ಆಸ್ಟ್ರೇಲಿಯಾ(Australia)ದ ಬ್ರಿಸ್ಬೇನ್ನ ಗಾಬಾ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್(West Indies) ನಡುವಿನ ಎರಡನೇ ಟೆಸ್ಟ್ ಪಂದ್ಯ(Test Match) ಹಲವು ಅವಿಸ್ಮರಣೀಯ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 8 ರನ್ಗಳಿಂದ ಮಣಿಸಿದ ಪ್ರವಾಸಿ ವೆಸ್ಟ್ ಇಂಡೀಸ್ ಆ ಮೂಲಕ ಇತಿಹಾಸ ನಿರ್ಮಿಸಿತು. ಈ ಗೆಲುವು ಕೆರೆಬಿಯನ್ನರ ಕ್ರಿಕೆಟ್ ಇತಿಹಾಸದಲ್ಲಿ ಅವಿಸ್ಮರಣೀಯ ಗೆಲುವಾದರೆ, ಕಾಂಗರೂಗಳ ವಿರುದ್ಧ ಅವರದ್ದೇ ನೆಲದಲ್ಲಿ ದೊರೆತ ಐತಿಹಾಸಿಕ ಗೆಲುವು ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗರಾದ ಬ್ರಿಯಾನ್ ಲಾರಾ, ಕಾರ್ಲ್ ಹೂಪರ್ ಸೇರಿದಂತೆ ಹಲವರನ್ನು ಭಾವುಕರನ್ನಾಗಿಸಿತು.
ಸ್ಟೀವ್ ಸ್ಮಿತ್(91*) ಅವರ ಏಕಾಂಗಿ ಹೋರಾಟದ ನಡುವೆಯೂ ಶಮರ್ ಜೋಸೆಫ್(7/68) ಅವರ ಆಕ್ರಮಣಕಾರಿ ಬೌಲಿಂಗ್ನಿಂದ ವೆಸ್ಟ್ ಇಂಡೀಸ್, ಎಂಟು ರನ್ಗಳ ರೋಚಕ ಗೆಲುವು ಸಾಧಿಸುತ್ತಿದ್ದಂತೆ ವಿಂಡೀಸ್ ಆಟಗಾರರು ಮೈದಾನದಲ್ಲಿ ಸುತ್ತಾಡಿ, ಸಂಭ್ರಮಿಸಿದರೆ. ತಂಡದ ಕೋಚಿಂಗ್ ಸ್ಟಾಫ್ ಆಗಿರುವ ಮಾಜಿ ಕ್ರಿಕೆಟಿಗ ಕಾರ್ಲ್ ಹೂಪರ್ ಡ್ರೆಸ್ಸಿಂಗ್ ರೂಮ್ನಲ್ಲಿ ಕಣ್ಣೀರು ಹಾಕಿ ಗೆಲುವನ್ನು ಸಂಭ್ರಮಿಸಿದರು. ಇನ್ನೂ ಈ ಪಂದ್ಯದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಕೂಡ ಕಣ್ಣೀರು ಹಾಕಿ ಅವಿಸ್ಮರಣೀಯ ಗೆಲುವನ್ನ ಸಂಭ್ರಮಿಸಿದರು.
ವಿಂಡೀಸ್ ಕ್ರಿಕೆಟಿಗರ ಈ ಗೆಲುವಿನ ಸಂಭ್ರಮಾಚರಣೆ ಹಾಗೂ ಭಾವುಕ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.