ರಾಜ್ಯದಲ್ಲಿ ಸದ್ಯ ಬಜೆಟ್ ಅಧಿವೇಶನ (Budget seasion) ನಡೆಯುತ್ತಿದ್ದು, ಈ ಮಧ್ಯೆ ಸದನದಲ್ಲೇ ಹನಿ ಟ್ರ್ಯಾಪ್ (Honey trap) ಕೇಸ್ ಗಳ ಬಗ್ಗೆ ಶಾಸಕ ಸುನಿಲ್ ಕುಮಾರ್ (MLA Sunil Kumar) ಉಲ್ಲೇಖ ಮಾಡಿದ್ದಾರೆ. ಈ ಸದನ ಮುಗಿದ ಬಳಿಕ ರಾಜ್ಯದಲ್ಲಿ ಈ ಹನಿ ಟ್ರ್ಯಾಪ್ ಪ್ರಕರಣಗಳು ಅಲ್ಲೋಲ ಕಲ್ಲೋಲ ಎಬ್ಬಿಸುವ ಸಾಧ್ಯತೆ ದಟ್ಟವಾಗಿದೆ.

ಹೌದು, ರಾಜ್ಯ ರಾಜಕಾರಣದಲ್ಲಿ ಖುದ್ದು ಸಚಿವರಿಗೆ ಹನಿಟ್ರ್ಯಾಪ್ ಹಾವಳಿ ಜೋರಾಗಿದೆ ಎನ್ನಲಾಗಿದೆ. ಇತ್ತ ಬಜೆಟ್ ಅಧಿವೇಶನದಲ್ಲೂ ಹನಿಟ್ರ್ಯಾಪ್ ವಿಚಾರ ತೀವ್ರ ಹಲ್‌ಚಲ್ ಎಬ್ಬಿಸಿದೆ. ರಾಜ್ಯದಲ್ಲಿ ಸಚಿವರನ್ನ ಟಾರ್ಗೆಟ್ ಮಾಡಿ, ರಾಜಕೀಯವಾಗಿ ಹಣಿಯಲು ಹನಿಟ್ರ್ಯಾಪ್ ಅಸ್ತ್ರ ಬಳಕೆ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಹೀಗಾಗಿ ನಿನ್ನೆ (ಮಾ.೧೯) ಬಜೆಟ್ ಅಧಿವೇಶನದಲ್ಲೂ ಹನಿಟ್ರಾಪ್ ವಿಚಾರವನ್ನ ಬಿಜೆಪಿ ನಾಯಕರು ಪ್ರಸ್ತಾಪ ಮಾಡಿದ್ದಾರೆ.ಇತ್ತ ಶಾಸಕ ಸುನೀಲ್ ಕುಮಾರ್ ಸದನದಲ್ಲಿ ಹನಿಟ್ರ್ಯಾಪ್ ವಿರುದ್ಧ ಆಕ್ರೋಶ ಹೊರಹಾಕಿದ್ರು. ಮೊತ್ತೊಂದೆಡೆ ಹನಿಟ್ರ್ಯಾಪ್ ಯತ್ನಕ್ಕೆ ಒಳಗಾಗಿರುವ ಸಚಿವರು ಹೈಕಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದೆಲ್ಲದರ ಜೊತೆಗೆ ಖುದ್ದು ಸಚಿವರು ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಈ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದ್ದು ರಾಜಕೀಯ ಬೆಳವಣಿಗೆ ಕುತೂಹಲ ಕಾಯ್ದುಕೊಂಡಿದೆ.