• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಸೆಂಚುರಿ ಕ್ಲಬ್’ಗೆ ಹೈಕೋರ್ಟ್‌ ಶಾಕ್‌: ಇನ್ಮುಂದೆ RTI ವ್ಯಾಪ್ತಿಯಲ್ಲಿ ಕ್ಲಬ್‌, ದಾಖಲೆಗಳೆಲ್ಲ ಸಾರ್ವಜನಿಕರಿಗೆ ಲಭ್ಯ!

ಪ್ರತಿಧ್ವನಿ by ಪ್ರತಿಧ್ವನಿ
July 13, 2026
in Top Story
0
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ
Share on WhatsAppShare on FacebookShare on Telegram

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಹಾಗೂ ಐತಿಹಾಸಿಕ ‘ಸೆಂಚುರಿ ಕ್ಲಬ್’ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕ್ಲಬ್ ಅನ್ನು ‘ಸಾರ್ವಜನಿಕ ಪ್ರಾಧಿಕಾರ’ (Public Authority) ಎಂದು ಘೋಷಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದ್ದು, ಸೆಂಚುರಿ ಕ್ಲಬ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ADVERTISEMENT
Cabinet Expansion: ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನ? ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು? #pratidhvani

ಈ ತೀರ್ಪಿನೊಂದಿಗೆ ಇನ್ಮುಂದೆ ಸೆಂಚುರಿ ಕ್ಲಬ್‌ನ ಆಡಳಿತ, ಹಣಕಾಸು ವ್ಯವಹಾರಗಳು, ನಿಯಮಾವಳಿಗಳು ಹಾಗೂ ಇತರ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗಲಿವೆ.ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ. ಕ್ಲಬ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಸ್ವಾತಂತ್ರ್ಯಪೂರ್ವದಲ್ಲಿ ಸರ್ಕಾರದಿಂದ ಉಚಿತವಾಗಿ ನೀಡಲಾದ ಅಮೂಲ್ಯ ಭೂಮಿಯ ಬಳಕೆ ಸರ್ಕಾರದ ‘ಪರೋಕ್ಷ ಧನಸಹಾಯ’ (Indirect Funding)ಕ್ಕೆ ಸಮಾನವಾಗಿದೆ ಎಂದು ಸ್ಪಷ್ಟಪಡಿಸಿದೆ.

Operation Footpath in Bengaluru : ಬೆಂಗಳೂರು ರಾಜ ಕಳೆ ಇತ್ತು ಈಗ ಮನಿ ಮೇಕಿಂಗ್ ರಾಕೆಟ್.!  #pratidhvani

ನ್ಯಾಯಾಲಯದ ಗಮನ ಸೆಳೆದ ಪ್ರಮುಖ ಅಂಶವೆಂದರೆ, 1913ರಲ್ಲಿ ಆಗಿನ ಮೈಸೂರು ಸಂಸ್ಥಾನದ ಆಡಳಿತದ ಅವಧಿಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿರುವ ಸುಮಾರು 7.5 ಎಕರೆ ಸರ್ಕಾರಿ ಭೂಮಿಯನ್ನು ಸೆಂಚುರಿ ಕ್ಲಬ್‌ಗೆ ಉಚಿತವಾಗಿ ನೀಡಲಾಗಿತ್ತು. ಇಂದಿನ ದಿನಗಳಲ್ಲಿ ಈ ಭೂಮಿಯ ಮೌಲ್ಯ ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳಷ್ಟಿರಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.”ಈ ಅತ್ಯಮೂಲ್ಯ ಸರ್ಕಾರಿ ಭೂಮಿಯಿಲ್ಲದೆ ಕ್ಲಬ್‌ನ ಅಸ್ತಿತ್ವವೇ ಸಾಧ್ಯವಾಗುತ್ತಿರಲಿಲ್ಲ. ಸದಸ್ಯರು ಪಾವತಿಸುವ ವಾರ್ಷಿಕ ಚಂದಾ ಹಣ ಈ ಭೂಮಿಯ ಮೌಲ್ಯದ ಮುಂದೆ ಅತ್ಯಲ್ಪವಾಗಿದೆ. ಹೀಗಾಗಿ ಈ ಉಚಿತ ಭೂಮಿ ಸರ್ಕಾರದ ಪರೋಕ್ಷ ಧನಸಹಾಯವೆಂದೇ ಪರಿಗಣಿಸಬೇಕು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

BY Vijayendra : ಬೆಂಗಳೂರು ಅಭಿವೃದ್ಧಿನೇ ರಾಜ್ಯದ ಅಭಿವೃದ್ಧಿ ಅಂದುಕೊಂಡಿದ್ದಾರೆ ಡಿಕೆಶಿ.! #pratidhvani

ಕ್ಲಬ್‌ನ ಎಲ್ಲಾ ಕ್ರೀಡಾ, ಸಾಮಾಜಿಕ ಹಾಗೂ ಮನರಂಜನಾ ಚಟುವಟಿಕೆಗಳು ಇದೇ ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವುದರಿಂದ, ಅದು ಸಾರ್ವಜನಿಕ ಆಸ್ತಿಯ ಪ್ರಯೋಜನ ಪಡೆಯುತ್ತಿದೆ. ಈ ಕಾರಣದಿಂದ ಮಾಹಿತಿ ಆಯೋಗ ನೀಡಿದ್ದ ಆದೇಶ ಹಾಗೂ ಏಕಸದಸ್ಯ ಪೀಠದ ತೀರ್ಪು ಕಾನೂನುಬದ್ಧವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಸೆಂಚುರಿ ಕ್ಲಬ್ ಪರ ವಕೀಲರು, ಕ್ಲಬ್ ಸಂಪೂರ್ಣ ಖಾಸಗಿ ಸದಸ್ಯತ್ವದ ಸಂಸ್ಥೆಯಾಗಿದ್ದು, ಅದರ ಎಲ್ಲಾ ವೆಚ್ಚಗಳನ್ನು ಸದಸ್ಯರ ಚಂದಾದ ಮೂಲಕವೇ ಭರಿಸಲಾಗುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ದೊರೆತ ಭೂಮಿಯನ್ನು ಸರ್ಕಾರದ ಧನಸಹಾಯ ಎಂದು ಪರಿಗಣಿಸಲಾಗದು. ಆದ್ದರಿಂದ ಕ್ಲಬ್‌ನ್ನು ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸುವುದು ಸರಿಯಲ್ಲ ಎಂದು ವಾದಿಸಿದ್ದರು.ಆದರೆ ಈ ವಾದವನ್ನು ಒಪ್ಪದ ನ್ಯಾಯಪೀಠ, ಸಾರ್ವಜನಿಕ ಆಸ್ತಿಯ ಉಚಿತ ಬಳಕೆ ಸ್ವತಃ ಸರ್ಕಾರದ ಪರೋಕ್ಷ ಸಹಾಯಕ್ಕೆ ಸಮಾನವಾಗುತ್ತದೆ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿದೆ.

Dr H N Ravindra  : ಮೋದಿ ಕಳ್ಳರನ್ನ ಕಳ್ಳ ಅಂತ ಹೇಳೇ ಇಲ್ಲಾ.! #pratidhvani #DrHNRavindra #dkshivakumar

ಈ ಪ್ರಕರಣದ ಆರಂಭ 2012ರಲ್ಲಿ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಎಸ್. ಉಮಾಪತಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸೆಂಚುರಿ ಕ್ಲಬ್‌ನ ನಿಯಮಾವಳಿ ಹಾಗೂ ಆಡಳಿತಕ್ಕೆ ಸಂಬಂಧಿಸಿದ ದಾಖಲೆಗಳ ಮಾಹಿತಿಯನ್ನು ಕೋರಿದ್ದರು. ಆದರೆ, ತಾವು ಖಾಸಗಿ ಸಂಸ್ಥೆಯಾಗಿರುವುದರಿಂದ RTI ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕ್ಲಬ್ ಮಾಹಿತಿ ನೀಡಲು ನಿರಾಕರಿಸಿತ್ತು.

ಇದನ್ನು ಪ್ರಶ್ನಿಸಿ ಉಮಾಪತಿ ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಮಾಹಿತಿ ಆಯೋಗ, 1913ರಲ್ಲಿ ಮೈಸೂರು ಮಹಾರಾಜ ನರಸಿಂಹರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಅವಧಿಯಲ್ಲಿ ಕ್ಲಬ್‌ಗೆ ಕಬ್ಬನ್ ಪಾರ್ಕ್‌ನಲ್ಲಿರುವ 7.5 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿತ್ತು. ಇಂತಹ ಅಮೂಲ್ಯ ಸಾರ್ವಜನಿಕ ಆಸ್ತಿಯ ಉಚಿತ ಬಳಕೆ ಸರ್ಕಾರದ ಪರೋಕ್ಷ ಧನಸಹಾಯವಾಗಿರುವುದರಿಂದ ಕ್ಲಬ್ RTI ವ್ಯಾಪ್ತಿಗೆ ಬರುತ್ತದೆ ಎಂದು ಆದೇಶಿಸಿತ್ತು.

 

ಆ ಆದೇಶವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವೂ ಎತ್ತಿಹಿಡಿದಿತ್ತು. ಇದೀಗ ವಿಭಾಗೀಯ ಪೀಠವೂ ಅದನ್ನೇ ಸಮರ್ಥಿಸಿದ್ದು, ಸೆಂಚುರಿ ಕ್ಲಬ್ ಮೇಲ್ಮನವಿಯನ್ನು ವಜಾಗೊಳಿಸಿದೆ.ಈ ತೀರ್ಪು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯ ಕುರಿತು ಮಹತ್ವದ ನಿದರ್ಶನವಾಗಿದ್ದು, ಸರ್ಕಾರಿ ಭೂಮಿ ಅಥವಾ ಸಾರ್ವಜನಿಕ ಸಂಪನ್ಮೂಲಗಳ ಸೌಲಭ್ಯ ಪಡೆದು ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೂ RTI ಅನ್ವಯಿಸಬಹುದೆಂಬ ಸಂದೇಶವನ್ನು ನೀಡಿದೆ.

 

Tags: bengalurubengaluru newsBreaking NewsCentury ClubCentury Club CaseCourt OrderCubbon ParkHigh Court VerdictKarnatakaKarnataka High Courtkarnataka newslegal newsMysore MaharajaPublic AuthorityPublic Landright to informationRTIRTI ActS Umapathisir m visvesvaraya
Previous Post

ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

Next Post

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸಿದರೆ ಭಾರಿ ದಂಡ!

Related Posts

ಬಿಡದಿಯಲ್ಲಿ ರೈತರ ರಣಕಹಳೆ: ಇಂದು ಇಡೀ ದಿನ ಏನಾಯಿತು? ಇಲ್ಲಿದೆ ಫುಲ್ ಅಪ್ಡೇಟ್
Top Story

ಬಿಡದಿಯಲ್ಲಿ ರೈತರ ರಣಕಹಳೆ: ಇಂದು ಇಡೀ ದಿನ ಏನಾಯಿತು? ಇಲ್ಲಿದೆ ಫುಲ್ ಅಪ್ಡೇಟ್

by ಪ್ರತಿಧ್ವನಿ
July 13, 2026
0

ರಾಮನಗರ ಜಿಲ್ಲೆಯ ಬಿಡದಿ ಸುತ್ತಮುತ್ತ ಪ್ರಸ್ತಾಪಿಸಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆ ವಿರುದ್ಧ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಸರ್ಕಾರ...

Read moreDetails
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸಿದರೆ ಭಾರಿ ದಂಡ!

July 13, 2026
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

July 13, 2026
‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

‘ಜುರಾಸಿಕ್ ಪಾರ್ಕ್’ ಖ್ಯಾತಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ: ಕ್ಯಾನ್ಸರ್‌ ಗೆದ್ದರೂ ಬದುಕುಳಿಯದ ಜೀವ!

July 13, 2026
ಮತದಾರರಿಗೆ ಹಣ ಹಂಚಲು ಹತ್ತು ಕೋಟಿ ಸಂಗ್ರಹ ಆರೋಪ: ಸುಧಾಕರ್ ಪ್ರಕರಣದ ವಿಚಾರಣೆ ಮುಂದೂಡಿಕೆ

ಮತದಾರರಿಗೆ ಹಣ ಹಂಚಲು ಹತ್ತು ಕೋಟಿ ಸಂಗ್ರಹ ಆರೋಪ: ಸುಧಾಕರ್ ಪ್ರಕರಣದ ವಿಚಾರಣೆ ಮುಂದೂಡಿಕೆ

July 13, 2026
Next Post
ಅಮೆರಿಕ–ಇರಾನ್ ಸಂಘರ್ಷ ತೀವ್ರ! ದ್ವೀಪದ ಮೇಲೆ ಅಮೆರಿಕ ಭೀಕರ ದಾಳಿ

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸಿದರೆ ಭಾರಿ ದಂಡ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada