ಹಸಿರು ಬಣ್ಣದ ತರಕಾರಿಗಳ ಹಾಗೆ ನೇರಳೆ ಬಣ್ಣದ ತರಕಾರಿ ಹಾಗೂ ಹಣ್ಣುಗಳು ಸಾಕಷ್ಟಿವೆ. ದಿನನಿತ್ಯದಲ್ಲಿ ನಾವು ಇವುಗಳನ್ನ ಸೇವಿಸುತ್ತೇವೆ ಕೂಡ.ಬದನೆಕಾಯಿಗಳು, ದ್ರಾಕ್ಷಿ, ದಾಳಿಂಬೆ, ಬೆರಿಗಳು, ನೇರಳೆ ಎಲೆಕೋಸು, ಬೆರಿಗಳು,ಇರುಳ್ಳಿ ಹೀಗೆ ಸಾಕಷ್ಟಿವೆ.. ಇವುಗಳಲ್ಲಿ ಪೌಷ್ಟಿಕಾಂಶಗಳ ಜೊತೆಗೆ ಸಾಕಷ್ಟು ಹೆಲ್ತ್ ಬೆನಿಫಿಟ್ಸ್ ಇವೆ, ಆ ಬಗ್ಗೆ ಇಲ್ಲಿದೆ ಮಾಹಿತಿ.

ಉರಿಯೂತವನ್ನು ಕಡಿಮೆ ಮಾಡುತ್ತದೆ
ನೇರಳೆ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ
ನೇರಳೆ ಹಣ್ಣುಗಳು ಮತ್ತು ತರಕಾರಿಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಕೊಲೆಸ್ಟ್ರಾಲ್ ಮಟ್ಟ ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಇದರಿಂದ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯ
ನೇರಳೆ ಬಣ್ಣದ ಹಣ್ಣು ಮತ್ತು ತರಕಾರಿಗಳು ಅರಿವಿನ ಕಾರ್ಯ, ಸ್ಮರಣಶಕ್ತಿ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತವೆ.
ಜೀರ್ಣಕ್ರಿಯೆಗೆ ಉತ್ತಮ
ನೇರಳೆ ಬಣ್ಣದ ತರಕಾರಿಗಳು ಮತ್ತು ಹಣ್ಣುಗಳು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಕಾನ್ಸ್ಟಿಪೇಶನ್ ಸಮಸ್ಯೆ ಹೊಟ್ಟೆ ನೋವು ಹೊಟ್ಟೆ ಉಬ್ಬರದಂತ ಸಮಸ್ಯೆಯನ್ನ ನಿವಾರಿಸಲು ಹೆಲ್ಪ್ ಫುಲ್.