ಉಗುರನ್ನ ಬೆಳೆಸುವುದಂದ್ರೆ ತುಂಬಾ ಜನಕ್ಕೆ ಇಷ್ಟವಿರುತ್ತದೆ ಅದನ್ನು ಕೂಡ ಹೆಣ್ಣು ಮಕ್ಕಳಿಗೆ ಉದ್ಧವಾದ ಉಗುರನ್ನು ಬೆಳೆಸಿ ಚಂದವಾಗಿ ನೇಲ್ಪಾಲಿಷನ್ನ ಹಚ್ಚುವುದಂದ್ರೆ ತುಂಬಾನೇ ಇಷ್ಟ ಇನ್ನು ಕೆಲವರು ಗಂಡುಮಕ್ಕಳು ಕೂಡ ಉಗ್ರನ ಉದ್ದವಾಗಿ ಬಳಸ್ತಾರೆ.
ಆದ್ರೆ ಕೆಲವು ಭಾರಿ ಉಗುರಿನ ಸುತ್ತ ಕಪ್ಪಾಗಿರುತ್ತದೆ..ಸೂರ್ಯನ ಕಿರಣಗಳಿಂದ ದೇಹದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಾಗ ಚರ್ಮ ಕೆಲವು ಭಾರೀ ಕಪ್ಪಾಗುತ್ತದೆ..
ನಿಂಬೆಹಣ್ಣು
ಉಗುರು ಸುತ್ತ ಕಪ್ಪಾಗಿದ್ದರೆ ನಿಂಬೆಹಣ್ಣನ್ನು ಅರ್ಧ ಭಾಗವಾಗಿ ಕತ್ತರಿಸಿ ನೇರವಾಗಿ ಉಗುರುಸುತ್ತಾ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಬೆಚ್ಚಗಿನ ನೀರಿನಿಂದ ಕೈ ತೊಳೆಯುವುದರಿಂದ ಬೇಗನೆ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
ಅರಿಶಿಣ
ಕಲೆಗಳನ್ನು ನಿವಾರಣೆ ಮಾಡಿ ಚರ್ಮದ ಹೊಳೆಪನ್ನು ಹೆಚ್ಚು ಮಾಡಲು ಅರಿಶಿಣ ಬೆಸ್ಟ್. ಹಾಗಾಗಿ ಅರ್ಧ ಟೇಬಲ್ ಸ್ಪೂನ್ ಅಷ್ಟು ಅರಿಶಿಣಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ನಿಂಬೆ ರಸವನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ, ಆ ಪೇಸ್ಟ್ ನ ಉಗುರು ಸುತ್ತ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ವಾಶ್ ಮಾಡಿದರೆ ಕಪ್ಪು ಕಲೆಗಳು ಶಮನವಾಗುತ್ತದೆ.
ಸೌತೆಕಾಯಿ
ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿ, ಅದರ ರಸವನ್ನು ಉಗುರಿನ ಸುತ್ತಲಿರುವ ಕಪ್ಪು ಕಲೆಗಳ ಮೇಲೆ ಹಚ್ಚಿ .ನಂತರ ಒಂದು ಬಟ್ಟೆಯಿಂದ ಅದನ್ನ ವರೆಸುವುದರಿಂದ ಬೇಗನೆ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಸೌತೆ ಕಾಯಿ ಮೆಲನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.