• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಧ್ಯಸ್ಥಿಕೆಯ ದಾರಿ ತುಳಿದ ಹೈಕೋರ್ಟ್‌ : ಕುಮಾರಸ್ವಾಮಿ Vs ADGP ಚಂದ್ರಶೇಖರ್‌ ನಡುವಿನ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ..

ಮಧ್ಯಸ್ಥಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಷರತ್ತು : ನೇರಾ ನೇರ ಭೇಟಿ ಸಾಧ್ಯವಿಲ್ಲ ಎಂದ ದಳಪತಿ..

ಪ್ರತಿಧ್ವನಿ by ಪ್ರತಿಧ್ವನಿ
March 28, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಮಧ್ಯಸ್ಥಿಕೆಯ ದಾರಿ ತುಳಿದ ಹೈಕೋರ್ಟ್‌ : ಕುಮಾರಸ್ವಾಮಿ Vs ADGP ಚಂದ್ರಶೇಖರ್‌ ನಡುವಿನ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ..
Share on WhatsAppShare on FacebookShare on Telegram

ಬೆಂಗಳೂರು : ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಒಟ್ಟು ಮೂವರ ವಿರುದ್ಧ ಐಪಿಎಸ್‌ ಅಧಿಕಾರಿ ಎಂ. ಚಂದ್ರಶೇಖರ್‌ ದಾಖಲಿಸಿದ್ದರು. ಕಳೆದ 2024ರಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ದೂರು ನೀಡಿದ್ದರು. ಈ ದೂರನ್ನು ರದ್ದು ಪಡಿಸುವಂತೆ ಕುಮಾರಸ್ವಾಮಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ADVERTISEMENT
Lawyer Jagadish : IPL ಟಿಕೆಟ್‌ ಕೇಳಿದ ರಾಜಕೀಯ ನಾಯಕರ ಬಗ್ಗೆ ಲಾಯ್‌ ಜಗದೀಶ್‌ ಹೇಳಿದ್ದೇನು..! #pratidhvani

ಮಧ್ಯಸ್ಥಿಕೆಯ ಮೂಲಕ ಪರಸ್ಪರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್‌ ಸೂಚಿಸಿದ್ದು, ಇದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ ಅವರೊಂದಿಗೆ ನೇರಾ ನೇರ ಮಾತುಕತೆ ನಡೆಸುವುದಿಲ್ಲ ಎಂದು ಕುಮಾರಸ್ವಾಮಿ ತಮ್ಮ ಷರತ್ತನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಈ ವೇಳೆ ನಾವೇ ಸೂಕ್ತ ಮಧ್ಯಸ್ಥಿಕೆದಾರರನ್ನು ಹುಡುಕಿಕೊಡುತ್ತೇವೆ ಎಂದು ಕೋರ್ಟ್‌ ತಿಳಿಸಿದೆ. ನ್ಯಾಯಯಮೂರ್ತಿ ಎಸ್‌. ಸುನಿಲ್ ದತ್‌ ಯಾದವ್‌ ಅವರ ನೇತೃತ್ವದ ಪೀಠ ಮಧ್ಯಸ್ಥಗಾರರನ್ನು ನೇಮಕ ಮಾಡುವುದಾಗಿ ತಿಳಿಸಿದೆ. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್ ಪಾಷಾ, ಮಧ್ಯಸ್ಥಿಕೆದಾರರ ನೇಮಕಕ್ಕೆ ಅರ್ಜಿದಾರರು ಹಾಗೂ ದೂರುದಾರರು ಒಪ್ಪಿಗೆ ಸೂಚಿಸಿದ್ದಾರೆ. ‌ಮಧ್ಯಸ್ಥಿಕೆದಾರರು ಈ ಇಬ್ಬರನ್ನೂ ಮುಖಾಮುಖಿ ಕೂರಿಸದೇ ಪ್ರತ್ಯೇಕ ಅಭಿಪ್ರಾಯ ಸಂಗ್ರಹಿಸಲಿ ಎಂದು ನ್ಯಾಯಾಲಯಕ್ಕೆ ಕೋರಿಕೊಂಡಿದ್ದಾರೆ.

ಎಡಿಜಿಪಿ ಚಂದ್ರಶೇಖರ್ ಆಕ್ಷೇಪಾರ್ಹ ಪದ ಬಳಕೆ ಆರೋಪ: ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ | ADGP  Chandrasekhar Accused of Using Offensive Words: Protest by Hassan JDS -  Kannada Oneindia

ಈ ಈ ಮೊದಲು ನಿಮಗೆ ನೀಡಿರುವ ಸಲಹೆಯಂತೆ ಪ್ರಕರಣದ ರಾಜಿ ಸಂಧಾನ ಮಾಡಿಕೊಳ್ಳಲು ಮಧ್ಯಸ್ಥಿಕೆದಾರರನ್ನು ನೇಮಕ‌ ಮಾಡಲು ಹೆಚ್.ಡಿ. ಕುಮಾರಸ್ವಾಮಿ ಹಾಗೂ ಚಂದ್ರಶೇಖರ ಅವರು ಒಪ್ಪಿಗೆ ಸೂಚಿಸಿದ್ದಾರೆ. ಹೈಕೋರ್ಟ್ನಿಂದಲೇ ಮುಂದಿನ ವಾರ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು ಎಂದು ನ್ಯಾಯಪೀಠವು ತಿಳಿಸಿದೆ.

ಏನಿದು ಐಪಿಎಸ್‌ Vs ಪಾಲಿಟಿಷಿಯನ್ಸ್‌ ಫೈಟ್..?

ಸಂಡೂರು ಗಣಿ ಹಗರಣದಲ್ಲಿ ಲೋಕಾಯುಕ್ತದೆದುರು ಹಾಜರಾಗಿ ವಿಚಾರಣೆ ಎದುರಿಸಿದ್ದ ಬಳಿಕ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಲೋಕಾಯುಕ್ತ ಎಸ್ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರು ಭ್ರಷ್ಟ, ಬ್ಲ್ಯಾಕ್ ಮೇಲರ್ ಇತ್ಯಾದಿ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಚಂದ್ರಶೇಖರ್ ನಾವು ಇದರಿಂದ ವಿಚಲಿತರಾಗುವುದಿಲ್ಲ, ಆರೋಪಿ ಯಾವುದೇ ಸ್ಥಾನದಲ್ಲಿದ್ದರೂ ಆತ ಆರೋಪಿಯೇ ಎಂದು ಹೇಳಿದ್ದರು.

lokayukta-adgp-chandrashekhar-clarification-on-h-d-kumaraswamy-allegations-through-letter

ಅದಕ್ಕೆ ಮತ್ತೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಆತ ಕ್ರಿಮಿನಲ್ ಎಂದೇ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಿಯಮ ಉಲ್ಲಂಘಿಸಿ ಸಾಯಿ ಮಿನರಲ್ಸ್‌ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದ ಆರೋಪದ ಮೇಲೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್‌ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ನನ್ನ ಸರ್ಕಾರದಲ್ಲಿ ಈ ಅಧಿಕಾರಿ ಕೆಲ್ಸ ಮಾಡಿದ್ದಾರೆ, ಆದ್ರೆ ಸುಲಿಗೆ ಮಾಡಲು ಬಿಟ್ಟಿಲ್ಲ:  ಇದು ನಿಮಗೆ ಸಾಧ್ಯನಾ? ಕಾಂಗ್ರೆಸ್​ಗೆ ಹೆಚ್​ಡಿಕೆ ಸವಾಲ್ - Kannada News | HD ...

ಇದರಿಂದ ಕುಮಾರಸ್ವಾಮಿ, ನಿಖಿಲ್‌ ಮತ್ತು ಶಾಸಕ ಸುರೇಶ್‌ ಬಾಬು ಮಾಧ್ಯಮಗಳಲ್ಲಿ ಚಂದ್ರಶೇಖರ್‌ ಅವರ ವಿರುದ್ಧ ಕೆಲವೊಂದು ಆರೋಪ ಮಾಡಿದ್ದರು. ಹೀಗಾಗಿ ಎಡಿಜಿಪಿ ಚಂದ್ರಶೇಖರ್‌ ಅವರು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್‌ ಬಾಬು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಪೊಲೀಸರು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 223 ಮತ್ತು 224 ಅಡಿ ಎಫ್‌ಐಆರ್‌ ದಾಖಲಿಸಿದ್ದರು. ಇದನ್ನು ರದ್ದು ಕೋರಿ ಕುಮಾರಸ್ವಾಮಿ ಸೇರಿ ಇತರ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಇದರ ಮುಂದುವರೆದ ಭಾಗವಾಗಿ ಪ್ರಕರಣ ಈಗ ಸಂಧಾನದ ಹಾದಿ ಹಿಡಿದಿದೆ.

A Study of Karnataka High Court's Writ Jurisdiction

ಅಧಿಕಾರ ಇದೆ ಎಂದ ಮಾತ್ರಕ್ಕೆ ಕಾನೂನನ್ನು ಗಾಳಿಗೆ ತೂರುವಂತಾಗಬಾರದು..

ಆದರೆ ಜನಪ್ರತಿನಿಧಿಗಳಾದವರು ಸಂಧಾನಕ್ಕೆ ಇಳಿಯುವ ಮೊದಲೇ ಯೋಚನೆ ಮಾಡಬೇಕಾಗುತ್ತದೆ. ಅಧಿಕಾರ ಇದೆ ಎಂದ ಮಾತ್ರಕ್ಕೆ ತಾವೇ ತಪ್ಪಿತಸ್ಥರಾಗಿದ್ದು, ಅಧಿಕಾರಿಗಳ ಮೇಲೆ ಆಧಾರರಹಿತ ಹಾಗೂ ಸುಳ್ಳು ಆರೋಪಗಳನ್ನು ಹೊರಿಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಾನೂನು ಎಲ್ಲರಿಗೂ ಒಂದೇ, ಅದು ಜನಪ್ರತಿನಿಧಿಗಳಾಗಿರಲಿ ಅಥವಾ ಅಧಿಕಾರಿಗಳೇ ಆಗಿರಲಿ ಕಾನೂನು ಗಾಳಿಗೆ ತೂರುವುದು ಕೂಡ ಅಪರಾಧವೇ ಆಗಿದೆ. ಹಾಲಿ ಕೇಂದ್ರ ಸಚಿವರ ಕೈಯಲ್ಲಿರುವ ಅಧಿಕಾರ, ಅದಕ್ಕೆ ಪ್ರತಿಯಾಗಿ ದೂರಿನ ಸಂದರ್ಭದಲ್ಲಿ ಇಬ್ಬರ ನಡುವಿನ ಆರೋಪ – ಪ್ರತ್ಯಾರೋಪಗಳು ನೋಡಿದಾಗ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಈ ರೀತಿಯ ಬೆಳವಣಿಗೆಗಳು ಶೋಭೆ ತರಲಾರವು ಎನ್ನುವುದನು ಅರಿತುಕೊಳ್ಳಬೇಕಿದೆ.

Previous Post

ಐಪಿಎಲ್‌ ಆರಂಭದಲ್ಲೇ ಧೋನಿ ಫ್ಯಾನ್ಸ್‌ಗೆ ಬಿಗ್‌ ಶಾಕ್‌ : ಚೆನೈ ತಂಡ ಹೇಳಿದ್ದೇನು..?

Next Post

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ : ತೀವ್ರ ಕುತೂಹಲ ಕೆರಳಿಸಿದ ಬಲಿಷ್ಠ ತಂಡಗಳ ಕಾದಾಟ..

Related Posts

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?
Top Story

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

by ಪ್ರತಿಧ್ವನಿ
August 29, 2026
0

ಕನ್ನಡ ಕಿರುತೆರೆಯಲ್ಲಿ ‘ಬಿಗ್ ಬಾಸ್’ ಎಂದರೆ ಕೇವಲ ರಿಯಾಲಿಟಿ ಶೋ ಅಲ್ಲ, ವೀಕ್ಷಕರಿಗೆ ಅದೊಂದು ಭಾವನಾತ್ಮಕ ಸಂಪರ್ಕ. ಪ್ರತಿವರ್ಷ ಬಿಗ್ ಬಾಸ್ ಮನೆಗೆ ಯಾರು ಪ್ರವೇಶಿಸುತ್ತಾರೆ, ಮನೆಯಲ್ಲಿ...

Read moreDetails
ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

August 29, 2026
*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

August 29, 2026
ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

August 29, 2026
ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

August 29, 2026
Next Post
ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ : ತೀವ್ರ ಕುತೂಹಲ ಕೆರಳಿಸಿದ ಬಲಿಷ್ಠ ತಂಡಗಳ ಕಾದಾಟ..

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ : ತೀವ್ರ ಕುತೂಹಲ ಕೆರಳಿಸಿದ ಬಲಿಷ್ಠ ತಂಡಗಳ ಕಾದಾಟ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada