ಉಡುಪಿಯಲ್ಲಿ ಶುರುವಾದ ಈ ಹಿಜಾಬ್ ವಿವಾದ ಈಗ ದೇಶಾದ್ಯಂತ ವ್ಯಾಪಿಸತೊಡಗಿದೆ. ವಿದ್ಯಾರ್ಥಿಗಳ ನಡುವೆ ಶುರುವಾದ ಈ ವಾದ ವಿವಾದ ಈಗ ರಾಜಕೀಯ ತಿರುವು ಪಡೆದುಕೊಂಡಿರುವುದು ಸುಳ್ಳಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಎಲ್ಲರ ಶಾಂತಿ ಕದಡಿ ಎರಡು ಧರ್ಮಗಳ ನಡುವೆ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಬೀಚ್ಗಳಲ್ಲಿ ಅಥವಾ ಸ್ವೀಮಿಂಗ್ ಪೂಲ್ಗಳಲ್ಲಿ ಬಿಕಿನಿ ಧರಿಸಬಹುದು. ಶಾಲೆಗಳಲ್ಲಿ ಅಲ್ಲ. ಪ್ರತಿಯೊಂದು ಸ್ಥಳಕ್ಕೂ ಸಂಬಂಧಪಟ್ಟ ವಸ್ತ್ರಸಂಹಿತೆ ಎಂಬುದು ಇದೆ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹಿಬಾಜ್ ವಿವಾದಕ್ಕೆ ಬಿಕಿನಿ ಉದಾಹಾರಣೆ ಕೊಟ್ಟು ಹೇಳಿದ್ದಾರೆ.
ಬುಧವಾರ ದೆಹಲಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು,ಹಿಜಾಬ್ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ನಿರ್ದಿಷ್ಟ ಉಡುಪು ಧರಿಸಬೇಕು ಎಂದು ಯಾವುದೋ ಶಾಲೆ ಅಥವಾ ಕಾಲೇಜು ಆದೇಶ ಹೊರಡಿಸಿದ್ದರೆ, ಇಷ್ಟೇಕೆ ಗದ್ದಲ ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಮಕ್ಕಳ ಭವಿಷ್ಯದ ಜೊತೆ ಯಾರು ಆಟ ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಿಜಾಬ್ ಅನ್ನು ಸಮರ್ಥಿಸಿ ಪ್ರಿಯಾಂಕಾ ಗಾಂಧಿ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ. “ಅದು ಬಿಕಿನಿಯೇ ಆಗಿರಲಿ, ಘೂಂಘಟ್ ಆಗಿರಲಿ, ಜೀನ್ಸ್ ಆಗಿರಲಿ ಅಥವಾ ಹಿಜಾಬ್ ಆಗಿರಲಿ, ಯಾವುದನ್ನು ತಾನು ತೊಡಬೇಕು ಎನ್ನುವುದನ್ನು ನಿರ್ಧರಿಸುವುದು ಮಹಿಳೆಯ ಹಕ್ಕು. ಈ ಹಕ್ಕನ್ನು ಭಾರತೀಯ ಸಂವಿಧಾನ ಖಾತರಿಪಡಿಸಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ” ಎಂದು ಅವರು ಮಹಿಳೆಯರು ಸ್ತ್ರೀ ಶಕ್ತಿಯೂ ಎಂದು ಹ್ಯಾಷ್ಟ್ಯಾಗ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ಸಮರ್ಥಿಸಿದ ಸುಮಲತಾ
‘ಬಿಕನಿಯನ್ನು ಶಾಲೆಗೆ ಹೋಗುವ ಸಂದರ್ಭದಲ್ಲಿ ತೊಡುವುದಿಲ್ಲ. ಬಿಕನಿಯನ್ನು ಏನಿದ್ದರೂ ಬೀಚ್ನಲ್ಲಿ ಮಾತ್ರ ತೊಡುತ್ತೇವೆ. ಅದೇ ರೀತಿ ಕಚೇರಿಗೆ ತೆರಳುವಾಗ ಜೀನ್ಸ್ ಧರಿಸುವುದಿಲ್ಲ. ಆಯಾ ಸಂಸ್ಥೆಗಳ ಡ್ರೆಸ್ ಕೋಡ್ನ್ನು ಅನುಸರಿಸುತ್ತೇವೆ. ಹೀಗಾಗಿ ಎಲ್ಲ ರೀತಿಯ ಉಡುಪುಗಳಿಗೆ ಅದರದ್ದೇ ಆದ ಸಂದರ್ಭ ಇರುತ್ತದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.