ಕೆಲವರಿಗೆ ಮಳೆಗಾಲ ಬಂತು ಅಂದ್ರೆ ಅಥವಾ ವಾತಾವರಣ ಬದಲಾದಾಗ ನೀರಿನಲ್ಲಿ ಚೇಂಜಸ್ ಆದಾಗ ತಣ್ಣೀರಿನಲ್ಲಿ ಸ್ನಾನ ಮಾಡಿದಾಗ ದೇಹ ಹೆಚ್ಚು ತಂಪಾದಾಗ ಶೀತ ನೆಗಡಿ, ಕೆಮ್ಮು ಶುರುವಾಗುತ್ತದೆ ಮುಖ್ಯವಾಗಿ ಕಫ ಕಟ್ಟುತ್ತದೆ. ಕಫ ಕಟ್ಟಿದಾಗ ಸರಿಯಾಗಿ ಉಸಿರಾಡಲು ಆಗುವುದಿಲ್ಲ, ಗಂಟಲಲ್ಲಿ ಕಿರಿಕಿರಿ ಕೆಲವು ಬಾರಿ ಹಣೆಯ ಭಾಗದಲ್ಲೂ ಕೂಡ ಕಫ ಶುರುವಾಗುತ್ತದೆ. ಕಫ ಶುರುವಾಗಿ ಕೆಮ್ಮು ಶೀತವಾದಾಗ ತಕ್ಷಣವೇ ಕಫವನ್ನು ನಿವಾರಣೆ ಮಾಡಿಕೊಳ್ಳುವುದು ಉತ್ತಮ ಹಾಗಾದ್ರೆ ಈ ಮನೆಮದ್ದುಗಳನ್ನ ಬಳಸುವುದರಿಂದ ಬೇಗನೆ ಕಡಿಮೆಯಾಗುತ್ತದೆ.
ಜೇನುತುಪ್ಪ ಮತ್ತು ನಿಂಬೆರಸ
ಒಂದು ಟೇಬಲ್ ಸ್ಪೂನ್ ಅಷ್ಟು ನಿಮ್ಮ ರಸಕ್ಕೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಕಫ ಬೇಗನೆ ಕಡಿಮೆಯಾಗುತ್ತದೆ, ಜೊತೆಗೆ ಥ್ರೋಟ್ ಇನ್ಫೆಕ್ಷನ್ ಕೂಡ ನಿವಾರಣೆ ಆಗುತ್ತದೆ.
ಶುಂಠಿ
ಶುಂಠಿಯ ಸಿಪ್ಪೆಯನ್ನು ತೆಗೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅಥವಾ ಜಜ್ಜಿ, ಒಂದು ಲೋಟ ನೀರನ್ನ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ ,ಬೇಕಾದಲ್ಲಿ ಸ್ವಲ್ಪ ಬೆಲ್ಲವನ್ನು ಕೂಡ ಬೆರೆಸಿಕೊಳ್ಳಬಹುದು.
ಸ್ಟೀಮ್
ಒಂದು ಬೌಲ್ಗೆ ಕುದಿಸಿದ ಬಿಸಿ ನೀರನ್ನು ಹಾಕಿ ಹಾಗೂ ಅದಕ್ಕೆ ನೀಲಗಿರಿ ಎಣ್ಣೆಯನ್ನು ಬೆರೆಸಿ ಅದರ ಸ್ಟೀಮ್ ತೆಗೆದುಕೊಳ್ಳುವುದರಿಂದ ಈಜಿಯಾಗಿ ಕಫ ಕಡಿಮೆಯಾಗುತ್ತದೆ, ಮೂಗು ಬ್ಲಾಕ್ ಆಗಿದ್ದಾಗ ಕೆಮ್ಮು ಹೆಚ್ಚಿದ್ರು ಕೂಡ ನಿವಾರಣೆ ಆಗುತ್ತದೆ.
ಆಪಲ್ ಸೈಡರ್ ವಿನಿಗರ್
ಒಂದು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರ್ ಗೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ಬೆರೆಸಿ ನಂತರ ಆ ಮಿಶ್ರಣವನ್ನ ಸೇವಿಸುವುದರಿಂದ ಕಫ ಕಡಿಮೆಯಾಗುತ್ತದೆ.