ಪ್ರಧಾನಿ ನರೇಂದ್ರ ಮೋದಿ ಇಂದು ಬಂಡಿಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮಾಡಿದ್ದಾರೆ. 2 ಗಂಟೆಗಳ ಸಫಾರಿ ಅವಧಿಯಲ್ಲಿ ಅವರಿಗೆ ಯಾವುದೇ ಹುಲಿಗಳು ಕಂಡಿಲ್ಲವಾದರೂ ಸಹ ಕೆಲವು ವನ್ಯಜೀವಿಗಳ ಫೋಟೋಗಳನ್ನು ಪ್ರಧಾನಿ ಮೋದಿ ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.
![](https://pratidhvani.com/wp-content/uploads/2023/04/2023-04-09-3.jpg)
ತಾವು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದ ವನ್ಯ ಜೀವಿಗಳ ಫೋಟೋಗಳನ್ನು ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
![](https://pratidhvani.com/wp-content/uploads/2023/04/್.jpg)
ಪ್ರಧಾನಿ ಮೋದಿ ವನ್ಯಜೀವಿಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ ಅನ್ನೋದು ಈಗಾಗಲೇ ಹಲವು ಬಾರಿ ಪ್ರೂವ್ ಆಗಿದೆ. ಅಂತೆಯೇ ಇಂದೂ ಕೂಡ ಪ್ರಧಾನಿ ಮೋದಿ ತಮ್ಮ ಸಫಾರಿಯನ್ನು ಸಖತ್ ಎಂಜಾಯ್ ಮಾಡಿದರು.
![](https://pratidhvani.com/wp-content/uploads/2023/04/ಸ.jpg)
ಸಫಾರಿಗೆ ಸೂಟ್ ಆಗುವ ರೀತಿಯಲ್ಲಿ ಉಡುಪನ್ನೂ ಬದಲಾಯಿಸಿಕೊಂಡಿದ್ದ ಪ್ರಧಾನಿ ಮೋದಿ ಖಾಕಿ ಬಣ್ಣದ ಉಡುಪಿನಲ್ಲಿ ಮಿಂಚಿದರು. ಸಫಾರಿ ಡ್ರೆಸ್ನಲ್ಲಿ ಪ್ರಧಾನಿ ಮೋದಿ ಆಕರ್ಷಣೀಯವಾಗಿ ಕಂಡಿದ್ದಾರೆ.