ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು ನಗರದ ಹಲೆವೆಡೆ ಮರಗಳು ಧರೆಗುರುಳಿವೆ.
ಕಳೆದ ಮೂರು ದಿನಗಳಿಂದ ಸಂಜೆ ನಗರದಲ್ಲಿ ಮಳೆಯಾಗುತ್ತಿದೆ. ಶನಿವಾರ ಕೂಡ ಸಂಜೆ ಆಗುತ್ತಿದ್ದಂತೆ ಆವರಿಸಿದ ಮಳೆ ಸುಮಾರು ೪ ಗಂಟೆಗಳ ಕಾಲ ಅಬ್ಬರಿಸಿದೆ.
ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶೇಷಾದ್ರಿಪುರ, ಮಲ್ಲೇಶ್ವರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲದೇ ವಾಹನ ಸವಾರರು ಸಂಚಾರ ದಟ್ಟಣೆಯಿಂದ ತತ್ತರಿಸುವಂತಾಗಿದೆ.