
ಚಿಕ್ಕಮಗಳೂರು: ಮೂರು ದಾರಿ ಕೂಡಿರುವ ಸ್ಥಳದಲ್ಲಿ ಕಿಡಿಗೇಡಿಗಳು ವಾಮಾಚಾರ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.ಬೆಳ್ಳಂಬೆಳಗ್ಗೆ ವಾಮಾಚಾರಕ್ಕೆ ಮಲೆನಾಡು ಜನ ಬೆಚ್ಚಿಬಿದ್ದಿದ್ದಾರೆ. ಹಸಿರು ಬಳೆಗಳ ಮೇಲೆ ಮಣ್ಣಿನ ಬೊಂಬೆ ಇಟ್ಟು ವಾಮಾವಾರ ಮಾಡಲಾಗಿದೆ.ದಾರಿ ಹೋಕರು ಇದನ್ನು ಕಂಡು ಗಾಬರಿಗೊಂಡಿದ್ದಾರೆ.

ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ.ಹೆಡದಾಳು ಗ್ರಾಮದ ಚೇತನ್ ಎಂಬುವವರ ಮನೆ ಮುಂದೆಯೇ ಮಾಟ ಮಾಡಲಾಗಿದೆ. ಬೆಳಗಿನ ಜಾವ 4-5 ಗಂಟೆಗೆ ಐವರು ಕಿಡಿಗೇಡಿಗಳು ಬಂದು ಈ ಕೃತ್ಯ ಎಸಗಿ ಹೋಗಿದ್ದಾರೆ. ವಾಮಾಚಾರ ಮಾಡುವುದನ್ನ ಮನೆಯೊಳಗಿಂದ ಕಂಡ ಹಳ್ಳಿಗರು ಮನೆಯಿಂದ ಹೊರಬರಲು ಭಯಗೊಂಡಿದ್ದಾರೆ.

ಸ್ಥಳದಲ್ಲಿ ಅರಿಶಿನ-ಕುಂಕುಮ, ಕಾಯಿ, ಹಣ್ಣು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. ವಾಮಾಚಾರ ಮಾಡೋರು ಪ್ರಾಣಿ ಬಲಿ ಕೊಟ್ಟು ವಾಮಾಚಾರ ಮಾಡೋದು ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಇಲ್ಲಿ ಬಾಳೆಎಲೆ, ಹಸಿರು ಬಳೆ ಇಟ್ಟು ಮಡಕೆಗೆ ಕಾಳಿ ರೂಪ ನೀಡಿ ಭಯಂಕರ ಮಾಟ ಮಾಡಲಾಗಿದೆ.
ಮೈಸೂರಿನಲ್ಲೂ ವಾಮಾಚಾರಕ್ಕೆ ಓರ್ವ ಬಲಿ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ವಾಮಾಚಾರಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. 43 ವರ್ಷದ ವ್ಯಕ್ತಿಯನ್ನು ಮಾಟಮಂತ್ರಕ್ಕೆ ಬಲಿ ಕೊಡಲಾಗಿದೆ. ಮಲ್ಕುಂದಿ ಗ್ರಾಮದ ನಿವಾಸಿ ಸದಾಶಿವ ಮೃತ ದುರ್ದೈವಿ. ಈತ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಅಪರಿಚಿತ ದುಷ್ಕರ್ಮಿಗಳು ಸದಾಶಿವನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ದಾರೊಹೋಕರು ಸದಾಶಿವ ರಸ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ದಾರಿಹೋಕನೊಬ್ಬ ತನ್ನ ಹೊಲಕ್ಕೆ ಹೋಗುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಸ್ಥರಿಗೂ ಈ ವಿಷಯ ತಿಳಿಸಲಾಗಿದೆ. ಘಟನಾ ಸ್ಥಳದಲ್ಲಿ ವೀಳ್ಯದೆಲೆ, ಅಡಿಕೆ, ನಿಂಬೆಹಣ್ಣು ಮತ್ತು 101 ರೂ.ಗಳ ಜೊತೆಗೆ ಮಾಟಮಂತ್ರದ ಆಚರಣೆಗೆ ಸಂಬಂಧಿಸಿದ ವಸ್ತುಗಳು ಕಂಡು ಬಂದಿವೆ.
ಗ್ರಾಮಸ್ಥರು ತಕ್ಷಣ ವ್ಯಕ್ತಿಯನ್ನು ಸ್ಥಳೀಯ ಆಶ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಸದಾಶಿವ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ. ನಂಜನಗೂಡು ಜನರಲ್ ಆಸ್ಪತ್ರೆಯಲ್ಲಿ ಸದಾಶಿವ ಮೃತದೇಹವನ್ನು ಇಡಲಾಗಿದೆ. ಹುಲ್ಲಳ್ಳಿ ಠಾಣೆಯ ಪಿಎಸ್‌ಐ ಚೇತನ್‌ಕುಮಾರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದರು. ಸದಾಶಿವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಡಿಎಸ್ಪಿ ರಘು ನೇತೃತ್ವದ ಪೊಲೀಸ್ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ.
ವಾಮಾಚಾರ ಆಗಿದ್ರೆ ಅದರ ಲಕ್ಷಣ ಹೀಗಿರುತ್ತೆ..ಕಣ್ಣುದೃಷ್ಟಿ, ವಾಮಾಚಾರ ಪ್ರಯೋಗ ನಡೆದರೆ ಸಾಮಾನ್ಯವಾಗಿ ವ್ಯಕ್ತಿಯ ದೈಹಿಕ ಸಾಮರ್ಥ್ಯ ಕ್ರಮೇಣ ಕುಗ್ಗುತ್ತದೆ. ಅಥವಾ ಆ ವ್ಯಕ್ತಿಯು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುವಂತೆ ತೋರುತ್ತದೆ. ದುಷ್ಟ ದೃಷ್ಟಿ ದೋಷದಿಂದ ವ್ಯಕ್ತಿಯು ತನ್ನ ವ್ಯಾಪಾರ ಅಥವಾ ಉದ್ಯೋಗದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಇಲ್ಲವೇ ಉದ್ಯೋಗ ಅಥವಾ ವ್ಯಾಪಾರವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಅವನ ಆರ್ಥಿಕ ಸ್ಥಿತಿಯು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ವ್ಯಕ್ತಿಯು ಸಾಲದ ಹೊರೆಯನ್ನು ಹೊರಬೇಕಾಗಬಹುದು.