ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಪ್ರತಿಯೊಬ್ರಿಗೂ ಕೂಡ ಒಂದಿಷ್ಟು ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಯೂರಿನ್ ಇನ್ಫೆಕ್ಷನ್ ಹಾಗೂ ಮುಖ್ಯವಾಗಿ ಬಾಯಲ್ಲಿ ಅಲ್ಸರ್ ಆಗುವಂತಹ ಚಾನ್ಸಸ್ ಜಾಸ್ತಿ ಇರುತ್ತದೆ. ಇನ್ನು ಮಕ್ಕಳಿಗೆ ಉಷ್ಣತೆ ಹೆಚ್ಚಾದಾಗ ತಕ್ಷಣಕ್ಕೆ ಕಾಡುವಂತದು ಅಲ್ಸರ್ ಸಮಸ್ಯೆ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅಲ್ಸರ್ ಆದಾಗ ಊಟ ತಿಂಡಿ ತಿನ್ನೋದಕ್ಕೆ ಆಗಲ್ಲ ಉರಿ ಮತ್ತು ಖಾರ ಹೆಚ್ಚಿರುತ್ತದೆ. ಈ ಅಲ್ಸರ್ ನಿಂದ ನಿವಾರಣೆ ಪಡೆಯುವುದಕ್ಕೆ ಹಾಗೂ ಯಾವ ರೀತಿಯ ಆಹಾರವನ್ನು ತಿನ್ನುವಂಥದ್ದು ಉತ್ತಮ ಎಂಬ ಮಾಹಿತಿ ಹೀಗಿದೆ

ಹಾಲು
ಮಕ್ಕಳು ಆರಾಮಾಗಿ ಇದ್ದಾಗಲೇ ಅವರಿಗೆ ಊಟ ತಿಂಡಿಯನ್ನ ಮಾಡಿಸುವುದು ಸ್ವಲ್ಪ ಕಷ್ಟದ ಕೆಲಸ, ಅಂತದ್ರಲ್ಲಿ ಸ್ವಲ್ಪ ಹುಷಾರು ತಪ್ಪಿದ್ರೆ ಸಾಕು, ಏನನ್ನು ಕೂಡ ಸೇವಿಸುವುದಿಲ್ಲ. ಇಂಥ ಸಂದರ್ಭದಲ್ಲಿ ತಣ್ಣಗಿರುವಂತ ಹಾಲನ್ನ ಕುಡಿಸುವುದು ಉತ್ತಮ ಇದರಿಂದ ನೋವು ಕಡಿಮೆಯಾಗುತ್ತದೆ ಹಾಗೂ ಮಕ್ಕಳ ಹೊಟ್ಟೆ ತುಂಬುತ್ತದೆ.

ಐಸ್ ಕ್ಯೂಬ್
ಅಲ್ಸರ್ ಆದ ಜಾಗ ಕೆಂಪಾಗಿರುತ್ತದೆ ಹಾಗೂ ಉರಿ ಕೂಡ ಹೆಚ್ಚಿರುತ್ತದೆ ಇಂಥ ಸಂದರ್ಭದಲ್ಲಿ ಐಸ್ ಕ್ಯೂಬ್ ಗಳನ್ನು ಜಾಗದಲ್ಲಿ ಕೆಲ ನಿಮಿಷಗಳ ಕಾಲ ಇಡುವುದರಿಂದ ಆ ಜಾಗ ಮರಗಟ್ಟುವ ಜೊತೆಗೆ ಪೈನ್ ಕೂಡ ರಿಲೀಫ್ ಆಗುತ್ತದೆ.

ಅಲೋವೆರಾ ಜೆಲ್
ಒಂದು ಕಾಟನ್ ಪೀಸ್ಗೆ ಆಲೋವೆರಾ ಜೆಲ್ ಅನ್ನ ಹಾಕಿ ನಂತರ ಅಲ್ಸರ್ ಆಗಿರುವ ಜಾಗಕ್ಕೆ ಅಲೋವೆರಾ ಜೆಲ್ ಅನ್ನ ಅಪ್ಲೈ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಡುವುದರಿಂದ ಉರಿ ಕಡಿಮೆಯಾಗುತ್ತದೆ ಹಾಗೂ ಗಾಯ ಹೀಲ್ ಆಗುವುದಕ್ಕು ಸಹಾಯಕಾರಿ.

ಜೇನುತುಪ್ಪ
ಅಲ್ಸರ್ ಆದಾಗ ಅದರ ಮೇಲೆ ಜೇನುತುಪ್ಪವನ್ನು ಸವರುವುದರಿಂದ ಗಾಯ ಬೇಗನೆ ಒಣಗುತ್ತದೆ ಹಾಗೂ ನೋವು ಕಡಿಮೆಯಾಗುತ್ತದೆ.