ಪೀರಿಯಡ್ಸ್ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಹೊಟ್ಟೆ ಹಾಗೂ ಬೆನ್ನಿನ ಭಾಗದಲ್ಲಿ ತುಂಬಾನೇ ನೋವು ಹಾಗೂ ಎಳೆತ ಇರುತ್ತದೆ. ಇಂತಹ ಸಂದರ್ಭದಲ್ಲಿ ಸರಿಯಾಗಿ ಊಟ ತಿಂಡಿ ಸೇರುವುದಿಲ್ಲ, ವಾಕರಿಕೆ, ತಲೆನೋವು ಹಾಗೂ ಕೋಪದ ಜೊತೆಗೆ ಮೂಡ್ ಸ್ವಿಂಗ್ಸ್ ಹೆಚ್ಚಿರುತ್ತದೆ. ಕೆಲವೊಬ್ಬರಿಗೆ ಬ್ಲಡ್ ಫ್ಲೋ ಕೂಡ ಜಾಸ್ತಿ ಇರುತ್ತದೇ..ಆದ್ರೆ ಅಧಿಕ ರಕ್ತಸ್ರಾವ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ..ಇದನ್ನು ಕಡಿಮೆ ಮಾಡಲು ತಪ್ಪದೆ ಈ ಪದಾರ್ಥಗಳನ್ನು ಸೇವಿಸಿ..
ಅರಿಶಿನ
ಮುಟ್ಟಿನ ವೇಳೆ ರಕ್ತಸ್ರಾವವನ್ನು ಕಡಿಮೆ ಮಾಡಲು ,ಅರ್ಧ ಚಮಚದಷ್ಟು ಅರಿಶಿನವನ್ನು ಒಂದು ಲೋಟ ಬಿಸಿ ನೀರಿಗೆ ಅಥವ ಒಂದು ಲೋಟ ಹಾಲಿಗೆ ಬೆರೆಸಿ ಸೇವಿಸುವುದರಿಂದ ರಕ್ತಸ್ರಾವ ಕಡಿಮೆ ಮಾಡುತ್ತದೆ.
ಅಲೋವೆರಾ ಜ್ಯೂಸ್
ಪಿರಿಯಡ್ಸ್ ಸಂದರ್ಭದಲ್ಲಿ ಅರ್ಧ ಲೋಟದಷ್ಟು ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಬ್ಲಡ್ ಫ್ಲೋ ಕಡಿಮೆಯಾಗುತ್ತದೆ.
ಕೊತ್ತಂಬರಿ ಬೀಜಗಳು
ರಾತ್ರಿ ಮಲಗುವ ಮುನ್ನ ಒಂದು ಚಮಚದಷ್ಟು ಕೊತ್ತಂಬರಿ ಬೀಜಗಳನ್ನು ಒಂದು ಲೋಟ ನೀರಿಗೆ ಹಾಕಿಡಿ.ಬೆಳಗ್ಗೆ ಎದ್ದು ಆ ನೀರು ಕುಡಿಯುದರಿಂದ ರಕ್ತ ಸ್ರಾವ ನಿಯಂತ್ರಣಗೊಳ್ಳುತ್ತದೆ.
ಸಾಸಿವೆ
1 ಚಮಚ ಸಾಸಿವೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೀರನ್ನು ಕುಡಿಯುವುದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ. ಆದ್ರೆ ಕೆಲವರಿಗೆ ಸಾಸಿವೆ ನೀರು ವಾಕರಿಕೆ ತರಿಸುತ್ತದೆ.