ರಾಜ್ಯದಲ್ಲಿ ಭಾರಿ ಭುಗಿಲೆಬ್ಬಿಸಿದ ಹಿಜಾಬ್ ವಿವಾದ ಈಗ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಯಾಗುವ ಹಂತದಲ್ಲಿದೆ. ನಿನ್ನೆ ಈ ಬಗ್ಗೆ ಹೈ ಕೋರ್ಟ್ನಲ್ಲಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಸುದೀರ್ಘವಾದ ವಿಚಾರಣೆ ನಡೆಯಿತು. ಮೊದಲು ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ ಅರ್ಜಿಯ ವಕಾಲತ್ ವಹಿಸಿದ್ದ ಹಿರಿಯ ವಕೀಲ ದೇವದತ್ತ ಕಾಮತ್ ವಾದ ಮಂಡಿಸಿರು.
ಹಿಜಾಬ್ ಹಿತಾಸಕ್ತಿ ಅರ್ಜಿದಾರರ ಪರ ವಾದದ ಕೆಲವು ಪ್ರಮುಖ ಅಂಶಗಳು :
ನಿಮ್ಮ ಎಲ್ಲಾ ಭಾವನಾತ್ಮಕ ವಿಚಾರ ಬದಿಗಿಡಿ. ನಾವು ಸಂವಿಧಾನದ ಪ್ರಕಾರ ಹೋಗೋಣ ಎಂದು ನ್ಯಾ. ಕೃಷ್ಣ ದೀಕ್ಷಿತ್ ಹೇಳಿದರು. ವಿದ್ಯಾರ್ಥಿಗಳು ಹೀಗೆ ನಡೆದುಕೊಳ್ಳುವುದು ಖುಷಿಯ ವಿಚಾರ ಅಲ್ಲ ಎಂದು ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ವಿಚಾರದ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತ ಪಡಿಸಿತು. ವಿದ್ಯಾರ್ಥಿಗೆ ಸಂವಿಧಾನದ ಮೇಲೆ ಭರವಸೆ ಇರೋದಕ್ಕೆ ನ್ಯಾಯಾಲಯದ ಬಾಗಿಲು ಬಡಿದಿದ್ದಾರೆ. ನಾನು ಆ ವಿದ್ಯಾರ್ಥಿಯ ನಡೆಯನ್ನು ಗೌರವಿಸುವತ್ತೇನೆ ಎಂದು ಜಡ್ಡ್ ಅರ್ಜಿದಾರರಿಗೆ ಅಭಿನಂದಿಸಿದರು. ಸಂವಿಧಾನದಿಂದ ಆರ್ಟಿಕಲ್ 15 ಅನ್ನು ಪ್ರಸ್ತಾಪಿಸಿ ಇದು ನ್ಯಾಯಯುತವಾದ ಬೇಡಿಕೆ ಎಂದು ಯುವತಿ ಪರ ವಕೀಲ ವಾದ ಆರಂಭಿಸಿದ್ದರು. ಈ ವೇಳೆ ಹಿಜಾಬ್ ಧರಿಸುವುದು ಮುಸ್ಲಿಂ ಧರ್ಮದಲ್ಲಿ ಕಡ್ಡಾಯವೇ ಎಂದು ನ್ಯಾಯಪೀಠ ಪ್ರಶ್ನಿಸಿತು.

ಕರ್ನಾಟಕ ಶಿಕ್ಷಣ ಕಾಯಿದೆಯಲ್ಲೇ ಸಮವಸ್ತ್ರ ಕಡ್ಡಾಯವಲ್ಲ. ಹೀಗಿರುವಾಗ ಸರ್ಕಾರ ಯಾವ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದೆ.? ಅವರೇ ಹೇಳಿರುವ ಹಾಗೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿವಾದಿ ವಕೀಲರ ಉಪಸ್ಥಿತಿಯನ್ನು ಅರ್ಜಿದಾರರ ಪರ ವಕೀಲರು ಪ್ರಶ್ನಿಸಿದರು. ನಂತರ, ಇಸ್ಲಾಂನಲ್ಲಿ ಹಿಜಾಬ್ ಗೆ ಇರುವ ಪ್ರಾಮುಖ್ಯತೆ ಸಲುವಾಗಿ ಅರ್ಜಿದಾರರು ಖುರ್ ಆನ್ನ 24:31 ಹಾಗೂ 25ರ ಅಧ್ಯಾಯವನ್ನು ಉಲ್ಲೇಖಿಸಿ ವಾದ ಮಂಡಿಸಿದರು. ಈ ವೇಳೆ ಇದನ್ನು ದೃಢೀಕರಿಸುವ ನಿಟ್ಟಿನಲ್ಲಿ ನ್ಯಾ. ಕೃಷ್ಣ ದೀಕ್ಷಿತ್ ನ್ಯಾಯಲಯದ ಗ್ರಂಥಾಲಯದಿಂದ ಕನ್ನಡ ಅನುವಾದಿತ ಖುರ್ ಆನ್ ತರಿಸಿಕೊಂಡು ವಿಚಾರಣೆ ಕೇಳಿದರು. ಈ ಪ್ರಕರಣವನ್ನು ಧಾರ್ಮಿಕ ಸ್ವಾತಂತ್ರ್ಯ ಎಂದು ಭಾವಿಸದೆ ಇದೊಂದು ಮೂಲಭೂತ ಸ್ವಾತಂತ್ರ್ಯ ಎಂದು ಪರಗಣಿಸುವಂತೆ ಯುವತಿ ಪರ ವಕೀಲರ ಮನವಿ ಮಾಡಲಾಯಿತು. ಈ ನಡುವೆ ಕೇರಳ, ಮುಂಬೈ, ಮದ್ರಾಸ್ ಹೈ ಕೋರ್ಟ್ ಹಾಗೂ ಮಲೇಶಿಯಾ, ಕೆನೆಡಾ ದೇಶದ ನ್ಯಾಯಾಲಯಗಳು ಹಿಜಾಬ್ ಬಗ್ಗೆ ತಾಳಿರುವ ನಿಲುವಿನ ಬಗ್ಗೆಯೂ ಉಲ್ಲೇಖ ಮಾಡಲಾಯಿತು. ಹೀಗೆ ದೇವದತ್ತ ಕಾಮತ್ ಹಿಜಾಬ್ ಪರ ಅರ್ಜಿದಾರರ ವಕ್ಕಾಲು ಸಮರ್ಥವಾಗಿ ಮಂಡಿಸಿದರು.
ಅಡ್ವಕೇಟ್ ಜನರಲ್ ವಾದದ ಪ್ರಮುಖ ಅಂಶಗಳು :
ಕಾಲೇಜುಗಳಲ್ಲಿ ಎಲ್ಲರೂ ಸಮಾನರು. ಹೀಗಾಗಿ ಹಿಜಾಬ್ ಧರಿಸಲು ಅನುಮತಿ ನೀಡಬಾರದು ಮತ್ತು ಈ ಹಿತಾಸಕ್ತಿ ಅರ್ಜಿಯನ್ನು ರದ್ದುಗೊಳಿಸುವಂತೆ ಎಜಿ ವಾದ ಮಂಡಿಸಿದರು. ನಿರ್ದಿಷ್ಟ ಸಮುದಾಯಕ್ಕೆ ವಿಶೇಷ ಅನುಮತಿ ನೀಡುವಾಗ ಕಾಲೇಜುಗಳಲ್ಲಿನ ಶಿಕ್ಷಣದ ವಾತಾವರಣ ಹದಗೆಡುತ್ತದೆ ಎಂಬ ವಾದವನ್ನು ಅಡ್ವಕೇಟ್ ಜನರಲ್ ನ್ಯಾಯಾಪೀಠದ ಮುಂದೆ ಇಟ್ಟಿತು. ಅಲ್ಲದೆ ನಿನ್ನೆ ಅರ್ಜಿದಾರರ ಪರ ವಕೀಲ ಮಂಡಿಸಿದ ವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕುವಂತೆ ಮನವಿಮಾಡಿಕೊಂಡರು. ಈತನ್ಮಧ್ಯೆ ಮುಂದಿನ ಎರಡು ತಿಂಗಳಲ್ಲಿ ಪರೀಕ್ಷೆಯೂ ನಡೆಯಲಿದ್ದು ಸದ್ಯಕ್ಕೆ ಹಿಜಾಬ್ ಧರಿಸಲು ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸುವಂತೆ ಅರ್ಜಿದಾರರ ಪರ ವಕೀಲರು ಒತ್ತಾಯಿಸಿದರು. ಈ ವೇಳೆ ನ್ಯಾ. ಕೃಷ್ಣ ದೀಕ್ಷಿತ್ ಈ ಪ್ರಕಣರವನ್ನು ದ್ವಿಸದಸ್ಯದ ಪೀಠಕ್ಕೆ ರವಾನೆ ಮಾಡುವುದರ ಬಗ್ಗೆ ಉಭಯ ಪರ ವಕೀಲರಲ್ಲಿ ಅಭಿಪ್ರಾಯ ಕೇಳಿದರು. ನಂತರ ಮತ್ತೆ ಅರ್ಜಿದಾರರ ಒರ ವಕೀಲ ಹಾಗೂ ಅಡ್ವಕೇಟ್ ಜನರಲ್ ಅಭಿಪ್ರಾಯ ಪಡೆದುಕೊಂಡು ಹಿಜಾಬ್ ಹಿತಾಸಕ್ತಿ ಅರ್ಜಿಯನ್ನು ಏಕಸದಸ್ಯ ಪೀಠದಿಂದ ಹೈಕೋರ್ಟ್ ಸಿಜೆ ನಿರ್ಧರಿಸುವ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆಸುವಂತೆ ಆದೇಶಿಸಿ, ಅರ್ಜಿಯನ್ನು ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸಿದರು.













