ಚಳಿಗಾಲದಲ್ಲಿ ಬೀಸುವ ತಂಪಾದಾಗ ಗಾಳಿಯಿಂದಾಗಿ ಶೀತ ಕೆಮ್ಮು ನೆಗಡಿ ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಪಟ್ಟ ಒಂದಿಷ್ಟು ಸಮಸ್ಯೆಗಳು ಎದುರಾಗುತ್ತದೆ, ಹೇಗೆ ಈ ಗಾಳಿಯಿಂದ ಕೈ ಕಾಲು ಒಡೆಯುತ್ತದೆ ಅದೇ ರೀತಿ ತುಟಿಗಳು ಒಡೆಯುತ್ತದೆ. ತುಟಿಯ ಸುತ್ತ ಗಾಯಗಳಾಗುತ್ತದೆ ,ಉರಿ ,ನೋವು ಹೆಚ್ಚುತ್ತದೆ ಮುನ್ನೆಚ್ಚರಿಕೆ ಕ್ರಮವಾಗಿ ಅಥವಾ ತುಟಿ ಒಡೆದಾಗ ಈ ಮನೆ ಮದ್ದನ್ನು ತಪ್ಪದೆ ಬಳಸಿ

ಜೇನುತುಪ್ಪ
ಜೇನುತುಪ್ಪದಲ್ಲಿ ಸಾಕಷ್ಟು ಔಷಧಿ ಗುಣಗಳಿದ್ದು ಸುಟ್ಟ ಗಾಯವಾದಗಳು ಕೂಡ ಜೇನುತುಪ್ಪವನ್ನು ಹಚ್ಚುವುದು ಉತ್ತಮ, ಮಾತ್ರವಲ್ಲದೇ ತುಟಿ ಒಡೆದಾಗ ಅದರ ಮೇಲೆ ಜೇನುತುಪ್ಪವನ್ನು ತಪ್ಪದೇ ಹಚ್ಚಿ. ಹೀಗೆ ಪ್ರತಿದಿನ ಜೇನುತುಪ್ಪವನ್ನು ತುಟಿ ಒಡೆಯುವುದಿಲ್ಲ ಏಕೆಂದರೆ ಜೇನುತುಪ್ಪ ನಿಮ್ಮ ತುಟಿಗಳನ್ನ ನ್ಯಾಚುರಲ್ ಆಗಿ ಮಾಯಿಶ್ಚರೈಸ್ ಮಾಡುತ್ತದೆ.

ಕೊಬ್ಬರಿ ಎಣ್ಣೆ
ಚಿಟಿಕೆಯಷ್ಟು ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಪ್ರತಿದಿನ ತಪ್ಪದೆ ನಿಮ್ಮ ತುಟಿಗಳಿಗೆ ಹಚ್ಚುವುದರಿಂದ ತುಟಿಯನ್ನ ಹೈಡ್ರೇಟ್ ಮಾಡುತ್ತದೆ ಹಾಗೂ ನ್ಯಾಚುರಲ್ ಆಗಿ ಮಾಯಿಶ್ಚರೈಸ್ ಮಾಡುತ್ತದೆ ಇದರಿಂದ ತುಟಿ ಒಡೆಯುವುದಿಲ್ಲ.

ಸಕ್ಕರೆ ಮತ್ತು ಆಲಿವ್ ಆಯಿಲ್
ಅರ್ಧ ಟೇಬಲ್ ಸ್ಪೂನ್ ಅಷ್ಟು ಸಕ್ಕರೆಗೆ, ಅದರ ಸರಿ ಪ್ರಮಾಣದಷ್ಟು ಆಲಿವ್ ಆಯಿಲ್ ಅನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ತುಟಿಗೆ ಹಚ್ಚಿ ಸ್ಕ್ರಬ್ ಮಾಡುವುದರಿಂದ ಡೆಡ್ ಸ್ಕಿನ್ ರಿಮೂವ್ ಮಾಡುತ್ತದೆ ಹಾಗೂ ತುಟಿ ಒಡೆಯುವುದು ಕೂಡ ಇಲ್ಲ.

ಜೇನುತುಪ್ಪ ಮತ್ತು ಸಕ್ಕರೆ
ಈ ಎರಡು ಪದಾರ್ಥಗಳನ್ನ ಸರಿ ಪ್ರಮಾಣದಲ್ಲಿ ಮಿಶ್ರಣ ಮಾಡಿ ತುಟಿಗೆ ಹಚ್ಚಿ ಸ್ಕ್ರಬ್ ಮಾಡುವುದರಿಂದ, ನ್ಯಾಚುರಲ್ ಆಗಿ ತುಟಿಯನ್ನ ಹೈಡ್ರೇಟ್ ಮಾಡುವುದರ ಜೊತೆಗೆ ಮಾಯಿಶ್ಚರೈಸ್ ಕೂಡ ಮಾಡುತ್ತದೆ ತಪ್ಪದೆ ವಾರಕ್ಕೆ ಮೂರು ಬಾರಿ ಪಾಲಿಸಿ.