ಹೆಚ್ಚಿನ ಪ್ಲಾಸ್ಟಿಕ್ ಇಂದ ತಯಾರಿಸಿದಂತಹ ಬಾಕ್ಸ್ ಗಳನ್ನ ಟಿಫನ್ ಬಾಕ್ಸ್ ಆಗಿ ಬಳಸುತ್ತಾರೆ..ಮಾತ್ರವಲ್ಲದೇ ಮಕ್ಕಳಿಗೆ ಲಂಚ್ ಬಾಕ್ಸ್ ಗೆ ನೀಡುತ್ತಾರೆ..ಇನ್ನು ಹೋಟೆಲ್ ಗಳಲ್ಲಿ ಪಾರ್ಸಲ್ ನ ಪ್ಲಾಸ್ಟಿಕ್ ಬಾಕ್ಸ್ ಅಲ್ಲಿನೇ ಕೊಡುತ್ತಾರೆ..ಅಥವಾ ಪ್ಲಾಸ್ಟಿಕ್ ಕವರ್ ಅಲ್ಲಿ ಕೊಡುತ್ತಾರೆ. ಪರಿಸರಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ಪ್ಲಾಸ್ಟಿಕ್ ಒಳ್ಳೆಯದಲ್ಲ.ಹೇಗೆ ಅನ್ನುವ ಮಾಹಿತಿ ಇಲ್ಲಿದೆ..

ರಾಸಾಯನಿಕ ಮಾಲಿನ್ಯ
ಪ್ಲಾಸ್ಟಿಕ್ ಬಾಕ್ಸ್ ಗಳು ಆಹಾರಕ್ಕೆ BPA, ಥಾಲೇಟ್‌ಗಳು ಮತ್ತು PFAS ನಂತಹ ರಾಸಾಯನಿಕಗಳನ್ನು ಸೋರಿಕೆ ಮಾಡಬಹುದು, ವಿಶೇಷವಾಗಿ ಬಿಸಿ ಆಹಾರ ಅಥವಾ ಕೊಬ್ಬಿನ ಅಥವಾ ಆಮ್ಲೀಯ ಆಹಾರಗಳಿಗೆ ಒಡ್ಡಿಕೊಂಡಾಗ.ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ವಿಷಕಾರಿ ಅಂಶ
ಕೆಲವು ಪ್ಲಾಸ್ಟಿಕ್‌ಗಳು ವಿಷಕಾರಿ ಅಂಶವನ್ನು ಹೊಂದಿರುತ್ತವೆ, ಇದು ಮಾನವನ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ.ಮುಖ್ಯವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಬ್ಯಾಕ್ಟೀರಿಯಾದ ಬೆಳವಣಿಗೆ ಹೆಚ್ಚು
ಪ್ಲಾಸ್ಟಿಕ್ ಬಾಕ್ಸ್ ಗಳು ಬ್ಯಾಕ್ಟೀರಿಯಾವನ್ನು ಹೆಚ್ಚುಮಾಡುತ್ತದೆ , ಇದು ವಿಶೇಷವಾಗಿ ಬೆಚ್ಚಗಿನ ಅಥವಾ ಆರ್ದ್ರ ವಾತಾವರಣದಲ್ಲಿ ವೇಗವಾಗಿ ಬೆಳೆಯುತ್ತದೆ .