ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಪೊಲೀಸ್ರು ಅರೆಸ್ಟ್ ಮಾಡೋದಕ್ಕೆ ಬರ್ತಿದ್ದಾರೆ ಅನ್ನೋ ಸಣ್ಣ ಸುಳಿವು ಸಿಕ್ಕಿದ್ರು ಕೂಡ ಆರೋಪಿ ದರ್ಶನ್ (Actor darshan) ನಾಪತ್ತೆಯಾಗೋ ಸಾಧ್ಯತೆ ಇತ್ತು. ಹೀಗಾಗಿ ಸುಳಿವೇ ಬಿಟ್ಟುಕೊಡದ ಪೊಲೀಸರು ಮೈಸೂರಲ್ಲಿ (Mysuru) ಬೆಳಗ್ಗೆ 8 ಗಂಟೆ ಒಳಗೆ ದರ್ಶನ್‌ನ ಲಾಕ್ ಮಾಡಲು ಪ್ಲಾನ್ ಮಾಡಿದ್ರಂತೆ.

ಅಲ್ಲದೇ ಮೈಸೂರು ಮಂಡ್ಯ (Mandya) ಬಾರ್ಡರ್ ದಾಟುವವರೆಗೂ ಅರೆಸ್ಟ್ ಬಗ್ಗೆ ಒಂದು ಚೂರು ಸುಳಿವು ನೀಡಿರಲಿಲ್ಲ. ಒಂದು ವೇಳೆ ವಿಚಾರ ಲೀಕ್ ಅದ್ರೆ ಅಭಿಮಾನಿಗಳು ಮುತ್ತಿಗೆ ಹಾಕುವ ಆತಂಕ ಇದ್ದಿದ್ರಿಂದ ಪ್ರತೀ ಅರ್ಧ ಗಂಟೆಗೆ ಹಿರಿಯ ಅಧಿಕಾರಿಗಳಿಂದ ಬಾರ್ಡರ್ ದಾಟಿದ್ರಾ, ಏನೂ ಪ್ರಾಬ್ಲಂ ಆಗ್ತಿಲ್ಲ ತಾನೆ ಅಂತಾ ಕಾಲ್ ಮೇಲೆ ಕಾಲ್ ಬರ್ತಿತ್ತಂತೆ.
ಅಸಲಿಗೆ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿ (Express highway) ಸವಾರರಿಗೂ ಕೂಡ ದರ್ಶನ್ ಪೊಲೀಸ್ರ ಜೀಪ್ ನಲ್ಲಿರೋದು ಗೊತ್ತಾಗದ ಹಾಗೆ ಕರೆತಂದಿದ್ದಾರೆ.ಪೊಲೀಸರ ಈ ಮೆಗಾ ಆಪರೇಷ್ ಸದ್ಯ ಬಹಳ ಪ್ರಶಂಸೆಗೆ ಪಾತ್ರವಾಗಿದೆ.