ಹೃದಯದ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಹಾರ್ಟ್ ಅಟ್ಯಾಕ್ ಅನ್ನುವಂತದ್ದು ತುಂಬಾನೇ ಕಾಮನ್ ಆಗಿದೆ.ಅದ್ರಲ್ಲೂ ಇತ್ತೀಚಿನ ಲೈಫ್ ಸ್ಟೈಲ್ ಕೂಡ ಹಾಗೆಯಿದೆ.ಕೆಲಸ, ಒತ್ತಡ, ಸ್ಟ್ರೆಸ್ ಅಂತ ಜೀವನವನ್ನು ಬ್ಯುಸಿ ಆಗಿ ಇಟ್ಟುಕೊಂಡಿರುತ್ತಾರೆ.ಎಷ್ಟೇ ಸ್ಟ್ರೆಸ್ ಇದ್ದರು ಕೂಡ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.. ಇನ್ನು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಪದಾರ್ಥಗಳನ್ನ ತಪ್ಪದೆ ಸೇವಿಸಿ.

ಹಸಿರು ಎಲೆಗಳು
ಪಾಲಕ್ ಸೊಪ್ಪು ಹಾಗೂ ಕೇಲ್ ಇದನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
ಬರ್ರಿ ಹಣ್ಣುಗಳು
ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ಗಳಿಂದ ಸಮೃದ್ಧವಾಗಿದೆ.ಮುಖ್ಯವಾಗಿ ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಬ್ಲಡ್ ನಾರ್ಮಲ್ ಆಗಿ ಇಡುತ್ತದೆ.

ಡ್ರೈ ಫ್ರೂಟ್ಸ್
ಬಾದಾಮಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುವ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್ನಿಂದ ಸಮೃದ್ಧವಾಗಿದೆ. ವಾಲ್ನಟ್ಸ್ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ.