ಇಷ್ಟು ದಿನ ಬಿಸಿಲಿನಿಂದ ಹೈರಾಣಾಗಿ ಹೋಗಿದ್ದ ಸಿಲಿಕಾನ್ ಸಿಟಿ ಜನರಿಗೆ ಮಳೆರಾಯ(rain) ತಂಪೆರೆದಿದ್ದಾನೆ. ಇಂದು ಬೆಂಗಳೂರಿನ(bangalore) ಹಲವು ಕಡೆ ಭಾರೀ ಮಳೆಯಾಗಿದ್ದು, ಕೆಆರ್ ಮಾರ್ಕೆಟ್, ರಿಚ್ ಮಂಡ್ ಸರ್ಕಲ್ ಮಲ್ಲೇಶ್ವರಂ ಸೇರಿ ಹಲವೆಡೆ ಮಳೆ ಸುರಿದಿದೆ. ಇನ್ನು ದಿಢೀರ್ ಮಳೆಯಿಂದ ಕೆಲವರು ಖುಷಿ ಪಟ್ಟರೆ, ವಾಹನ ಸವಾರರು ಪರದಾಡುವಂತಾಗಿದೆ.

ಜೊತೆಗೆ ಕರ್ನಾಟಕ ವಿಧಾನ ಸಭೆ ಚುನಾವಣೆ ನಿಮಿತ್ತ, ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ(narendra modi) ಬೆಂಗಳೂರಿಗೆ ಆಗಮಿಸಲಿದ್ದು ಮೋದಿ ರೋಡ್ ಶೋಗೆ(road show) ವರುಣರಾಯ ಅಡ್ಡಿಪಡಿಸುವ ಸಾಧ್ಯತೆ ಇದೆ.