ಹೆಚ್ಚು ಜನಕ್ಕೆ ಮುಖದಲ್ಲಿ ಪಿಗ್ಮೆಂಟೇಶನ್ ಬರುವುದಲ್ಲದೆ ಡಾರ್ಕ್ ಸ್ಪಾಟ್ಸ್ ಸಮಸ್ಯೆ ಕೂಡ ಇರುತ್ತದೆ. ಇದು ಮುಖದ ತುಂಬಾ ಮಚ್ಚೆ ರೀತಿ ಕಾಣಿಸುತ್ತದೆ. ಕೆಲವರಿಗೆ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ ಕೆಲವರಿಗೆ ಅತಿಯಾಗಿರುತ್ತದೆ. ಮುಖದ ಅಂದವನ್ನು ಕೆಡಿಸಿತ್ತದೆ.. ಈ ಡಾರ್ಕ್ ಸ್ಪಾಟ್ಸ್ ಆಗಲು ಪ್ರಮುಖ ಕಾರಣ ಬಿಸಿಲಲ್ಲಿ ಹೆಚ್ಚು ಓಡಾಡುವುದು, ದೇಹದಲ್ಲಿ ಮಲೆನಿನ್ ಅಂಶ ಜಾಸ್ತಿಯಾದಾಗ, ಮೇಕಪ್ ಅತಿಯಾದಗ ಅದನ್ನು ರಿಮೂವ್ ಮಾಡದೆ ಇರುವಾಗ ಇಂತಹ ಸಮಸ್ಯೆಗಳು ಕಾಣುತ್ತದೆ. ಇನ್ನೂ ಈ ಡಾರ್ಕ್ಸ್ ಸ್ಪಾಟ್ಸ್ ನಿವಾರಣೆ ಮಾಡಲು ಈ ಸಿಂಪಲ್ ಮನೆಮದ್ದನ್ನು ಬಳಸಿ.

ಮೊಸರು ಮತ್ತು ಸೌತೆಕಾಯಿ
ಅರ್ಧ ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಎಷ್ಟು ಮೊಸರನ್ನ ಬೆರೆಸಿ ಚೆನ್ನಾಗಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಡಾರ್ಕ್ ಸ್ಪಾಟ್ಸ್ ಆದ ಜಾಗದಲ್ಲಿ ಆ ಮಿಶ್ರಣವನ್ನು ಹಚ್ಚಿ ಐದು ನಿಮಿಷಗಳ ಕಾಲ ಬಿಟ್ಟು ನಂತರ ಮುಖವನ್ನ ತೊಳೆಯಿರಿ. ಈ ಸಿಂಪಲ್ ರೆಮಿಡಿಯನ್ನ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿ. ಬೇಗನೆ ರಿಸಲ್ಟ್ ದೊರಕುತ್ತದೆ.

ಆಲೂಗಡ್ಡೆ ರಸ
ಆಲೂಗೆಡ್ಡೆಯನ್ನು ಚೆನ್ನಾಗಿ ರುಬ್ಬಿಕೊಂಡು ನಂತರ ಅದರ ರಸವನ್ನ ತೆಗೆದುಕೊಳ್ಳಬೇಕು ಹಾಗೂ ಒಂದು ಕಾಟನ್ ಪ್ಯಾಡ್ ಬಳಸಿ ಆ ರಸವನ್ನ ಡಾರ್ಕ್ ಸ್ಪಾಟ್ಸ್ ಆದ ಜಾಗದಲ್ಲಿ ಅಪ್ಲೈ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ವಾಶ್ ಮಾಡಿ.

ಟ್ರೀ ಆಯಿಲ್ ಮತ್ತು ಕೊಬ್ಬರಿ ಎಣ್ಣೆ
ಒಂದು ಟೇಬಲ್ ಸ್ಪೂನ್ ಅಷ್ಟು ಟೀ ಟ್ರೀ ಆಯಿಲ್ ಗೆ ಒಂದು ಟೇಬಲ್ ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆಯನ್ನ ಬೆರೆಸಿ ಆ ಮಿಶ್ರಣವನ್ನ ಡಾರ್ಕ್ ಸ್ಪೋರ್ಟ್ಸ್ ಆದ ಜಾಗಕ್ಕೆ ಹಚ್ಚಿ ಇಡೀ ರಾತ್ರಿ ಹಾಗೆ ಬಿಡಿ. ಪ್ರತಿ ದಿನ ಈ ಸಿಂಪಲ್ ರೆಮಿಡಿಯನ್ನ ತಪ್ಪದೇ ಫಾಲೋ ಮಾಡಿ ಬೇಗನೆ ರಿಸಲ್ಟ್ ಪಡೆಯಿರಿ.