• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಸಿಎಂ ವಿರುದ್ಧ ರಕ್ತ ಬಲಿ ಕೊಟ್ಟು ತಂತ್ರ ಶಕ್ತಿ ವಿದ್ಯೆ ಪ್ರಯೋಗ..

ಕೃಷ್ಣ ಮಣಿ by ಕೃಷ್ಣ ಮಣಿ
January 31, 2025
in Uncategorized
0
ಸಿಎಂ ವಿರುದ್ಧ ರಕ್ತ ಬಲಿ ಕೊಟ್ಟು ತಂತ್ರ ಶಕ್ತಿ ವಿದ್ಯೆ ಪ್ರಯೋಗ..
Share on WhatsAppShare on FacebookShare on Telegram

ಮಂಗಳೂರಿನಲ್ಲಿ ಸಲೂನ್‌ನಲ್ಲಿ ಬಾಡಿ ಮಸಾಜ್‌ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸ್ತಿದ್ದಾರೆ ಎಂದು ಜನವರಿ 23ರಂದು ರಾಮಸೇನೆ ನೇತೃತ್ವದಲ್ಲಿ ದಾಳಿ ನಡೆದಿತ್ತು. ದಾಳಿ ವೇಳೆ ಸಾಕಷ್ಟು ಪೀಠೋಪಕರಣ ಧ್ವಂಸ ಮಾಡಲಾಗಿತ್ತು. ಆ ಪ್ರಕರಣದಲ್ಲಿ ರಾಮಸೇನೆ ಮುಖ್ಯಸ್ಥ ಪ್ರಸಾದ್‌ ಅತ್ತಾವರ್‌ ಸೇರಿದಂತೆ 13 ಜನರನ್ನು ಅರೆಸ್ಟ್‌ ಮಾಡಿ ಮೊಬೈಲ್ ಪರಿಶೀಲನೆ ಮಾಡಲಾಯ್ತು. ಈ ವೇಳೆ ಭಯಾನಕ ಸತ್ಯವೊಂದು ಹೊರಬಿದ್ದಿದೆ. ಮುಡಾ ಕೇಸ್‌ನಲ್ಲಿ ಸಿಎಂ ವಿರುದ್ಧ ಹೋರಾಟ ಮಾಡ್ತಿದ್ದವರಿಗೆ ಶಕ್ತಿ ಬರಬೇಕು, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌ನಲ್ಲಿ ಹಿನ್ನಡೆ ಆಗ್ಬೇಕು ಅನ್ನೋ ರೀತಿಯಲ್ಲಿ ಪೂಜೆ ಮಾಡಿದ್ದಾರೆ.

ADVERTISEMENT

ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್​ನಲ್ಲಿ ಸಾಕಷ್ಟು ವಿಡಿಯೋಗಳು ಸಿಕ್ಕಿದ್ದು, ಅದರಲ್ಲಿ ಶಕ್ತಿದೇವತೆಗಳ ಮುಂದೆ ಸರಣಿ ಪ್ರಾಣಿ ಬಲಿ ಕೊಟ್ಟು ಪ್ರಾಣಿಗಳ ರಕ್ತವನ್ನು RTI ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಅಭಿಷೇಕ ಮಾಡಿದ್ದಾರೆ. ಇನ್ನು ಈ ರೀತಿಯ ರಕ್ತದ ಅಭಿಷೇಕದ ಮೂಲಕ ಇಬ್ಬರಿಗೂ ಮುಡಾ ಕೇಸ್​ನಲ್ಲಿ ಬಲ ತುಂಬಿದ್ದಾರೆ ಎನ್ನಲಾಗ್ತಿದೆ. ಮೊಬೈಲ್‌ನಲ್ಲಿ ವಿಡಿಯೋ ನೋಡಿದ ಮಂಗಳೂರಿನ ಬರ್ಕೆ ಪೊಲೀಸರು, ಪ್ರಸಾದ್ ಅತ್ತಾವರ್ ಮತ್ತು ಅನಂತ್ ಭಟ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ.

RTI ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಪ್ರಾಣಿ ಬಲಿಕೊಟ್ಟು ರಕ್ತಾಭಿಷೇಕ ಮಾಡಿದ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸ್ನೇಹಮಯಿ ಕೃಷ್ಣ, ಮಂಗಳೂರು ಪೊಲೀಸರು, ಮೈಸೂರು ಕಮೀಷನರ್‌ಗೆ ಈ ಬಗ್ಗೆ ದೂರು‌ ನೀಡ್ತೀನಿ. ಕಾನೂನು ಪ್ರಕಾರ ಕಾನೂನು ಹೋರಾಟ ಮಾಡುತ್ತೇನೆ. ನನ್ನ ಫೋಟೋ ಇಟ್ಟು ಪೂಜೆ ಮಾಡಿಸಿರುವುದಕ್ಕೆ ಭಯವಿಲ್ಲ. ನನ್ನ ಹೋರಾಟ ಹತ್ತಿಕ್ಕುವ ಷಡ್ಯಂತ್ರ ಮೊದಲಿನಿಂದ ನಡೆಯುತ್ತಿದೆ ಎಂದಿದ್ದಾರೆ.

ಆದರೆ, ಪ್ರಸಾದ್​ ಅತ್ತಾವರ ಫೋನ್​ನಲ್ಲಿ ಅನೇಕ ವಿಡಿಯೋಗಳು ಪತ್ತೆಯಾಗಿದ್ದು, ಸರಣಿ ಪ್ರಾಣಿ ಬಲಿ ನೀಡಿರುವ ವಿಡಿಯೋ ಮೊಬೈಲ್​ನಲ್ಲಿದೆ. ಅನಂತ್​ ಭಟ್​ ಎನ್ನುವವರು ಈ ವಿಡಿಯೋವನ್ನು ವಾಟ್ಸಾಪ್​ನಲ್ಲಿ ಹಂಚಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ಹರ್ಷ, ಶ್ರೀನಿಧಿ, ಸ್ನೇಹಮಯಿ ಹಾಗೂ ಗಂಗರಾಜು ಭೇಟಿ ಆಗಿದ್ದಾರೆ ಎನ್ನಲಾಗ್ತಿದೆ. ಸುಮಾ ಹಾಗೂ ಪ್ರಶಾಂತ್​ಗೆ ಹಣ ತುಂಬಿದ ಚೀಲದ ಫೋಟೋವನ್ನ ಪ್ರಸಾದ್ ಅತ್ತಾವರ ಕಳುಹಿಸಿದ್ದಾರೆ. ಡಿಸೆಂಬರ್ 9ರಂದು ಈ ವಿಡಿಯೋವನ್ನ ಶ್ರೀನಿಧಿ ಎಂಬವರು ಪ್ರಸಾದ್ ಅತ್ತಾವರಗೆ ಕಳುಹಿಸಿದ್ದಾರೆ. ಅನಂತ್ ಭಟ್​ ಎನ್ನುವವರು ಪ್ರಾಣಿ ಬಲಿ ನೀಡಿದ್ದು, ದೇವರ ಮೇಲೆ ಸ್ನೇಹಮಯಿ ಕೃಷ್ಣ, ಪ್ರಸಾದ್​ ಅತ್ತಾವರ, ಗಂಗರಾಜು, ಶ್ರೀನಿಧಿ, ಸುಮಾ ಹೆಸರು ನಮೂದು ಮಾಡಿ ಪ್ರಾಣಿ ಬಲಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತ್ ಭಟ್ ವಾಮಾಚಾರದ ದುಷ್ಟ ಪದ್ದತಿ ಆಚರಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಫೋಟೋಗೆ ಪ್ರಾಣಿಬಲಿ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಇತಿಹಾಸಕಾರ ಶಲ್ವಪಿಳ್ಳೆ ಅಯ್ಯಂಗಾರ್, ತಂತ್ರ, ಮಂತ್ರಗಳು ಪ್ರಾಣಿಬಲಿ ಹಿಂದಿನಿಂದಲೂ ಬಂದಿದೆ. ಯಾಕೆ ಮಾಡ್ತಾರೆ..? ಯಾವ ಉದ್ದೇಶಕ್ಕೆ ಮಾಡ್ತಾರೆ..? ಅನ್ನೋದು ಮಾಡಿದವರಿಗೆ ಮಾತ್ರ ಗೊತ್ತು. ನಾವು ಭಕ್ತಿ ಮಾರ್ಗದಲ್ಲಿ ನಡೆಯುವವರು. ಈ ರೀತಿ ಮಾಡಿದರೆ ದೇವರು ಒಲಿಯುತ್ತೆ ಅನ್ನೋದು ಸುಳ್ಳು. ಈಗ ಫೋಟೋ ಇಟ್ಟು ಪ್ರಾಣಿ ಬಲಿ ಕೊಟ್ಟಿದ್ದಾರೆ. ಫೋಟೋಗೆ ರಕ್ತ ಹಾಕಿದ್ದಾರೆ. ಅದು ಒಳ್ಳೆದಕ್ಕೆ ಮಾಡಿದ್ದಾರಾ..? ಕೆಟ್ಟದಕ್ಕೆ ಮಾಡಿದ್ದಾರಾ..? ಗೊತ್ತಿಲ್ಲ ಎಂದಿದ್ದಾರೆ.

Tags: ale jadu ki nishaniyanbhoot ki kahanibhoot videoBlack Magicdiwali kab haifeministsgarud puran in hindihindu mythologyhorror story in hindi
Previous Post

ನೇರಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳಿಂದ ಆರೋಗ್ಯ ಪ್ರಯೋಜನಗಳು ಏನು?

Next Post

ನಾಳೆ ಕೇಂದ್ರ ಬಜೆಟ್‌.. ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ..?

Related Posts

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ
Uncategorized

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

by ಪ್ರತಿಧ್ವನಿ
April 17, 2026
0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ಚರ್ಚೆ ಸಂಸತ್‌ನಲ್ಲಿ ತೀವ್ರಗೊಳ್ಳುತ್ತಿರುವ ನಡುವೆ, ಸದನದಲ್ಲಿ ರಾಜಕೀಯ ಗದ್ದಲದ ಜೊತೆಗೆ...

Read moreDetails
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post
ನಾಳೆ ಕೇಂದ್ರ ಬಜೆಟ್‌.. ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ..?

ನಾಳೆ ಕೇಂದ್ರ ಬಜೆಟ್‌.. ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada