ಮಧ್ಯ ಪ್ರದೇಶ: ಹಿಂದೂ ಹುಡುಗಿಯರು ತಮ್ಮ ಪರ್ಸ್’ನಲ್ಲಿ ಬಾಚಣಿಗೆ ಮತ್ತು ಲಿಪ್ ಸ್ಟಿಕ್ ಬದಲು ಚಾಕು ಇಟ್ಟುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರತ್ಲಾಮ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಚಿ, ಹಿಂದೂ ಹುಡುಗಿಯರು ತಮ್ಮ ಪರ್ಸ್’ನಲ್ಲಿ ಚಾಕು ಇಡಲು ಕಲಿತರೆ, ಅದರಿಂದ ಜಿಹಾದಿಗಳು ನಮ್ಮಿಂದ ದೂರವಿರುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ.
ಎಲ್ಲಾ ಹಿಂದೂ ಮಹಿಳೆಯರು ತಮ್ಮನ್ನು ತಾವು ಕಾಪಾಡುವ ಹಂತಕ್ಕೆ ಬರಬೇಕು ಅಲ್ಲದೆ ಧೈರ್ಯಶಾಲಿಗಳಾಗಬೇಕು ಎಂದು ಹೇಳಿದ್ದಾರೆ.
ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಸಾಧ್ವಿ , ಲವ್ ಜಿಹಾದಿಗಳು ನಿಮ್ಮ ಕತ್ತು ತೆಗೆಯಲು ಸಿದ್ಧರಿದ್ದರೆ, ನೀವು (ಹಿಂದೂ ಹುಡುಗಿಯರು) ಅದಕ್ಕೂ ಮೊದಲು ಅವರ ಕತ್ತನ್ನು ಕತ್ತರಿಸಬೇಕು ಎಂದು ಪ್ರಚೋಧನಾತ್ಮಕ ಹೇಳಿಕೆ ನೀಡಿದ್ದಾರೆ.