದಿನ ಎಲ್ ಪಿಜಿ ಬಿಕ್ಕಟ್ಟಿಗೆ ಮುಖ್ಯ ಕಾರಣ. ಪಶ್ಚಿಮ ಏಷ್ಯಾದ ಯುದ್ಧ ಈ ಗಾಯಕ್ಕೆ ಉಪ್ಪು ಸವರಿದೆ. ಈಗ ಯಾವುದೇ ದಾರಿ ಹುಡುಕುವ ವಿವೇಚನೆಯೂ ಇಲ್ಲದ ಕೇಂದ್ರ ಸರ್ಕಾರ blame game, whatabouteryಯಂತಹ ಅಗ್ಗದ ತಂತ್ರದಲ್ಲಿ ತೊಡಗಿದೆ..

Kangana Ranaut: ಒಬ್ಬ ಬುಡಕಟ್ಟು ಜನಾಂಗದವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಲಾಯಿತು-RAGA ವಿರುದ್ಧ ಕಂಗನಾ ವಾಗ್ದಾಳಿ
Tags: ‌ India#pmmodiAdani and AmbaniAmericaDKShivakumarGasIraniran israel america #iran iranisraelamerica amitshahiranisraelamericaIsraelkarnatakanewspetrolPetrol pricepoliticalrahulgandhiShripad Bhatsiddaramaiah
Previous Post

30 ಮಾರ್ಚ್ ವೀರ ಯೋಧ ಜನರಲ್ ತಿಮ್ಮಯ್ಯರವರ ಜನುಮ ದಿನೋತ್ಸವ

Next Post

ಬಿಜೆಪಿಗೆ ಮರುಪ್ರವೇಶಕ್ಕೆ ಎಸ್.ಟಿ. ಸೋಮಶೇಖರ್ ಯಿಂದ ಯಡಿಯೂರಪ್ಪರಿಗೆ 13 ಪ್ರಶ್ನೆಗಳ ಸವಾಲು

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಬಿಜೆಪಿಗೆ ಮರುಪ್ರವೇಶಕ್ಕೆ ಎಸ್.ಟಿ. ಸೋಮಶೇಖರ್ ಯಿಂದ ಯಡಿಯೂರಪ್ಪರಿಗೆ 13 ಪ್ರಶ್ನೆಗಳ ಸವಾಲು

ಬಿಜೆಪಿಗೆ ಮರುಪ್ರವೇಶಕ್ಕೆ ಎಸ್.ಟಿ. ಸೋಮಶೇಖರ್ ಯಿಂದ ಯಡಿಯೂರಪ್ಪರಿಗೆ 13 ಪ್ರಶ್ನೆಗಳ ಸವಾಲು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada