ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ರಾಜೀನಾಮೆ ನೀಡಲು ನಿರ್ಧಾರ ಮಾಡಿರುವ ವಿಚಾರವಾಗಿ ವಿಧಾನಸಭಾ ಸ್ವೀಕರ್ ಯು.ಟಿ.ಖಾದರ್ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಆತ್ಮೀಯರು, ಹಿರಿಯರಾದ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ರಾಜೀನಾಮೆ ನಿರ್ಧಾರದಿಂದ ನಾನು ಅತ್ಯಂತ ಆಶ್ಚರ್ಯ ಚಕಿತನಾಗಿದ್ದೇನೆ. ನಾನು ತಕ್ಷಣ ಅವರಲ್ಲಿ ದೂರವಾಣಿ ಮೂಲಕ ಮಾತನಾಡಿದ್ದೇನೆ. ಈ ರೀತಿಯ ಯಾವುದೇ ದುಡುಕಿನ ನಿರ್ಧಾರ ಬೇಡ ಎಂದಿದ್ದೇನೆ. ಮತ್ತೊಮ್ಮೆ ಇದ್ರ ಬಗ್ಗೆ ಪುನರ್ ಪರಿಶೀಲನೆ ಮಾಡಲು ಕೇಳಿಕೊಂಡಿದ್ದೇನೆ. ನಾನು ಇನ್ನೊಮ್ಮೆ ಅವರಲ್ಲಿ ಮಾತನಾಡಿ ಅವರ ಮನ ಒಲಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ರಾಜಿನಾಮೆ ಬಗ್ಗೆ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿದ್ದಾರೆ. ರಾಜಕಾರಣ ಬಹಳ ಕೆಳಮಟ್ಟಕ್ಕೆ ಹೋಗ್ತಾಯಿದೆ. ರಾಜ್ಯದ ಜನರು ಬಹಳ ಸೌಮ್ಯ ಸ್ವಭಾವದವರು. ಮೌಲ್ಯಾಧಾರಿತ ರಾಜಕಾರಣಕ್ಕೆ ಮನ್ನಣೆ ಕೊಟ್ಟಿದ್ದು ಕರ್ನಾಟಕ ರಾಜ್ಯ. ಯಾರು ಶುದ್ಧ ಹಸ್ತರು, ಯಾರೂ ಜನಪರವಾಗಿರುವರು.. ಜನಪರ ಕಾಳಜಿ ಇರುವ ಅಭಿವೃದ್ಧಿ ಪರವಾದ ರಾಜಕಾಣಿಗಳಿಗೆ ಮನ್ನಣೆ ಕೊಟ್ಟ ರಾಜ್ಯವಿದು. ಹಾಗಾಗಿ ರಾಜಕಾರಣ ಕಲುಷಿತವಾಗ್ತಿದೆ ಇದು ಬಿಜೆಪಿಯಿಂದ ಪ್ರಾರಂಭವಾಗಿದೆ. ಯಾರ್ಯಾರು ಹೈಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೋ ಅವರಿಗೂ ವಿಚಾರಣೆ ಆಗಬೇಕು ಎಂದಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಶುದ್ದೀಕರಣ ಮಾಡುವ ಅಧಿಕಾರ ಜನರಿಗಿದೆ. ಜನರೆ ಇದಕ್ಕೆ ಮದ್ದು.. ರಾಜಕಾರಣ, ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ಮಾಲೀಕರು ತಪ್ಪು ಕೆಲಸ ಮಾಡುವ ನಮ್ಮನೆಲ್ಲ ತಿದ್ದಬೇಕು, ಇಲ್ಲ ಮನೆಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.
ಬಸವರಾಜ ಹೊರಟ್ಟಿ ಹಾಗೂ ಶಾಸಕ ಬಿ.ಆರ್.ಪಾಟೀಲ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಚಾರವಾಗಿ ಶರಣ ಪ್ರಕಾಶ ದರ್ಶನಾಪುರ ಮಾತನಾಡಿ, ಹೊರಟ್ಟಿ ಅವರು ಹಾಗೆ ಹೇಳಿದ್ದಾರೆ. ಕಲುಷಿತ ರಾಜಕೀಯ ವ್ಯವಸ್ಥೆ ಹೇಗೆ ಆಗುತ್ತಿದೆ ಅನ್ನೋದು ನಿಮಗೂ ಗೊತ್ತಿದೆ. ಕಲುಷಿತ ರಾಜಕೀಯವನ್ನು ನಾವೆಲ್ಲರೂ ಶುದ್ಧ ಮಾಡಬೇಕಿದೆ. ಕಲುಷಿತ ರಾಜಕೀಯ ಶುದ್ಧ ಮಾಡಿದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಚೆನ್ನಾಗಿ ಇರುತ್ತದೆ. ಹನಿಟ್ರ್ಯಾಪ್ನಲ್ಲಿ ಯಾರಿದ್ದಾರೆ ಅನ್ನೋದು ತನಿಖೆ ನಂತರ ಗೊತ್ತಾಗಲಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಹನಿಟ್ರ್ಯಾಪ್ ಆಗಿತ್ತು ಎಂದಿದ್ದಾರೆ.

ಅವರ ಸರಕಾರದ ಅವಧಿಯಲ್ಲಿ ಬಿಜೆಪಿನವರು ಸುಮ್ಮನೆ ಕುಳಿತು ಈಗ ಮಾತನಾಡುತ್ತಾರೆ. ಬಿಜೆಪಿನವರು ಇಬ್ಬಗೀಯ ನೀತಿ ಅನುಸರಿಸುತ್ತಿದ್ದಾರೆ ಎಂದು ದರ್ಶನಾಪುರ ಆರೋಪಿಸಿದ್ದಾರೆ. ಬಿಜೆಪಿನವರು ಯಾವಾಗಲೂ ಜನಪರ ಇಲ್ಲ. ಹನಿಟ್ರಾಪ್ ಬಗ್ಗೆ ತನಿಖೆ ಮಾಡುವ ಬಗ್ಗೆ ಗೃಹ ಸಚಿವರು ಈಗಾಗಲೇ ಹೇಳಿದ್ದಾರೆ. ಆದರೂ ಗಲಾಟೆ ಮಾಡಿದ್ರು ಎಂದಿದ್ದಾರೆ ಸಚಿವ ಶರಣಬಸಪ್ಪ ದರ್ಶನಾಪೂರ.