• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬುಲ್ಡೋಜರ್‌ ಜಸ್ಟೀಸ್‌ಗೆ ಸುಪ್ರೀಂ ಕೊಕ್‌ !

ಪ್ರತಿಧ್ವನಿ by ಪ್ರತಿಧ್ವನಿ
September 2, 2024
in Top Story, ದೇಶ, ರಾಜಕೀಯ
0
ಬುಲ್ಡೋಜರ್‌ ಜಸ್ಟೀಸ್‌ಗೆ ಸುಪ್ರೀಂ ಕೊಕ್‌ !
Share on WhatsAppShare on FacebookShare on Telegram

ಅಪರಾಧಿಯ ಮನೆ ನೆಲಸಮಗೊಳಿಸುವ ಹಕ್ಕು ನಿಮಗಿಲ್ಲ: ನ್ಯಾಯಪೀಠ

ADVERTISEMENT

ನವದೆಹಲಿ: ಯಾವುದೋ ಅಪರಾಧ ಪ್ರಕರಣಗಳಲ್ಲಿ ಆರೋಪಿಯೋ, ಅಪರಾಧಿಯೋ ಭಾಗಿಯಾಗಿದ್ದಕ್ಕೆ ಆತನ ಇಡೀ ಮನೆಯನ್ನೇ ಧ್ವಂಸಗೊಳಿಸುವ “ಬುಲ್ಡೋಜರ್‌ ನ್ಯಾಯ” (Bulldozer justice) ಅನುಸರಿಸಕೂಡದು ಎಂದು ಸುಪ್ರೀಂಕೋರ್ಟ್‌ (Supreme court)  ಸೋಮವಾರ ಹೇಳಿದೆ. ಅಲ್ಲದೇ, ಒಬ್ಬರ ತಪ್ಪಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ನೀಡುವುದು ಎಷ್ಟು ಸರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆ ತೆಗದುಕೊಂಡಿದೆ.

ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ (Uttarpradesh yogi Government) ಸೇರಿದಂತೆ ದೇಶದ ಹಲವೆಡೆ ಅಪರಾಧ ಪ್ರಕರಣಗಳ ಆರೋಪಿಗಳ ಮನೆಯನ್ನು ಬುಲ್ಡೋಜರ್‌ ಮೂಲಕ ಆಡಳಿತಾಧಿಕಾರಿಗಳು ನೆಲಸಮಗೊಳಿಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ಸುಪ್ರೀಂಕೋರ್ಟ್‌ನ ಈ ಮಹತ್ವದ ನಡೆ ಮನ್ನಣೆ ಪಡೆದಿದೆ.

ದಿಲ್ಲಿಯ ಜಹಂಗೀರ್‌ ಪುರಿ ಮತ್ತು ರಾಜಸ್ಥಾನದ ಉದಯಪುರದಲ್ಲಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಆರೋಪಿಗಳ ನಿವಾಸವನ್ನು ನೆಲಸಮಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹಾಗೂ  ದೇಶಾದ್ಯಂತ ಈ ಬೋಲ್ಡೋಜರ್‌ ನ್ಯಾಯ ಪದ್ಧತಿ ಹೆಚ್ಚದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ನಲ್ಲಿ 2 ಅರ್ಜಿಗಳು ಸಲ್ಲಿಕೆಯಾಗಿದ್ದವು.

ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್‌ ಅವರ ನ್ಯಾಯಪೀಠ ಸೋಮವಾರ ಅರ್ಜಿಗಳನ್ನು ವಿಚಾರಣೆ ನಡೆಸಿದೆ. ಈ ವೇಳೆ “ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ಆರೋಪಿಯ ಮನೆಯಾಗಲಿ, ಅಪರಾಧಿಯ ಮನೆಯನ್ನಾಗಲಿ ನೆಲಸಮಗೊಳಿಸುವುದು ಎಷ್ಟು ಸರಿ ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಜತೆಗೆ ಅಪರಾಧಿ ಅಥವಾ ಆರೋಪಿಯ ಕಾರಣಕ್ಕಾಗಿ ಮನೆ ಧ್ವಂಸಗೊಳಿಸಿ ಇಡೀ ಕುಟುಂಬವನ್ನು ಶಿಕ್ಷಿಸುವ ಹಕ್ಕು ಯಾರಿಗೂ ಇಲ್ಲ ಎಂದೂ ಹೇಳಿದೆ.

 ಅಕ್ರಮ ಕಟ್ಟಡ ಮಾತ್ರ ಕಡೆವಿದ್ದೇವೆ: ಕೇಂದ್ರ

ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ಮೆಹ್ತಾ ಈ ಬಗ್ಗೆ ನ್ಯಾಯಪೀಠಕ್ಕೆ ಸ್ಪಷ್ಟನೆ ನೀಡಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಯಾವುದೇ ಕಟ್ಟಡವನ್ನು ನೆಲಸಮ ಮಾಡಲಾಗಿಲ್ಲ. ಆದರೆ, ಕಟ್ಟಡಗಳು ಅತಿಕ್ರಮ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಾರಣಕ್ಕಷ್ಟೇ ನೆಲಸಮಗೊಳಿಸಲಾಗಿದೆ ಎಂದಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ “ ಅಕ್ರಮ ಕಟ್ಟಡಗಳ ತೆರವಿಗೂ ರೀತಿ- ನೀತಿ ಇದೆ. ಈ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲಾಗುವುದು ಎಂದಿದೆ. ಅಲ್ಲದೇ, ಅಂಥ ಅಕ್ರಮ ಕಟ್ಟಡಗಳ ತೆರವಿಗೂ ಮೊದಲು ನೋಟಿಸ್‌ ನೀಡಿ, ಪ್ರತಿಕ್ರಿಯಿಸಲು ಸಮಯ ನೀಡಿ, ಕಾನೂನು ಪರಿಹಾರ ಹುಡುಕಿಕೊಳ್ಳಲೂ ಅವಕಾಶ ನೀಡಿ ನಂತರದಲ್ಲಿ ತೆರವಿಗೆ ಮುಂದಾಗಿ ಎಂದೂ ಸಲಹೆ ನೀಡಿದೆ. ಜತೆಗೆ ನಾವು ಯಾವುದೇ ಅಕ್ರಮ ಕಟ್ಟಡಗಳ ನಿರ್ಮಾಣವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ತೆರವಿಗೂ ನೀತಿ ನಿಯಮ ಇರಬೇಕು, ಅವುಗಳನ್ನು ಅನುಸರಿಸಬೇಕು ಎಂದು ಹೇಳಿದೆ.

Tags: 'bulldozer justice'BJPbuldozer justicebulldozerbulldozer justice in indiabulldozer justice in kashmirbulldozer justice in parliamentbulldozer justice in upbulldozer justice parliamentbulldozer justice patna high courtbulldozer justice supreme courtbulldozer politicsCongress Partyprayagraj bulldozerprayagraj bulldozer actionrajasthan bulldozer politicssrikant tyagi bulldozersupreme court stop bulldozer justiceYogi Adityanathನರೇಂದ್ರ ಮೋದಿಬಿಜೆಪಿಯೋಗಿ ಆದಿತ್ಯನಾಥ್
Previous Post

ಹೈಕೋರ್ಟ್​ನಲ್ಲಿ ಸಿಎಂ Siddaramaiah ಅರ್ಜಿ ವಿಚಾರಣೆ ಕ್ಲೈಮಾಕ್ಸ್​

Next Post

ರಸ್ತೆ ಗುಂಡಿ ಮುಚ್ಚಲು ಪಾಲಿಕೆಗೆ 15 ದಿನಗಳ ಡೆಡ್‌ಲೈನ್ – ಡಿಸಿಎಂ ಡಿಕೆ ಶಿವಕುಮಾರ್ !

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

April 30, 2026
Next Post
ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಡಿಸಿಎಂ.. ಡಿಕೆ ಶಿವಕುಮಾರ್‌ ಕಟ್ಟಪ್ಪಣೆ..

ರಸ್ತೆ ಗುಂಡಿ ಮುಚ್ಚಲು ಪಾಲಿಕೆಗೆ 15 ದಿನಗಳ ಡೆಡ್‌ಲೈನ್ - ಡಿಸಿಎಂ ಡಿಕೆ ಶಿವಕುಮಾರ್ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada