ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆ ಎಡಬಿಡದೆ ಸುರಿಯುತ್ತಿದ್ದು ಮಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಸೆಂ.ಮೀ ಮಳೆ ಸುರಿದಿರುವುದು ಗರಿಷ್ಠ ದಾಖಲೆಯಾಗಿದೆ.
ಭಾಗಮಂಡಲ ಮತ್ತು ಸುತ್ತಮುತ್ತಲು ಮಳೆ ನಿರಂತರವಾಗಿ ಸುರಿಯುತ್ತಿದ್ದು ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಭಾಗಮಂಡಲ ಹಾಗು ನಾಪೋಕ್ಲು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ವಾಹನ ಸಂಚಾರವನ್ನ ನಿರ್ಬಂಧಿಸಲಾಗಿದೆ.
ಕಳೆದ 12 ಘಂಟೆಯಲ್ಲಿ ಮಡಿಕೇರಿಯ ಗಾಳಿಬೀಡುವಿನಲ್ಲಿ 16, ಭಾಗಮಂಡಲದಲ್ಲಿ 13, ಪೆರಾಜೆ/ ಬೆಟ್ಟದಹಳ್ಳಿಯಲ್ಲಿ 11, ಕರಿಕೆ ಹಾಗು ಮಡಿಕೇರಿ ನಗರದಲ್ಲಿ 8 ಸೆಂ.ಮೀ ಮಳೆಯಾಗಿದೆ.
